ವಿದೇಶಿ ಮದುಮಗಳ ಫೋಟೋ ಸಖತ್ ವೈರಲ್; ಯಾಕೆ ಈಕೆಯನ್ನ ಜನ Like ಮಾಡ್ತಿದ್ದಾರೆ ಗೊತ್ತಾ..?


ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಂತೆ ಇದೀಗ ನೆಟ್ಟಿಗರನ್ನ ವಿದೇಶಿ ಮದುಮಗಳೊಬ್ಬಳು ಗಮನ ಸೆಳೆಯುತ್ತಿದ್ದಾಳೆ. ವಿದೇಶಿಯರಾಗಿದ್ದರೂ ದೇಸಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡಿರೋದು ಎಲ್ಲರ ಅಟ್ರ್ಯಾಕ್ಸನ್. ಹೀಗಾಗಿ ಆಕೆಯನ್ನ ಎಲ್ಲರೂ ಮೆಚ್ಚಿ ಹೊಗಳುತ್ತಿದ್ದಾರೆ.

ಅಂದ್ಹಾಗೆ ವೈರಲ್ ಆಗುತ್ತಿರುವ ಮಹಿಳೆಯ ಹೆಸರು ರಿಯಾನಾನ್ ಹ್ಯಾರಿಸ್. ಈಕೆ ಭಾರತೀಯ ಮೂಲದ ವ್ಯಕ್ತಿಯನ್ನ ಮದುವೆ ಆಗಿದ್ದಾರೆ. ವರನೊಂದಿಗೆ ಕೆಂಪು ಲೆಹೆಂಗಾದಲ್ಲಿ ದೇಸಿ ವಧುವಿನಂತೆ ಕಂಗೊಳಿಸುತ್ತಿರುವ ಈ ವಿದೇಶಿ ಮಹಿಳೆ, ಟ್ವಿಟರ್‌ನಲ್ಲಿ ಮದುವೆಯ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಫೋಟೊದಲ್ಲಿ ರಿಯಾನನ್ ಕೆಂಪು ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಭಾರತೀಯ ವಧುವಿನಂತೆಯೇ ಸೊಗಸಾದ ಆಭರಣಗಳನ್ನು ಧರಿಸಿದ್ದರು. ದಕ್ಷಿಣ ಏಷ್ಯಾದ ಡೆಪ್ಯುಟಿ ಟ್ರೇಡ್ ಕಮಿಷನರ್ ಆಗಿರುವ ಹ್ಯಾರಿಸ್ ಅವರು ಟ್ವೀಟರ್​ನಲ್ಲಿ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

4 ವರ್ಷಗಳ ಹಿಂದೆ ನಾನು ಭಾರತಕ್ಕೆ ಬಂದಾಗ ಒಂದಷ್ಟು ಕನಸುಗಳನ್ನ ಕಂಡೆ. ನನ್ನ ಜೀವನದ ಪ್ರೀತಿಯನ್ನು ಭೇಟಿಯಾಗುತ್ತೇನೆ ಮತ್ತು ಮದುವೆಯಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ರಿಯಾನನ್ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *