ವಿಚಿತ್ರ ಹೆಸರಲ್ಲಿ ಅವಾರ್ಡ್​ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್​ ಬಾಸ್​ ವಿನ್ನರ್​ಗೆ ಏನಾಯ್ತು? | Manju Pavagada Announce New Award In raja rani kannada reality show finale


ವಿಚಿತ್ರ ಹೆಸರಲ್ಲಿ ಅವಾರ್ಡ್​ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್​ ಬಾಸ್​ ವಿನ್ನರ್​ಗೆ ಏನಾಯ್ತು?

ಮಂಜು ಪಾವಗಡ

ಮಂಜು ಪಾವಗಡ ಅವರು ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಗೆದ್ದ ಬಳಿಕ ಖ್ಯಾತಿ ದುಪಟ್ಟಾಗಿದೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಜಾ ಭಾರತ’ ಕಾರ್ಯಕ್ರಮದಲ್ಲಿ ಸಖತ್​ ಎಂಟರ್​ಟೇನ್​ಮೆಂಟ್​ ನೀಡಿದ್ದರು ಅವರು. ನಂತರ ಬಿಗ್ ಬಾಸ್​ನಲ್ಲಿಯೂ ಮನರಂಜನೆ ನೀಡುವುದನ್ನು ಮುಂದುವರಿಸಿದ್ದರು. ಆ ಶೋನ ವಿನ್ನರ್​ ಕೂಡ ಆದರು. ಬಿಗ್​ ಬಾಸ್​ನಿಂದ ಅವರಿಗೆ ದೊಡ್ಡ ಮಟ್ಟದ ಹೆಸರು ಬಂದಿದೆ. ಈಗ ಮಂಜು ಅವರು ವಿಚಿತ್ರ ಹೆಸರಲ್ಲಿ ಅವಾರ್ಡ್ ಒಂದನ್ನು ನೀಡೋಕೆ ಮುಂದಾಗಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್​ ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಏನಿದು ಸಮಾಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಅಂತ್ಯಗೊಂಡಿದೆ. ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದ ಈ ಕಾರ್ಯಕ್ರಮದ ಫಿನಾಲೆ ಭಾನುವಾರ (ನವೆಂಬರ್​ 21) ನಡೆದಿದೆ. ರಿಯಾಲಿಟಿ ಶೋ ಫಿನಾಲೆ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಅದೇ ರೀತಿ ಈ ಶೋನ ಕೊನೆಯ ಎಪಿಸೋಡ್​ ಸಖತ್​ ಗ್ರ್ಯಾಂಡ್​ ಆಗಿತ್ತು. ಈ ರಿಯಾಲಿಟಿಶೋನಲ್ಲಿ ‘ಗೊಂಬೆ’ ನೇಹಾ ಗೌಡ ಹಾಗೂ ಅವರ ಪತಿ ಚಂದನ್​ ಗೆದ್ದು ಬೀಗಿದ್ದಾರೆ. ಈ ಶೋಗೆ ಮಂಜು ಕೂಡ ಆಗಮಿಸಿದ್ದರು. ಈ ವೇಳೆ ಅವರು ತಾವು ವಿಶೇಷ ಅವಾರ್ಡ್​ ಕೊಡುವುದಾಗಿ ಘೋಷಿಸಿದರು.

‘ನಾನು ಬಿಗ್​ ಬಾಸ್​ಗೆ ಹೋಗಿ ಟ್ರೋಫಿ ತೆಗೆದುಕೊಂಡು ಬಂದೆ. ಆದರೆ, ಸಾಕಷ್ಟು ಜನರಿಗೆ ಇನ್ನೂ ಅವಾರ್ಡ್​ ಸಿಕ್ಕಿಲ್ಲ. ಅವರೆಲ್ಲರೂ ಎಲೆಮರೆಯ ಕಾಯಿ ರೀತಿ ಇದ್ದಾರೆ. ‘ನೆನಪಿಗ್​ ಇರ್ಲಿ’ ಅಂತ ಈ ಪ್ರಶಸ್ತಿಯ ಹೆಸರು’ ಎಂದರು ಮಂಜು. ಅಷ್ಟೇ ಅಲ್ಲ ‘ನೊಂದ ಗಂಡ’, ‘ಪ್ರಾಮಿಸಿಂಗ್​ ಪ್ರಿಯತಮ’ ಮತ್ತಿತ್ಯಾದಿ ವಿಭಾಗದಲ್ಲಿ ಈ ಪ್ರಶಸ್ತಿ ನೀಡುವುದಾಗಿ ಅವರು ಘೋಷಿಸಿದರು.

‘ರಾಜಾ-ರಾಣಿ’ ಗೆದ್ದ ನೇಹಾ ಗೌಡ-ಚಂದನ್

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಸಾವಿರಾರು ಕಂತುಗಳನ್ನು ಈ ಧಾರಾವಾಹಿ ಕಂಡಿದೆ. ಅಲ್ಲದೆ, ವೀಕ್ಷಕರಿಗೂ ಧಾರಾವಾಹಿ ಇಷ್ಟವಾಗಿತ್ತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾ ಗೌಡ. ಅವರು ಚಂದನ್​ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಈ ದಂಪತಿ ರಾಜಾ ರಾಣಿ ಕಿರೀಟ ಗೆದ್ದಿದ್ದಾರೆ.

ಇದನ್ನೂ ಓದಿ: ‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

TV9 Kannada


Leave a Reply

Your email address will not be published. Required fields are marked *