ವಿಚ್ಛೇದನ ಘೋಷಣೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಮಂತಾ

ಹೈದರಾಬಾದ್​: ಟಿಟೌನ್​​ ನಟ ನಾಗ ಚೈತನ್ಯ ಜೊತೆಗೆ ವಿಚ್ಛೇದನ ಘೋಷಣೆಯಾದ ಬಳಿಕ ಮೊದಲ ಬಾರಿಗೆ ನಟಿ ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ತಮ್ಮ ಮನೆಯಲ್ಲಿ ಸಾಕಿಕೊಂಡಿರುವ ನೆಚ್ಚಿನ ನಾಯಿಗಳ ಆರೋಗ್ಯ ಪರೀಕ್ಷೆಗಾಗಿ ವೈದ್ಯರ ಬಳಿ ಕರೆ ತಂದಿದ್ದು, ಈ ವೇಳೆ ಅಭಿಮಾನಿಗಳು ನಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.
ಫೋಟೋದಲ್ಲಿ ಬಿಳಿ ಶಾರ್ಟ್​​​, ನೀಲಿ ಬಣ್ಣ ಪ್ಯಾಟ್​ ಧರಿಸಿದ್ದು, ಪಾಸ್ಕ್​ ಧರಿಸಿ ಕ್ಲಿನಿಕ್​​ ಬಳಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನು ಸಮಂತಾ ಶೀಘ್ರವೇ ಟೆಲಿವಿಷನ್​​ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಟಾಲಿವುಡ್​​ ನಟ ಎನ್​​ಟಿಆರ್​ ನಡೆಸಿಕೊಡುತ್ತಿರುವ ‘ಎವರು ಮಿಲೋ ಕೋಟಿಶ್ವರುಡು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಸಣ್ಣ ಝಲಕ್​​​ ಬಿಡುಗಡೆಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಮಂತಾ ಒತ್ತಡಕ್ಕೊಳಗಾಗಿದ್ದಾರಂತೆ.

ಸ್ಟಾರ್ ದಂಪತಿಗಳು ವಿಚ್ಛೇದನ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಇಬ್ಬರು ಬೇರೆ ಬೇರೆಯಾಗಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡಿತ್ತು. ಈ ವೇಳೆ ಹಲವು ಊಹಾಪೋಹದ ಸುದ್ದಿಗಳು ಕೂಡ ಓಡಾಡಿದ್ದವು. ಆದರೆ ಈ ಬಗ್ಗೆ ಯಾವುದಕ್ಕೂ ಪ್ರತಿಕ್ರಿಯೆ ನೀಡಿದ ಇಬ್ಬರು ಮೌನಕ್ಕೆ ಜಾರಿದ್ದರು. ಆದರೆ ತಮ್ಮ ವಿರುದ್ಧ ಕೇಳಿ ಬರುತ್ತಿದ್ದ ನೆಗೆಟಿವ್​ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಮಂತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.

News First Live Kannada

Leave a comment

Your email address will not be published. Required fields are marked *