ಟೀಮ್​ ಇಂಡಿಯಾದ ಬೆಂಚ್​ ಸ್ಟ್ರೇಂಥ್​ ಹೆಚ್ಚಿರೋದು ತಂಡಕ್ಕೆ ಪ್ಲಸ್​ ಆದ್ರೆ, ಆಟಗಾರರ ಪಾಲಿಗೆ ಇದೇ ಮೈನಸ್​ ಪಾಯಿಂಟ್​ ಆಗಿದೆ. ಪೈಪೋಟಿಯಲ್ಲಿ ಆಟಗಾರರು ಕಳೆದು ಹೋಗ್ತಾರೆ ಅನ್ನೋದಕ್ಕೆ, ಈ ಆಟಗಾರ ಬೆಸ್ಟ್​ ಎಕ್ಸಾಂಪಲ್​. ಎರಡೂವರೆ ವರ್ಷದ ಹಿಂದೆ ತಂಡದ ಅವಿಭಾಜ್ಯ ಅಂಗವಾಗಿದ್ದ ಈತ, ಇದೀಗ ಸೈಲೆಂಟ್​ ಆಗಿ ರಿಟೈರ್​ಮೆಂಟ್​ ಪ್ಲಾನ್​ ಮಾಡ್ತಿದ್ದಾರೆ.

ಒಂದೆರಡು ವೈಫಲ್ಯಗಳು ಅಥವಾ ಒಂದು ಇಂಜುರಿ ಆಟಗಾರರನ ಕರಿಯರ್​ಗೆ ಫುಲ್​ ಸ್ಟಾಪ್​ ಇಟ್ಟಿದೆ. ಈ ಪ್ರಕರಣಕ್ಕೆ ಕೇವಲ ಎರಡೂವರೆ ವರ್ಷದ ಹಿಂದಿನ ಸ್ಟಾರ್​ ಬ್ಯಾಟ್ಸ್​ಮನ್ ಆಗಿದ್ದ​ ತಮಿಳುನಾಡಿನ ಮುರಳಿ ವಿಜಯ್​​ ಬೆಸ್ಟ್​ ಎಕ್ಸಾಂಪಲ್​.

ಪೈಪೋಟಿಯಲ್ಲಿ ಕಳೆದು ಹೋದ ತಮಿಳುನಾಡು ಬ್ಯಾಟ್ಸ್​ಮನ್​!
ಅದು 2018ರ ಆಸ್ಟ್ರೇಲಿಯಾ ಪ್ರವಾಸ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಕಂಡ ಮುರಳಿ ವಿಜಯ್​, ನಂತರದ 2 ಪಂದ್ಯಗಳಲ್ಲಿ ಬೆಂಚ್​​ಗೆ ಸೀಮಿತವಾದ್ರು. ಇಷ್ಟೇ ಅಲ್ಲ.. ಆ 4 ಇನ್ನಿಂಗ್ಸ್​ಗಳ ವೈಫಲ್ಯ ಕರಿಯರ್​​ಗೆ ಫುಲ್​ ಸ್ಟಾಫ್​ ಇಡ್ತು. ಯಾಕಂದ್ರೆ, ವಿಜಯ್​ ವೈಫಲ್ಯದ ಫಲವಾಗಿ ಇನ್ನಿಂಗ್ಸ್​ ಆರಂಭಿಸೋ ಅವಕಾಶ ಪಡೆದ ಮಯಾಂಕ್​ ಅಗರ್ವಾಲ್‌ ಸಕ್ಸಸ್​ ಕಂಡರು. ಮಯಾಂಕ್​ ಮಾತ್ರವಲ್ಲ.. ಇನ್ನೊಂದು ತುದಿಯಲ್ಲಿ ರಾಹುಲ್​ ಕೂಡ ಭರವಸೆಯ ಆಟವಾಡಿದ್ರು.

ಆ ಪ್ರವಾಸದ ಬಳಿಕ ಆರಂಭಿಕ ಸ್ಥಾನದ ಪೈಪೋಟಿ ಹೆಚ್ಚಾಯ್ತು. ಮಯಾಂಕ್​, ರಾಹುಲ್​ ಜೊತೆಗೆ ರೋಹಿತ್​ ಕೂಡ ರೇಸ್​ಗೆ ಎಂಟ್ರಿ ಕೊಟ್ರು. ಬಳಿಕ ಪೃಥ್ವಿ ಶಾ, ಶುಭ್​ಮನ್​ಗಿಲ್​ ಆ ಪೈಪೋಟಿಯನ್ನ ಮತ್ತಷ್ಟು ಹೆಚ್ಚಿಸಿದ್ರು. ಇದು ವಿಜಯ್​ ಸ್ಥಾನಕ್ಕೆ ಕುತ್ತು ತಂದಿತು. ಅಂತರಾಷ್ಟ್ರೀಯ ಪಂದ್ಯದಲ್ಲಿ ಮಾತ್ರವಲ್ಲ! ಐಪಿಎಲ್​ನಲ್ಲೂ ಯುವ ಆಟಗಾರರ ಪೈಪೋಟಿಯಲ್ಲಿ ಮುರುಳಿ ವಿಜಯ್​ ಕಳೆದುಹೋದ್ರು. 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧದ ಪಂದ್ಯವೇ ವಿಜಯ್​ ಆಡಿದ ಸ್ಪರ್ಧಾತ್ಮಕ ಪಂದ್ಯ.

ನಿವೃತ್ತಿ ಹೇಳಲು ಸಜ್ಜಾದ್ರಾ ಮುರಳಿ ವಿಜಯ್​?
ಅವಕಾಶದ ಕೊರತೆಯ ಬಳಿಕ ದೇಶಿ ಕ್ರಿಕೆಟ್​​ನಲ್ಲೂ ವಿಜಯ್​ ಕಾಣಿಸಿಕೊಳ್ಳಲೇ ಇಲ್ಲ. ಇದೀಗ 5ನೇ ಆವೃತ್ತಿ ಟಿಎನ್​ಪಿಲ್​ನಲ್ಲಿ ಮುರಳಿ ವಿಜಯ್​ ಆಡ್ತಾರೆ ಅನ್ನೋ ಸುದ್ದಿ ಹೊರಬಿದ್ದಿತ್ತು. ಆದ್ರೆ, ಇದೀಗ ತಮಿಳುನಾಡು ಪ್ರೀಮಿಯರ್​ ಲೀಗ್​ನಿಂದಲೂ ವಿಜಯ್​ ಹೊರ ನಡೆಯೋ ನಿರ್ಧಾರ ಕೈಗೊಂಡಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಇದರೊಂದಿಗೆ 37 ವರ್ಷದ ತಮಿಳುನಾಡು ಬ್ಯಾಟ್ಸ್​ಮನ್​ ಎಲ್ಲಾ ಮಾದರಿಗೂ ವಿದಾಯ ಘೋಷಿಸ್ತಾರೆ ಅನ್ನೋ ಚರ್ಚೆ ಆರಂಭವಾಗಿದೆ.

The post ವಿದಾಯ ಹೇಳಲು ಸಜ್ಜಾದ್ರಾ ಮುರಳಿ ವಿಜಯ್? ರೇಸ್​​​​ನಲ್ಲಿ ಹಿಂದೆ ಬಿದ್ದಿದ್ಯಾಕೆ? appeared first on News First Kannada.

Source: newsfirstlive.com

Source link