ಬೆಂಗಳೂರು: ವ್ಯಾಸಂಕಗಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಾಳೆ ಬೆಂಗಳೂರಿ ಸಿಟಿ ವಿವಿ ಕ್ಯಾಂಪಸ್​ನಲ್ಲಿ ಮಧ್ಯಾಹ್ನದಿಂದ ಈ ವಿದ್ಯಾರ್ಥಿಗಳಿಗೆ ಲಸಿಕೆ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೇ ಹಾಲು ಸಹಕಾರ ಸಂಘದ ಸಿಬ್ಬಂದಿ ಮತ್ತು ಕೇಬಲ್ ಆಪರೇಟರ್​ಗಳನ್ನೂ ಆದ್ಯತೆಯ ಗುಂಪಿಗೆ ಸೇರಿಸಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಇತ್ತೀಚೆಗೆ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿದೇಶಕ್ಕೆ ವ್ಯಾಸಂಗಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ತುರ್ತಾಗಿ ವ್ಯಾಕ್ಸಿನ್ ನೀಡಬೇಕು. ವ್ಯಾಕ್ಸಿನ್ ಪಡೆಯದ ಹಿನ್ನೆಲೆ ವಿದ್ಯಾರ್ಥಿಗಳಿಗೆ ವಿದೇಶಗಳಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಒತ್ತಾಯಿಸಿದ್ದರು.

The post ವಿದೇಶಗಳಿಗೆ ವ್ಯಾಸಾಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ನಾಳೆ ವ್ಯಾಕ್ಸಿನೇಷನ್.. ಎಲ್ಲಿ..? appeared first on News First Kannada.

Source: newsfirstlive.com

Source link