ವಿಜಯ್​ಗೆ ಅಮೆರಿಕದಲ್ಲೂ ಗೌರವ..‘ನೀವು ನಮ್ಮ ಹೃದಯಲ್ಲಿ ಇರ್ತಿರಿ’ ಎಂದ ಜನಪ್ರಿಯ ಥಿಯೇಟರ್

ವಿಜಯ್​ಗೆ ಅಮೆರಿಕದಲ್ಲೂ ಗೌರವ..‘ನೀವು ನಮ್ಮ ಹೃದಯಲ್ಲಿ ಇರ್ತಿರಿ’ ಎಂದ ಜನಪ್ರಿಯ ಥಿಯೇಟರ್

ಬೈಕ್ ಆಕ್ಸಿಡೆಂಟ್​​ನಲ್ಲಿ ಇಹಲೋಕ ತ್ಯಜಿಸಿರೋ ಸಂಚಾರಿ ವಿಜಯ್ ಅವರಿಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಭಾವಪೂರ್ವಕವಾದ ಗೌರವ ಸಿಕ್ಕಿದೆ.

ಅಮೆರಿಕಾ ವಿಶ್ವವಿಖ್ಯಾತ ಹೆಸರಾಂತ ಫ್ರಾಂಕ್ಲಿನ್ ಥಿಯೇಟರ್​​​​ ಮುಖಪುಟದ ಗೋಡೆಯ ಮೇಲೆ ಕನ್ನಡ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರು ರಾರಾಜಿಸಿದೆ.

ನೀವು ಯಾವಾಗಲು ನಮ್ಮ ಹೃದಯಲ್ಲಿ ಇರ್ತಿರಿ ಎಂಬುವ ಸಾಲುಗಳನ್ನ ಫ್ರಾಂಕ್ಲಿನ್ ಥಿಯೇಟರ್​​​ ಮೇಲೆ 24 ಗಂಟೆಗಳ ಕಾಲ ಪ್ರದರ್ಶನ ಮಾಡಿ ಸಂಚಾರಿ ವಿಜಯ್ ಕಲಾ ಸೇವೆಗೆ ಗೌರವ ಸೂಚಿಸಲಾಗಿದೆ.

ಈ ಗೌರವ ಸೂಚಕ ವಿಚಾರವನ್ನ ನಿರ್ದೇಶಕ ಹಾಗೂ ಸಂಚಾರಿ ವಿಜಯ್ ಅವರ ಆತ್ಮೀಯ ಬಳಗದಲ್ಲೊಬ್ಬರಾದ ಬಿ.ಎಸ್.ಲಿಂಗದೇವರು ಸೋಶಿಯಲ್ ಮಿಡಿಯಾದಲ್ಲಿ ಪ್ರಕಟಿಸಿದ್ದಾರೆ. ​ಅನಿವಾಸಿ ಭಾರತೀಯ ರವಿ ಕಶ್ಯಪ್ ಅವರ ಸಹಾಕರದ ಮೇರೆಗೆ ಸಂಚಾರಿ ವಿಜಯ್ ಅವರ ಹೆಸರು ಹೆಸರಾಂತ ಫ್ರಾಂಕ್ಲಿನ್ ಥಿಯೇಟರ್​​​ನ ಮೇಲೆ ರಾರಾಜಿಸಿದೆ.

The post ವಿಜಯ್​ಗೆ ಅಮೆರಿಕದಲ್ಲೂ ಗೌರವ..‘ನೀವು ನಮ್ಮ ಹೃದಯಲ್ಲಿ ಇರ್ತಿರಿ’ ಎಂದ ಜನಪ್ರಿಯ ಥಿಯೇಟರ್ appeared first on News First Kannada.

Source: newsfirstlive.com

Source link