ವಿಜಯಪುರ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್​ಪೋಸ್ಟ್; ತಪಾಸಣೆ ನಡೆಸದೆ ಸಿಬ್ಬಂದಿ ನಿರ್ಲಕ್ಷ್ಯ | There is no inspection between Karnataka and Maharastra border in Vijayapura


ವಿಜಯಪುರ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್​ಪೋಸ್ಟ್; ತಪಾಸಣೆ ನಡೆಸದೆ ಸಿಬ್ಬಂದಿ ನಿರ್ಲಕ್ಷ್ಯ

ಚೆಕ್​ಪೋಸ್ಟ್ ಸಮೀಪದ ದೃಶ್ಯ

ವಿಜಯಪುರ: ಕೊರೊನಾ (Corona) ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ (Omicron Virus) ಭೀತಿಯ ಕಾರಣ ರಾಜ್ಯದ ಗಡಿಭಾಗಗಳಲ್ಲಿ ಚೆಕ್​ಪೋಸ್ಟ್ ಸ್ಥಾಪಿಸಲಾಗಿದೆ. ವಿಜಯಪುರದಿಂದ (Vijayapura) ಮಹಾರಾಷ್ಟ್ರವನ್ನು (Maharastra) ಸಂಪರ್ಕಿಸುವ 11 ರಸ್ತೆಗಳಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಚೆಕ್ ಪೋಸ್ಟ್ ಸ್ಥಾಪಿಸಿದೆ. ಆದರೆ ಹೆಸರಿಗೆ ಮಾತ್ರ ಚೆಕ್ ಪೋಸ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ಚೆಕ್​​ಪೋಸ್ಟ್​ಗಳಿದ್ದರೂ ನೆರೆಯ ಮಹಾರಾಷ್ಟ್ರದಿಂದ ವಿಜಯಪುರ ನಗರದತ್ತ ಗಣನೀಯ ಪ್ರಮಾಣದಲ್ಲಿ ಜನರು ಆಗಮಿಸುತ್ತಿದ್ದಾರೆ. ಆದರೆ ಚೆಕ್ ಪೋಸ್ಟ್​​ಗಳಲ್ಲಿ (Check Post) ಯಾವುದೇ ತಪಾಸಣೆ ಮಾಡದೆ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿಯಿರುವ ಚೆಕ್ ಪೋಸ್ಟ್​​ನಲ್ಲಿ ತಪಾಸಣೆ ನಡೆಸಲಾಗುತ್ತಿಲ್ಲ. ಕಂದಾಯ, ಆರೋಗ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಚೆಕ್​ ಪೋಸ್ಟ್​ನಲ್ಲಿ ಗೈರಾಗಿದ್ದಾರೆ. ಜನರು ಯಾವುದೇ ಅಂಜಿಕೆಯಿಲ್ಲದೇ ಮಹಾರಾಷ್ಟ್ರದಿಂದ ಓಡಾಡುತ್ತಿದ್ದಾರೆ. ಕೊರೊನಾ ಎರಡೂ ಲಸಿಕೆ ಹಾಕಿಸಿಕೊಂಡವರಿಗೆ ಅಥವಾ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

Vijayapura check post no check

ಚೆಕ್​ಪೋಸ್ಟ್ ಸಮೀಪದ ದೃಶ್ಯ

ಎರಡೂ ಡೋಸ್ ವ್ಯಾಕ್ಸಿನ್ ಅಥವಾ, ನೆಗೆಟಿವ್ ರಿಪೋರ್ಟ್ ಇರದವರಿಗೆ ಕರ್ನಾಟಕ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಚೆಕ್​ಪೋಸ್ಟ್​​ಗಳಲ್ಲಿ ತಪಾಸಣೆ ಮಾಡುವವರೇ ಮಾಯವಾಗಿದ್ದಾರೆ. ಕೆಲ ಸಮಯದ ಬಳಿಕ ಚೆಕ್ ಪೋಸ್ಟ್​​ನತ್ತ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೆಪ‌ ಮಾತ್ರಕ್ಕೆ ತಪಾಸಣೆ ನಡೆಸುತ್ತಿದ್ದಾರೆ.

ಇಲಾಖೆಗಳ ನಿರ್ಲಕ್ಷದಿಂದ ಗಡಿ ಭಾಗಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚೆಕ್​ಪೋಸ್ಟ್​ಗಳಲ್ಲಿ ಕಠಿಣ ನಿಯಮ ಪಾಲನೆಯಾಗಬೇಗದೇ, ಅವುಗಳನ್ನು ನಿರ್ಲಕ್ಷಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಕುರಿತು ಗಮನ ಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *