ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದೆ. ಒಂದೆಡೆ ಕೊರೊನಾ ಕಾಟವಾದ್ರೆ, ಇನ್ನೊಂದೆಡೆ ಬ್ಲ್ಯಾಕ್ ಫಂಗಸ್ ಕಾಟ ಜಿಲ್ಲೆಯಲ್ಲಿ ಹೆಚ್ಚಾಗಿದೆ.

14 ಜನರಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಒಟ್ಟು ಜಿಲ್ಲೆಯಲ್ಲಿ 81 ಜನರಿಗೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಮಾಡಿದೆ. ಕೊರೊನಾ ಹೆಮ್ಮಾರಿಯಿಂದ ಬಚಾವ್ ಆದವರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಸದ್ಯ 11 ಜನರು ಬ್ಲ್ಯಾಕ್ ಫಂಗಸ್‍ನಿಂದ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ನಾರ್ಮಲ್ ಕೋರ್ಸ್ ಮೂಲಕ ಬ್ಲ್ಯಾಕ್ ಫಂಗಸ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸರ್ಕಾರದಿಂದ ಬರಬೇಕಾದ ಔಷಧಿ ಇನ್ನು ಬಂದಿಲ್ಲ. ಅಲ್ಲಿಯವರೆಗೆ ನಾರ್ಮಲ್ ಕೋರ್ಸ್‍ನಂತೆ ಚಿಕಿತ್ಸೆ ನೀಡಲು ಸೂಚಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

The post ವಿಜಯಪುರಕ್ಕೆ ಬ್ಲ್ಯಾಕ್ ಫಂಗಸ್ ಕಾಟ- ಜನರಲ್ಲಿ ಆತಂಕ appeared first on Public TV.

Source: publictv.in

Source link