ವಿದೇಶಿ ಟಿ20 ಲೀಗ್​ ಮೇಲೆ ಒಲವು; ದೇಶದ ಪರ ಟಿ20 ವಿಶ್ವಕಪ್ ಆಡಲು ನಿರಾಕರಿಸಿದ ಕಿವೀಸ್ ಕ್ರಿಕೆಟರ್..! | T20 World Cup 2022 James Neesham declines New Zealand central contract to play in T20 Leagues around the World


James Neesham: ಕೇಂದ್ರ ಒಪ್ಪಂದವನ್ನು ತೊರೆಯುವ ನನ್ನ ನಿರ್ಧಾರದಿಂದಾಗಿ, ನಾನು ದೇಶಕ್ಕಿಂತ ಹಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ನನಗೆ ತಿಳಿದಿದೆ.

ಕಿವೀಸ್ ಕ್ರಿಕೆಟ್ ಮಂಡಳಿ (New Zealand Cricket Board) ಹಾಗೂ ತಂಡದ ಆಟಗಾರರ ನಡುವಿನ ಸಂಬಂಧ ಅಷ್ಟಾಗಿ ಅನ್ಯೋನ್ಯವಾಗಿಲ್ಲ ಎಂದು ಕಾಣಿಸುತ್ತದೆ. ಏಕೆಂದರೆ ಕೆಲ ಸಮಯದ ಹಿಂದೆ ತಂಡದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಬೌಲ್ಟ್ ಬಳಿಕ ಇದೀಗ ಆಲ್ ರೌಂಡರ್ ಜೇಮ್ಸ್ ನೀಶಮ್ (James Neesham) ಕೂಡ ಕೇಂದ್ರ ಒಪ್ಪಂದದಿಂದ ದೂರ ಸರಿದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಕಿವೀಸ್ ತಂಡಕ್ಕೆ (New Zealand Cricket Team) ಇದು ದೊಡ್ಡ ಹಿನ್ನಡೆಯಾಗಿದೆ. ನೀಶಮ್ ಅವರ ಈ ನಿರ್ಧಾರವನ್ನು ನೆಟ್ಟಿಗರು ಟೀಕಿಸಲು ಆರಂಭಿಸಿದ್ದಾರೆ. ಆದರೆ ನೀಶಮ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, ತಮ್ಮ ನಿರ್ಧಾರದ ಹಿಂದಿನ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

ನೀಶಮ್ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಲಿಲ್ಲ

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಜುಲೈನಲ್ಲಿ 2022-23 ಸೀಸನ್‌ಗಾಗಿ ಆಟಗಾರರ ಕೇಂದ್ರ ಒಪ್ಪಂದದ ಬಗ್ಗೆ ಮಾಹಿತಿ ನೀಡಿತ್ತು. ಒಪ್ಪಂದದ ಪಟ್ಟಿಯಲ್ಲಿ ಒಟ್ಟು 20 ಆಟಗಾರರನ್ನು ಸೇರಿಸಲಾಗಿತ್ತು, ಆದರೆ ಜೇಮ್ಸ್ ನೀಶಮ್ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ನೀಶಮ್​ಗೆ ಒಪ್ಪಂದದ ಪಟ್ಟಿಯಲ್ಲಿ ಸ್ಥಾನ ಇಲ್ಲದಿರುವುದಕ್ಕೆ ಪ್ರಮುಖ ಕಾರಣ ವಿದೇಶಿ ಟಿ20 ಲೀಗ್​ಗಳು. ಈ ಕಿವೀಸ್ ಆಟಗಾರ ಹಲವು ದೇಶಗಳಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಆಡಲು ಆಸಕ್ತಿ ತೋರಿರುವುದರಿಂದ ದೇಶದ ಪರ ಕ್ರಿಕೆಟ್ ಆಡಲು ನಿರಾಕರಿಸಿದ್ದಾರೆ.

ಟಿ20 ಲೀಗ್‌ಗಳಲ್ಲಿ ಆಡುವೆ

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಬರೆದು ಎಲ್ಲದಕ್ಕೂ ಉತ್ತರಿಸಿರುವ ನೀಶಮ್, ‘ಕೇಂದ್ರ ಒಪ್ಪಂದವನ್ನು ತೊರೆಯುವ ನನ್ನ ನಿರ್ಧಾರದಿಂದಾಗಿ, ನಾನು ದೇಶಕ್ಕಿಂತ ಹಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ನನಗೆ ತಿಳಿದಿದೆ. ಜುಲೈ ತಿಂಗಳಲ್ಲಿ ಒಪ್ಪಂದದ ಪ್ರಸ್ತಾಪ ಬರಲಿದೆ ಎಂದು ಭಾವಿಸಿದ್ದ ನಾನು ಸಹಿ ಹಾಕುವುದಕ್ಕೂ ಸಿದ್ದನಿದ್ದೆ. ಆದರೆ, ಆಗ ನನ್ನನ್ನು ಒಪ್ಪಂದದ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಅದಕ್ಕಾಗಿಯೇ ನಾನು ಇತರ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ನಿರ್ಧರಿಸಿದೆ. ಇದು ನನಗೆ ಕಠಿಣ ನಿರ್ಧಾರವಾಗಿತ್ತು. ನ್ಯೂಜಿಲೆಂಡ್ ಪರ ಆಡಿದ್ದು ನನ್ನ ವೃತ್ತಿ ಜೀವನದ ದೊಡ್ಡ ಸಾಧನೆ ಎಂದಿದ್ದಾರೆ.

ಕೇಂದ್ರ ಒಪ್ಪಂದಕ್ಕೆ ಸಹಿ ಹಾಕದ ಬೋಲ್ಟ್

ಜೇಮ್ಸ್ ನೀಶಮ್​ಗೂ ಮೊದಲು, ತಂಡದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸಹ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಈ ಹಿಂದೆ ಬೋಲ್ಟ್ ನಿವೃತ್ತಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ನಂಬಲಾಗಿತ್ತು. ಆದರೆ ನಂತರ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಪಷ್ಟನೇ ನೀಡಿದರು. ನನ್ನ ಹೆಂಡತಿ ಗೆರ್ಟ್ ಮತ್ತು ನಮ್ಮ ಮೂವರು ಮಕ್ಕಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬೋಲ್ಟ್ ಹೇಳಿದ್ದರು. ನನ್ನ ಈ ಸಾಧನೆಗೆ ನನ್ನ ಕುಟುಂಬವೇ ನನ್ನ ದೊಡ್ಡ ಪ್ರೇರಕವಾಗಿದೆ. ಹೀಗಾಗಿ ನಾನು ಯಾವಾಗಲು ನನ್ನ ಕುಟುಂಬಕ್ಕೆ ಮೊದಲ ಆಧ್ಯತೆ ನೀಡುತ್ತೇನೆ. ಅಲ್ಲದೆ ಕ್ರಿಕೆಟ್ ನಂತರದ ಜೀವನಕ್ಕೆ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ ಎಂದು ಬೋಲ್ಟ್ ಹೇಳಿಕೊಂಡಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.