ವಿಜಯನಗರ: ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರರಿಬ್ಬರು ಮೃತಪಟ್ಟ ದುರ್ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಕ್ರಾಸ್ ಬಳಿ ನಡೆದಿದೆ.

ಶಂಕರ್ ನಾಯ್ಕ್( 30) ಪೀಕ್ಯಾನಾಯ್ಕ್( 50) ಮೃತಪಟ್ಟ ದುರ್ದೈವಿಗಳು. ಮೃತಪಟ್ಟವರು ಕೂಡ್ಲಿಗಿಯ ಗೋವಿಂದಗಿರಿ ತಾಂಡಾದಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆಂದು ಬೈಕ್​ ಮೇಲೆ ಹೋಗುತ್ತಿರುವಾಗ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎನ್ನಲಾಗಿದೆ. ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ  ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

The post ವಿಜಯನಗರದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಬೈಕ್​ ಸವಾರರು ಸಾವು appeared first on News First Kannada.

Source: newsfirstlive.com

Source link