ವಿದೇಶಿ ಪಿತೂರಿ ನಡೆದಿಲ್ಲ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ತಳ್ಳಿದ ಪಾಕಿಸ್ತಾನ | National Security Committee of the Pakistan cabinet dismisses former prime minister Imran Khan’s claim


ವಿದೇಶಿ ಪಿತೂರಿ ನಡೆದಿಲ್ಲ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ತಳ್ಳಿದ ಪಾಕಿಸ್ತಾನ

ಇಮ್ರಾನ್ ಖಾನ್

ಇಸ್ಲಾಮಾಹಾದ್: ತಮ್ಮ ಸರ್ಕಾರವನ್ನು ಉರುಳಿಸಲು ವಿದೇಶಿ ಪಿತೂರಿ ನಡೆದಿದೆ ಎಂಬ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಆರೋಪವನ್ನು ಪಾಕಿಸ್ತಾನ ಕ್ಯಾಬಿನೆಟ್‌ನ ರಾಷ್ಟ್ರೀಯ ಭದ್ರತಾ ಸಮಿತಿ (National Security Committee)  ಶುಕ್ರವಾರ ತಳ್ಳಿಹಾಕಿದೆ. ಶುಕ್ರವಾರದ ಸಭೆಯು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೊದಲು, ಇಮ್ರಾನ್ ಖಾನ್​​  ಪದಚ್ಯುತಗೊಂಡರು. ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಕ್ರಮವು ಪೂರ್ವಯೋಜಿತವಾದುದು. ಇದರ ಹಿಂದೆ ಅಮೆರಿಕದ ಷಡ್ಯಂತ್ರ ಇದೆ ಎಂದು ಖಾನ್ ಆರೋಪಿಸಿದ್ದರು. ಮಾಜಿ ರಾಯಭಾರಿ ಅಮೆರಿಕದ ರಾಯಭಾರಿಯೊಂದಿಗೆ ಮಾತನಾಡಿದ್ದು, ಅಮೆರಿಕ ಇಮ್ರಾನ್ ಖಾನ್ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ, ವಿಶೇಷವಾಗಿ ರಷ್ಯಾ- ಉಕ್ರೇನ್ ಯುದ್ಧ ಆರಂಭವಾದ ಹೊತ್ತಲ್ಲಿ ಖಾನ್ ಮಾಸ್ಕೋಗೆ ಭೇಟಿ ನೀಡಿದ್ದರ ಬಗ್ಗೆ ಅಮೆರಿಕ ಖಾನ್ ಮೇಲೆ ಅಸಮಾಧಾನಗೊಂಡಿತ್ತು ಎಂದು ಅವರು ಹೇಳಿದ್ದರು. ಶುಕ್ರವಾರದ ಸಭೆಯಲ್ಲಿ ಟೆಲಿಗ್ರಾಮ್‌ನ ವಿಷಯದ ಬಗ್ಗೆ ಮತ್ತೆ ಚರ್ಚಿಸಲಾಯಿತು ಮತ್ತು ವಿದೇಶಿ ಪಿತೂರಿಯ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸಲಾಯಿತು. “ಯಾವುದೇ ಪಿತೂರಿಯ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಎನ್‌ಎಸ್‌ಸಿಗೆ ಪ್ರಧಾನ ಭದ್ರತಾ ಏಜೆನ್ಸಿಗಳು ಮತ್ತೊಮ್ಮೆ ತಿಳಿಸಿವೆ” ಎಂದು ಹೇಳಿಕೆ ತಿಳಿಸಿದೆ. “ಯಾವುದೇ ವಿದೇಶಿ ಪಿತೂರಿ ನಡೆದಿಲ್ಲ” ಎಂದು ಸಭೆಯು ತೀರ್ಮಾನಿಸಿತು. ಏತನ್ಮಧ್ಯೆ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇಮ್ರಾನ್ ಖಾನ್ ಅವರ ಸಾರ್ವಜನಿಕ ರ್ಯಾಲಿಗಳಲ್ಲಿ ಬಿಗಿ ಭದ್ರತೆಗೆ ಆದೇಶಿಸಿದ್ದಾರೆ. ಅವರು ಸರ್ಕಾರದಿಂದ ಹೊರಹಾಕಲ್ಪಟ್ಟ ನಂತರ ಅವರು ಭಾಷಣ ಮಾಡುತ್ತಿದ್ದಾರೆ. ವಿದೇಶಿ ಪಿತೂರಿಯ ಹೊರತಾಗಿ, ಇಮ್ರಾನ್ ಖಾನ್​​ಗೆ ಜೀವ ಬೆದರಿಕೆ ಇದೆ ಎಂದು ಪಿಟಿಐ ಪಕ್ಷ ಹೇಳಿತ್ತು.

ಶುಕ್ರವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದಲ್ಲಿ ಪಾಕಿಸ್ತಾನದ ಮಾಜಿ ರಾಯಭಾರಿ ಅಸದ್ ಮಜೀದ್ ಖಾನ್ ಅವರಿಂದ ಸಂದೇಶ ಸ್ವೀಕರಿಸಿರುವುದಾಗಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ. ಆಗಿನ ರಾಯಭಾರಿಯು ತನ್ನ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಯುಎಸ್ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ನಡುವೆ ನಡೆದ ಆಪಾದಿತ ಸಂಭಾಷಣೆಯ ಬಗ್ಗೆ ಪಾಕಿಸ್ತಾನಕ್ಕೆ ಸಂದೇಶ ಕಳುಹಿಸಿದ್ದರೂ, ಮಜೀದ್ ಅವರ ವಿದಾಯ ಊಟದ ಸಮಯದಲ್ಲಿ ಸಂಭಾಷಣೆ ನಡೆದಿದೆ. ಇದರಲ್ಲಿ ಇಮ್ರಾನ್ ಖಾನ್ ಹೇಳಿಕೊಂಡ ಬೆದರಿಕೆಯ ಧ್ವನಿಯನ್ನು ಹೊತ್ತಿಲ್ಲ.

TV9 Kannada


Leave a Reply

Your email address will not be published.