ವಿಜಯನಗರ: ಗೂಡ್ಸ್ ರೈಲಿಗೆ ಸಿಲುಕಿ ಕುರಿಗಾಹಿ ಮತ್ತು 18 ಕುರಿಗಳ ದಾರುಣ ಸಾವು | Shepherd and 18 sheep died after crashes goods train in Vijayanagara

ವಿಜಯನಗರ: ಗೂಡ್ಸ್ ರೈಲಿಗೆ ಸಿಲುಕಿ ಕುರಿಗಾಹಿ ಮತ್ತು 18 ಕುರಿಗಳ ದಾರುಣ ಸಾವು

ರೈಲು ಡಿಕ್ಕಿ ಹೊಡೆದು ದುರ್ಘಟನೆ

ವಿಜಯನಗರ: ಚಲಿಸುವ ಗೂಡ್ಸ್ ರೈಲಿಗೆ ಸಿಲುಕಿ ಓರ್ವ ಕುರಿಗಾಹಿ ಮತ್ತು 18 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ರೈಲ್ವೆ ಗೇಟ್ ಬಳಿ ಸಂಭವಿಸಿದೆ. ಚೌಟಗಿ ರಮೇಶ್ (24) ಮೃತಪಟ್ಟ ಕುರಿಗಾಹಿ. ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಿಂದ 18ಕ್ಕೂ ಹೆಚ್ಚು ಕುರಿಗಳನ್ನು ತಂದು ಮತ್ತಿಹಳ್ಳಿ ಕ್ರಾಸ್ ಬಳಿಯ ರೈಲು ಹಳಿಗಳನ್ನು ದಾಟಿಸಿ, ಮೇಯಿಸಲೇಂದು ಕುರಿಗಾಹಿ ಚೌಟಗಿ ರಮೇಶ್ ತೆರಳುತ್ತಿರುವಾಗ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕುರಿಗಾಹಿ ಚೌಟಗಿ ರಮೇಶ ಅವರ ದೇಹ ತುಂಡು ತಂಡಾಗಿ ಅಂಗಾಂಗಗಳು ರೈಲು ಹಳಿ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಲ್ಲದೇ ಕುರಿಗಳು ಕೂಡ ಸ್ಥಳದಲ್ಲಿಯೇ ಮೃತಪಟ್ಟಿವೆ.

TV9 Kannada

Leave a comment

Your email address will not be published. Required fields are marked *