ನವದೆಹಲಿ: ವಿದೇಶಗಳಲ್ಲಿದ್ದ ಭಾರತೀಯರ ಪೈಕಿ 4 ಸಾವಿರದ 48 ಮಂದಿ ಕೊರೊನಾ ಮಹಾಮಾರಿಗೆ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನ ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದೆ.
ಸೌದಿ ಅರೇಬಿಯಾದಲ್ಲಿ ಅತಿಹೆಚ್ಚು, ಅಂದ್ರೆ ಸಾವಿರದ 154 ಭಾರತೀಯರು ಕೊರೊನಾದಿಂದ ಪ್ರಾಣತೆತ್ತಿದ್ದಾರೆ. ಇನ್ನು ಯುಎಇಯಲ್ಲಿ 894 ಭಾರತೀಯರು, ಕುವೈತ್ನಲ್ಲಿ 668 ಹಾಗೂ ಒಮಾನ್ ದೇಶದಲ್ಲಿ 551 ಭಾರತೀಯರು ಕೊರೊನಾದಿಂದ ಮೃತಪಟ್ಟಿದ್ದಾರೆ ಅಂತಾ ಮಾಹಿತಿ ನೀಡಲಾಗಿದೆ.
ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ಒದಗಿಸಿದ ಅಧಿಕೃತ ಮಾಹಿತಿ ಪ್ರಕಾರ, 75 ದೇಶಗಳಲ್ಲಿ ಭಾರತೀಯರು ಮೃತಪಟ್ಟಿದ್ದಾರೆ.