ವಿದೇಶಗಳಿಂದ ಬೆಂಗಳೂರಿಗೆ ಇಂದು 2,634ಕ್ಕೂ ಹೆಚ್ಚು ಜನ ಆಗಮನ; ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 43 ಸಿಬ್ಬಂದಿ ನಿಯೋಜನೆ | More than 2634 people from high risk countries will arrive in Bangalore today


ವಿದೇಶಗಳಿಂದ ಬೆಂಗಳೂರಿಗೆ ಇಂದು 2,634ಕ್ಕೂ ಹೆಚ್ಚು ಜನ ಆಗಮನ; ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 43 ಸಿಬ್ಬಂದಿ ನಿಯೋಜನೆ

ಆರ್ಟಿಪಿಸಿಆರ್ ಪರೀಕ್ಷೆ ಮಾಡಲು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿದ್ಧತೆ ನಡೆದಿದೆ

ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ಆತಂಕದ ನಡುವೆ ಇಂದು (ನ.5) ರಾಜ್ಯಕ್ಕೆ ಸಾವಿರಾರು ವಿದೇಶಿ ಪ್ರಯಾಣಿಕರು ಆಗಮಿಸಲಿದ್ದಾರೆ. ಹೈರಿಸ್ಕ್ ದೇಶಗಳು ಸೇರಿದಂತೆ ವಿದೇಶಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡಲು ಏರ್​ಪೋರ್ಟ್​ನಲ್ಲಿ ಸುಮಾರು 43 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 19 ವಿಮಾನಗಳಲ್ಲಿ 2,634ಕ್ಕೂ ಹೆಚ್ಚು ಜನ ಆಗಮಿಸಲಿದ್ದು, ವಿದೇಶದಿಂದ ಬರುವ ಎಲ್ಲರಿಗೂ ಟೆಸ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ.

ದೋಹ, ಶಾರ್ಜಾ, ಮಲೈ, ದುಬೈ, ಮಸ್ಕಟ್, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಂದ 19 ವಿಮಾನಗಳು ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಲಿವೆ. ಎಲ್ಲಾ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಟ್ಟಿರುವ ಆರೋಗ್ಯ ಇಲಾಖೆ, ಟೆಸ್ಟ್ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಆರ್​ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಟೆಸ್ಟ್ ರಿಸಲ್ಟ್ ಬರುವವರೆಗೂ ವೈಟಿಂಗ್ ರೂಂಮಲ್ಲಿ ಕೂರಿಸಲಾಗುವುದು.

ಫ್ರೀ ವೈ-ಫೈ ವ್ಯವಸ್ಥೆ
ವಿಮಾನ ನಿಲ್ದಾಣದಲ್ಲಿ ಅಲರ್ಟ್ ಮಾಡಲಾಗಿದೆ. ಕೊವಿಡ್ ಟೆಸ್ಟ್ ಮಾಡುವುದಕ್ಕೆ 4 ಪ್ರತ್ಯೇಕ ಕೌಂಟರ್ ಓಪನ್ ಮಾಡಲಾಗಿದೆ. ಟೆಸ್ಟ್ ವರದಿ ಬರುವವರೆಗೂ ಪ್ರಯಾಣಿಕರು ಕಾಯಬೇಕು. ಹೀಗಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ  ಪ್ರಯಾಣಿಕರು ಸಮಯ ಕಳೆಯಲು ಫ್ರೀ ವೈ-ಫೈ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ ಅಂತರ ಪಾಲಿಸಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *