‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್ಗಳು ಇರಲಿವೆ.

ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಇಡೀ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ದೇಶದ ಮೂಲೆಮೂಲೆಗೆ ಈ ಸಿನಿಮಾ ತಲುಪಬೇಕು ಎಂಬುದು ಚಿತ್ರತಂಡದ ಆಲೋಚನೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರ ಈಗ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯವರು ‘ಲೈಗರ್ಗೆ’ (Liger Movie) U/A ಪ್ರಮಾಣಪತ್ರ ನೀಡಿದ್ದಾರೆ. ಯಾವ ದೃಶ್ಯಕ್ಕೂ ಕತ್ತರಿ ಹಾಕುವಂತೆ ಸೂಚಿಸಿಲ್ಲ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಜತೆಗೆ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿವೆ ಎನ್ನಲಾಗಿದೆ.
‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್ಗಳು ಇರಲಿವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈಗಾಗಲೇ ಹಲವು ಹಾಡುಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ. ಹಾಡುಗಳ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಸೆನ್ಸಾರ್ ಮಂಡಳಿಯವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್ ದೃಶ್ಯಗಳು, ಹೀರೋ ಕ್ಯಾರೆಕ್ಟರೈಸೇಷನ್, ಡೈಲಾಗ್ ಡೆಲಿವರಿ, ತಾಯಿ ಸೆಂಟಿಮೆಂಟ್ ಎಲ್ಲವೂ ವರ್ಕ್ ಆಗಿದೆ ಎಂಬುದು ಸೆನ್ಸಾರ್ ಮಂಡಳಿಯವರ ಅಭಿಪ್ರಾಯ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಸದಸ್ಯರು ಮೆಚ್ಚುಗೆ ಸೂಚಿಸಿದ್ದಾರೆ.
#LIGER – U/A – 2 Hrs & 20 Mins
First Half: 1 Hour & 15 Minutes
Second Half: 1 Hour & 5 Minutes
— Aakashavaani (@TheAakashavaani) August 5, 2022