ನಾಲ್ಕು ವರ್ಷದ ಹಿಂದೆ ಕರ್ನಾಟಕ ಕಟೌಟ್.. ಆದ್ರೆ ಈಗ ಆಲ್ ಇಂಡಿಯಾ ಕಟೌಟ್.. ಮೇಬಿ ಏಪ್ರಿಲ್ 14ರ ನಂತರ ವರ್ಲ್ಡ್ವೈಡ್ ಸ್ಟಾರ್ ಆದ್ರು ಆಗಬಹುದು.. ನಾನು ಯಾರ್ ಬಗ್ಗೆ ಹೇಳ್ತಿದ್ದೀನಿ ಅಂತ ಯೋಚಿಸ್ತಿದ್ದಿರಾ? ರಾಕಿಂಗ್ ಸ್ಟಾರ್ ಯಶ್ ಬಗ್ಗೆ.. ಯಾಕಪ್ಪ ಅಂದ್ರೆ ಒಂದು ವಿಡಿಯೋ ಸಿಕ್ಕಿದೆ ನಮಗೆ.. ಆ ವಿಡಿಯೋದಲ್ಲಿ ಯಶ್ಗೆ ದುಬೈನಲ್ಲಿ ಫ್ಯಾನ್ಸ್ ಇದ್ದಾರೆ.. ಅವಱರು ನಮ್ಮ ದೇಶದವರಲ್ಲ.. ಹೆಂಗೆ ಇದೆಲ್ಲ ಅನ್ನೋರು ಈ ಸ್ಟೋರಿ ಓದ್ಲೇ ಬೇಕು..
ಏಳು ಸಮುದ್ರ ದಾಟಿಬಿಡ್ತು ಕೆಜಿಎಫ್ ಚಾಪ್ಟರ್ 1.. ಎಲ್ಲಾ ಭಾಷೆಗೂ ಸಲ್ಲುವ ಎಲ್ಲಾ ಪ್ರೇಕ್ಷಕರಿಗೆ ಹಿಡಿಸುವ ಸಿನಿಮಾ ಕೆಜಿಎಫ್ ಮೊದಲನೇ ಅಧ್ಯಾಯವಾಗಿದೆ.. ಈ ಸಿನಿಮಾ ಎಲ್ಲಿಂದು ಅಂತ ಯೋಚಿಸದೆ ಕೆಜಿಎಫ್ನ ಪ್ರತಿಯೊಂದು ಸೀನ್ ಅನ್ನ ಅನ್ಯ ಭಾಷೆಯ ಮಂದಿ ಅಷ್ಟೆ ಅಲ್ಲ ಅನ್ಯ ದೇಶಗಳ ಮಂದಿಯೂ ಮನಸಾರೆ ಮೆಚ್ಚಿದ್ದಾರೆ ಮುಂದಿನ ಭಾಗದ ಕೆಜಿಎಫ್ಗಾಗಿ ಕಾದಿದ್ದಾರೆ..
ಕೆಜಿಎಫ್ ಚಾಪ್ಟರ್ 1 ಡಿಸೆಂಬರ್ 21 ತಾರೀಖಿಗೆ 2018 ರಲ್ಲಿ ನಮ್ಮ ದೇಶದಲ್ಲಿ ರಿಲೀಸ್ ಆಯ್ತು.. ಆದ್ರೆ ಒಂದು ದಿನ ಮುಂಚಿತವಾಗಿಯೇ ಬೇರೆ ಬೇರೆ ದೇಶಗಳಲ್ಲಿ ಕೆಜಿಎಫ್ ಭಾಗ 1 ರಿಲೀಸ್ ಆಗಿತ್ತು. ನಮ್ಮ ಕನ್ನಡ ಸಿನಿಮಾ ಕ್ರೇಜ್ ಎಷ್ಟರ ಮಟ್ಟಿಗೆ ಹಬ್ಬಿದೆ ಅಂದ್ರೆ ನೋಡಿದವರೆಲ್ಲ ಸಲಾಂ ರಾಕಿ ಭಾಯ್ ಎಂದಿದ್ದಾರೆ..
ದುಬೈನಲ್ಲಿ ಕೆಜಿಎಫ್ ರಾಕಿ ಭಾಯ್ ಅಭಿಮಾನಿ!
ದೂರದ ದೇಶ ದುಬೈಗೆ ಕೆಲಸಕ್ಕಾಗಿ ಏಷ್ಯ ಖಂಡದ ನಾನಾ ದೇಶಗಳ ಮಂದಿ ಹೋಗ್ತಾರೆ. ಅವರುಗಳಲ್ಲಿ ನಮ್ಮ ಭಾರತದವರು ಪಾಕಿಸ್ತಾನದವರು ಹಾಗೂ ಬಾಂಗ್ಲಾದೇಶದವರು ಹೆಚ್ಚು ಮಂದಿ.. ದುಬೈನಲ್ಲಿ ಕನ್ನಡತಿಯೊಬ್ಬರು ಬಾಂಗ್ಲಾದೇಶದ ಇಬ್ಬರು ಕೆಲಸಗಾರಿಗೆ ಮಾತನಾಡಿಸುವಾಗ ನಾವು ರಾಕಿ ಭಾಯ್ ಫ್ಯಾನ್ ಎಂದಿದ್ದಾರೆ.. ಕೆಜಿಎಫ್ ಸಿನಿಮಾವನ್ನ ಲೆಕ್ಕವಿಲ್ಲದಷ್ಟು ನೋಡಿದ್ದೇವೆ. ಎರಡನೇ ಕೆಜಿಎಫ್ಗಾಗಿ ಕಾದಿದ್ದೇವೆ ಅಂತ ಅಭಿಮಾನದಿಂದ ಮಾತನಾಡಿದ್ದಾರೆ.
ಹೀಗೆ ನಮ್ಮ ನಾಡಿನ ಕೆಜಿಎಫ್ ಸಿನಿಮಾದ ಖ್ಯಾತಿ ಎಷ್ಟು ದೂರ ಹಬ್ಬಿದೆ ಅಂತ ತಿಳಿತಲ್ಲ. ಪ್ರಶಾಂತ್ ನೀಲ್ ಸಾರಥ್ಯದ ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಂಬಾಳೆ ಫಿಲಂಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಈ ವರ್ಷದ ಏಪ್ರಿಲ್ ತಿಂಗಳ 14ನೇ ತಾರೀಖು ರಿಲೀಸ್ ಆಗಲಿದ್ದು ಕನ್ನಡ ಸಿನಿಮಾ ಖ್ಯಾತಿ ಮತ್ತಷ್ಟು ಹೆಚ್ಚಾಗಲಿದೆ.
The post ವಿದೇಶಿಗರಿಗೂ ಯಶ್ ಅಂದ್ರೆ ಎಲ್ಲಿಲ್ಲದ ಇಷ್ಟ.. ದುಬೈನಲ್ಲಿ ರಾಕಿ ಭಾಯ್ ಹವಾ ಹೇಗಿದೆ ಗೊತ್ತಾ..? appeared first on News First Kannada.