ಜಮೀನುಗಳಿಗೆ ಡೋಣಿ ನದಿ ಪ್ರವಾಹದ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

ಡೋಣಿ ನದಿ ಪ್ರವಾಹ
ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ (flood) ಮುಂದುವರೆದಿದ್ದು, ಪ್ರವಾಹದಲ್ಲಿ ತಾಳಿಕೋಟೆ ಬಳಿಯ ಹಳೆಯ ಸೇತುವೆ ಮುಳುಗಿದೆ. ಹಳೆಯ ಸೇತುವೆ ಮೇಲೆ 7 ರಿಂದ 8 ಅಡಿಯಷ್ಟು ನೀರು ಹರಿಯುತ್ತಿದೆ. ರಾಜ್ಯ ಹೆದ್ದಾರಿ 61 ರಲ್ಲಿ ಸಂಚಾರ ಬಂದ್ ಆಗಿದೆ. ವಿಜಯಪುರ ತಾಳಿಕೋಟೆ ಹಾಗೂ ಇತರ ಭಾಗಗಳ ಸಂಪರ್ಕ ಕಡಿತವಾಗಿದ್ದು, 50 ಕ್ಕೂ ಆಧಿಕ ಕಿಲೋ ಮೀಟರ್ ಸುತ್ತು ಹಾಕೋ ಅನಿವಾರ್ಯತೆ ಎದುರಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟು ವಾಲಿದ ಕಾರಣ ಅದರ ಮೇಲೆ ಸಂಚಾರ ನಿಷೇಧ ಮಾಡಲಾಗಿದೆ. ಆದರು ಅಪಾಯವನ್ನೂ ಲೆಕ್ಕಿಸದೇ ಶಿಶಿಲವಾದ ಸೇತುವೆ ಮೇಲೆ ಜನರು ಓಡಾಡುತ್ತಿದ್ದಾರೆ. ಡೋಣಿ ನದಿ ಪ್ರವಾಹದಿಂದಾಗಿ ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದ್ದು, ದೇವರಿಗೂ ಜಲದಿಗ್ಭಂಧನವೆನ್ನುವಂತ್ತಾಗಿದೆ. ದೇವಸ್ಥಾನದ ಅರ್ಧ ಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದ್ದು, ಆಂಜನೇಯ ದೇವರ ಮೂರ್ತಿಯ ಭಾಗ ನೀರಲ್ಲಿ ಮುಳುಗಿದೆ. ಪೂಜೆ ಪುನಸ್ಕಾರಗಳಿಗೂ ಪ್ರವಾಹ ಬ್ರೇಕ್ ಹಾಕಿದೆ.