ಸಾಂದರ್ಭಿಕ ಚಿತ್ರ
ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯ ಯೂನಿಯನ್ ಬ್ಯಾಂಕ್ ಎಟಿಎಂನಲ್ಲಿ ಹಣ ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಟಿಎಂ ಬಾಗಿಲಿನ ಬೀಗ ಒಡೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ ಕೇವಲ ಬಾಗಿಲ ಬೀಗ ಮಾತ್ರ ಒಡೆದು ಹಣವನ್ನು ಎಗರಿಸಿದ್ದಾರೆ. ಎಟಿಎಂ ಒಳಗಿದ್ದ ಸುಮಾರು 16.08 ಲಕ್ಷ ನಗದು ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಎಟಿಎಂ ಯಂತ್ರದೊಳಗಿನ ನಾಲ್ಕು ಹಣದ ಪೆಟ್ಟಿಗೆಗಳು ಮಾಯವಾಗಿದ್ದು, ಈ ಘಟನೆ ಹಲವು ಸಂಶಯಗಳಿಗೆ ಕಾರಣವಾಗಿದೆ.
ಎಟಿಎಂ ಯಂತ್ರಕ್ಕೆ ಹಾನಿಯಾಗದೇ ಹಣ ಮಾಯವಾಗಿದ್ದರ ಬಗ್ಗೆ ಸಂಶಯ ಮೂಡಿದೆ. ಬ್ಯಾಂಕ್ ಸಿಬ್ಬಂದಿ, ಕಾವಲುಗಾರನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 18ರ ರಾತ್ರಿಯಿಂದ 19 ರ ನಸುಕಿನ ಜಾವದೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ. ಈ ಪ್ರಕರಣ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರು ಕುಖ್ಯಾತ ಕಳ್ಳರ ಬಂಧನ
ಬೆಂಗಳೂರಿನಲ್ಲಿ ಇಬ್ಬರು ಕುಖ್ಯಾತ ಕಳ್ಳರು ಅರೆಸ್ಟ್ ಆಗಿದ್ದಾರೆ. ಸೂರ್ಯ ಮತ್ತು ರಾಜಕುಮಾರ ಬಂಧಿತ ಆರೋಪಿಗಳು. ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದು, 437 ಗ್ರಾಂ ಚಿನ್ನಾಭರಣ, 4 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಬಿಎಂಟಿಸಿ ಬಸ್ಗಳನ್ನ ಟಾರ್ಗೆಟ್ ಮಾಡಿ ಬಸ್ನಲ್ಲಿ ನೂಕು ನುಗ್ಗಲು ಮಾಡುತ್ತಿದ್ದರು. ನಂತರ ಕತ್ತು ಹಾಗೂ ಬ್ಯಾಗ್ನಲ್ಲಿದ್ದ ಚಿನ್ನ ಎಗರಿಸುತ್ತಿದ್ದರು.
ಇದನ್ನೂ ಓದಿ
ಶಾರ್ಟ್ಸ್ ಹಾಕಿಕೊಂಡು ಹೋದ ಗ್ರಾಹಕನನ್ನು ಒಳಗೆ ಬಿಡದ ಬ್ಯಾಂಕ್ ಸಿಬ್ಬಂದಿ; ಎಸ್ಬಿಐ ಕೊಟ್ಟ ಸ್ಪಷ್ಟನೆ ಏನು?