ವಿಜಯಪುರ: ಜಿಲ್ಲೆಯ ಸಲಾದಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ಅನ್ಯಜಾತಿಯ ಹುಡುಗನನ್ನು ಮಗಳು ಪ್ರೀತಿಸುತ್ತಿದ್ದಾಳೆಂಬ ಕಾರಣಕ್ಕೆ ಕುಟುಂಬ ಜೋಡಿ ಕೊಲೆ ಮಾಡಿದ ಆರೋಪವಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಲಾಗಿದೆ.

ಆರೋಪಿಗಳನ್ನ ಇಂದು ವಿಜಯಪುರ ಆಟ್ರಾಸಿಟಿ ವಿಶೇಷ ಕೋರ್ಟ್​ಗೆ ಪೊಲೀಸರು ಹಾಜರು ಪಡೆಸಿದ್ದರು. ಎಲ್ಲಾ ಆರೋಪಿಗಳನ್ನು ಜುಲೈ 09ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ವಿಜಯಪುರ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಮರ್ಯಾದ ಹತ್ಯೆ.. ಮಟ ಮಟ ಮಧ್ಯಾಹ್ನ ನಡೀತು ಡಬಲ್ ಮರ್ಡರ್

A1 ಲಾಳೇಸಾಬ್ ವಲ್ಲಿಬಾಯಿ, A2 ಅಲ್ಲಾಪಟೇಲ್, A3 ರಫೀಕ್, ಯುವತಿ ಅಣ್ಣ A4 ದಾವಲ್‌ಪಟೇಲ್, ಯುವತಿ ತಂದೆ A5 ಬಂದಗಿಸಾಬ್ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ದೇವರಹಿಪ್ಪರಗಿ ತಾ. ಸಲಾದಹಳ್ಳಿಯಲ್ಲಿ ಈ ಮರ್ಯಾದಾ ಹತ್ಯೆ ಪ್ರಕರಣ ನಡೆದಿದ್ದು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ಯುವತಿ ತಂದೆ ಹಾಗೂ ಕುಟುಂಬ ಪ್ರೇಮಿಗಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪ ಕೇಳಿಬಂದಿತ್ತು.

The post ವಿಜಯಪುರ ಅವಮರ್ಯಾದಾ ಹತ್ಯೆ ಕೇಸ್: ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ appeared first on News First Kannada.

Source: newsfirstlive.com

Source link