ವಿಚ್ಛೇದನದ ಕುರಿತು ಮೊದಲ ಬಾರಿ ಶಾಕಿಂಗ್​ ಹೇಳಿಕೆ ಕೊಟ್ಟ ಸಮಂತಾ ತಂದೆ ಜೋಸೆಫ್

ಟಾಲಿವುಡ್ ಸ್ಟಾರ್ ದಂಪತಿ ಎಂದೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು. ಆದರೆ ಇಬ್ಬರು ಯಾವ ಕಾರಣಕ್ಕೆ ದೂರವಾದ್ರು ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ವಿಚ್ಛೇದನ ಸಂದರ್ಭದಲ್ಲಿ ವೈಯುಕ್ತಿಕ ಕಾರಣಗಳೇ ವಿಚ್ಛೇದನಕ್ಕೆ ಕಾರಣ.. ಬೇರೆ ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ ವಿಚ್ಛೇದನ ಘೋಷಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಕ್ರಿಯೆ ನೀಡಿ ತಮ್ಮದೇ ಅಭಿಪ್ರಾಯಗಳನ್ನು ಕಾಮೆಂಟ್​ ಮಾಡುತ್ತಿದ್ದರು. ಕೆಲವರು ಇಬ್ಬರ ವಿಚ್ಛೇದನ ಬಗ್ಗೆ ಪಾಸಿಟಿವ್​ ಆಗಿ ಪ್ರತಿಕ್ರಿಯೆ ಮಾಡಿದ್ದರೇ, ಮತ್ತೆ ಕೆಲವರು ಸ್ಯಾಮ್​ ಕೆಲವು ಪಾತ್ರಗಳನ್ನು ಮಾಡುತ್ತಿರುವ ಕಾರಣದಿಂದಲೇ ವಿಚ್ಛೇದನ ಪಡೆದುಕೊಂಡಿದ್ದಾರೆ ತಮ್ಮ ಮನಸ್ಸಿಗೆ ಬಂದ ರೀತಿ ಹೇಳಿದ್ದಾರೆ.

ಈ ನಡುವೆ ಮಗಳ ವಿಚ್ಛೇದನದ ಬಗ್ಗೆ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ಮೌನ ಮುರಿದಿದ್ದಾರೆ. ಇಬ್ಬರ ನಡುವಿನ ವಿಚ್ಛೇದನದ ವಿಚಾರವಾಗಿ ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಈ ನಿರ್ಧಾರ ತಮಗೆ ಶಾಕ್ ನೀಡಿದರು ಕೂಡ ತನ್ನ ಮಗಳು ಬಹಳ ಆಲೋಚನೆ ಮಾಡಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದಿದ್ದಾರೆ.

ಇದನ್ನೂ ಓದಿ: ನಾಗಚೈತನ್ಯ-ಸಮಂತಾ ಮಧ್ಯೆ ಆಗಿತ್ತು ಈ ಒಪ್ಪಂದ; ಏನಿದು 200 ಕೋಟಿ ರೂ.ಜೀವನಾಂಶದ ಸತ್ಯ?

News First Live Kannada

Leave a comment

Your email address will not be published. Required fields are marked *