ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ | Gopalakrishna on Death Threat Murder Threat against BJP MLA SR Vishwanath


ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ

ಶಾಸಕ ಎಸ್ ಆರ್ ವಿಶ್ವನಾಥ್, ವಿಶ್ವನಾಥ್ ವಿರುದ್ಧ ಸೋತಿದ್ದ ಗೋಪಾಲಕೃಷ್ಣ

ಬೆಂಗಳೂರು: ನಗರದ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ವಿರುದ್ಧದ ಯಾವುದೇ ಸಂಚು ಆರೋಪ ಸುಳ್ಳು. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳೂ ಸುಳ್ಳು. ಇಂತಹವನ್ನು ಮಾಡುವ ಐಡಿಯಾ ಇರೋದು ಶಾಸಕರಿಗೆ. ನಮಗೆ ಇಂತಹ ಕ್ರಿಮಿನಲ್ ಐಡಿಯಾಗಳು ಬರಲ್ಲ. ಕುಳ್ಳ ದೇವರಾಜ್- ಶಾಸಕ ವಿಶ್ವನಾಥ್ ಕಾಲ್ ಲಿಸ್ಟ್ ತೆಗೆಸಲಿ. 3 ತಿಂಗಳ ಕಾಲ್ ಲಿಸ್ಟ್ ತೆಗೆಸಿದರೆ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

8 ಎಕರೆ ಜಮೀನು ವಿಚಾರದಲ್ಲಿ ಶಾಸಕರಿಂದ ತೊಂದರೆ ಆಗಿದೆ. ಹೀಗೆಂದು ಹೇಳಿಕೊಂಡು ಕುಳ್ಳ ದೇವರಾಜ್ ಬಂದಿದ್ದ. ಆ ವಿಡಿಯೋದಲ್ಲಿ ಕೆಲವು ಸತ್ಯ, ಕೆಲವು ಫೇಕ್ ಇರಬಹುದು. ಕಡಬಗರೆ ಸೀನ ಶೂಟೌಟ್​ ಕೇಸ್​ ಬಗ್ಗೆ ಸಿಬಿಐ ತನಿಖೆಯಾಗಲಿ. ನನ್ನ ತೇಜೋವಧೆ ಮಾಡಲು ಶಾಸಕರಿಂದ ಇಂತಹ ಕೃತ್ಯ ಮಾಡಲಾಗಿದೆ. ಕುಳ್ಳ ದೇವರಾಜ್ ವಿರುದ್ಧ ನಾನು ದೂರು ದಾಖಲಿಸುತ್ತೇನೆ. ಕುಳ್ಳ ದೇವರಾಜ್ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುವೆ. ಜಮೀನು ವಿಚಾರಕ್ಕೆ 5 ಲಕ್ಷ ತಂದು 2 ಲಕ್ಷ ವಾಪಸ್ ಪಡೆದಿದ್ದ. ಯಲಹಂಕ ಕ್ಷೇತ್ರದಲ್ಲಿ ರೌಡಿಗಳ ಚಟುವಟಿಕೆ ಜಾಸ್ತಿ ಆಗಿದೆ. ನನಗೆ ಭದ್ರತೆ ನೀಡಲು ಗೃಹಸಚಿವರಿಗೆ ಮನವಿ ಮಾಡುವೆ. ನನಗೂ ಪೊಲೀಸ್ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಇದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇದ್ದರೆ ಸಾಬೀತುಪಡಿಸಲಿ ಎಂದು ಹೇಳಿದ್ದಾರೆ.

ಸೇಠ್​ ಜಮೀನು ವಿಚಾರದಲ್ಲಿ ಕುಳ್ಳ ದೇವರಾಜ್ ಬಂದಿದ್ದ. ಈ ವಿಚಾರ ಬಿಟ್ಟರೆ ಅವನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಶಾಸಕ ವಿಶ್ವನಾಥ್​​ಗೂ ನನಗೂ ಯಾವುದೇ ವ್ಯವಹಾರವಿಲ್ಲ. ನಾನು ಯಾವುದೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿಲ್ಲ. ಕೋರ್ಟ್ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದೇನೆ. ವಿಡಿಯೋದಲ್ಲಿ ಇರುವುದು ಶೇ.80 ರಷ್ಟು ಭಾಗ ಫೇಕ್​ ಎಂದು ಬೆಂಗಳೂರಿನಲ್ಲಿ ಗೋಪಾಲಕೃಷ್ಣ ತಿಳಿಸಿದ್ದಾರೆ.

ನಾನು ಯಾರ ಹತ್ಯೆಗೂ ಸುಪಾರಿ ನೀಡಿಲ್ಲ. ಸುಪಾರಿ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸೇಠ್​ ಜಮೀನು ವಿಚಾರಕ್ಕೆ ಕುಳ್ಳ ದೇವರಾಜ್ ಬಂದಿದ್ದ. ಇಂತಹ ಫೇಕ್​ ಮಾಡುತ್ತಾನೆಂದು ಯಾರಿಗೆ ಗೊತ್ತಿತ್ತು. ಬಿಜೆಪಿ ಶಾಸಕ ವಿಶ್ವನಾಥ್ ಬಲಗೈ ಭಂಟ ಕುಳ್ಳ ದೇವರಾಜ್ ಎಂದು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ: ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು; ಹತ್ಯೆಗೆ ಸ್ಕೆಚ್ ಆರೋಪ ಸಂಬಂಧಿಸಿ ಎಸ್ಆರ್ ವಿಶ್ವನಾಥ್ ಸುದ್ದಿಗೋಷ್ಠಿ

ಇದನ್ನೂ ಓದಿ: ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್! ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ವಿಡಿಯೋ ಬಹಿರಂಗ

TV9 Kannada


Leave a Reply

Your email address will not be published. Required fields are marked *