ಶೀ ಜಿನ್ಪಿಂಗ್. ಎಲ್ಲರಿಗೂ ಗೊತ್ತಿರೊ ಹಾಗೆ  ಚೀನಾ ರಾಷ್ಟ್ರದ ಅಧ್ಯಕ್ಷ. ಮೇಲ್ನೋಟಕ್ಕೆ ಅಧ್ಯಕ್ಷನಾಗಿ ಒಳ್ಳೆ ಕೆಲಸಗಳನ್ನು ಮಾಡುತ್ತಾ,  ಚೀನಿಯರ ಮನ ಗೆದ್ದಿದ್ದಾರೆ ಅನ್ಸುತ್ತೆ.. ಚೀನಾವನ್ನು ನಮ್ಮ ವೈರಿಗಳು ಏನು ಮಾಡಲು ಆಗುವುದಿಲ್ಲ. ಚೈನಾದ ಬಳಿ 1.4 ಬಿಲಿಯನ್ ಜನರ ಬೆವರು ಮತ್ತು ಮಾಂಸದಿಂದ ಕಟ್ಟಿದ ಗಟ್ಟಿ ಗೋಡೆಯಿದೆ. ಇದನ್ನು ಭೇದಿಸಿ ಬರುವವರು ಯಾರು ಇಲ್ಲ.. ನಮ್ಮ ತಂಟೆಗೆ ಬಂದ್ರೆ ಮುಗೀತು.. ಹೀಗೆ ಅಧ್ಯಕ್ಷ ಏನೋ ತಮ್ಮನ್ನು ಕಾಪಾಡಿ ಬಿಡುತ್ತಾರೆ ಎನ್ನವ ನಂಬಿಕೆ ಹುಟ್ಟುವ ಭಾಷಣಗಳನ್ನು ಆಗ್ಗಾಗೆ ಮಾಡ್ತಾನೆ ಇರ್ತಾರೆ. ಆದ್ರೆ ಜಿನ್ಪಿಂಗ್ ರವರ ಕಮ್ಯುನಿಷ್ಟ್ ಆಡಳಿತ ಮಾಡುತ್ತಿರುವ ಅವಾಂತರಗಳು ಕೇಳಿದರೆ ಶಾಕ್ ಆಗ್ತಿರ..

ಕಮ್ಯುನಿಸ್ಟ್ ಸಿದ್ಧಾಂತವನ್ನು ಮರೆತರಾ ಜಿನ್​ಪಿಂಗ್ ?
ಡಿಕ್ಟೇಟರ್​ಶಿಪ್ ನತ್ತ ಮುಖ ಮಾಡಿದ್ದಾರ ಚೀನಾ ಅಧ್ಯಕ್ಷ ?

ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬಂದು 100 ವರ್ಷ ಆಗಿದೆ.. ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದು 72 ವರ್ಷಗಳಾಗಿವೆ. ಆದರೆ ಹಿಂದೆಂದೂ ಈ ರೀತಿಯ ಆಡಳಿತವನ್ನು ಚೀನಿಯರು ನೋಡಿರಲಿಲ್ಲ ಅನ್ಸುತ್ತೆ.  ಅಷ್ಟಕ್ಕೂ ಬಹು ಸಂಖ್ಯರಿರುವ ಈ ರಾಷ್ಟ್ರಕ್ಕೆ ಕಮ್ಯುನಿಸ್ಟ್ ಸಿದ್ದಾಂತಗಳು ಸರಿ ಹೊಂದುತ್ತಾ ಅನ್ನೋ ಪ್ರಶ್ನೆ , ಶೀ ಜಿನ್ಪಿಂಗ್ ರವರ ಆಡಳಿತ ನೋಡಿದರೆ ಅನುಮಾನವು ಶುರುವಾಗುತ್ತೆ. ಭಾರತ, ಅಮೆರಿಕಾದಂತಹ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿದೆ. ಅದರಲ್ಲೂ ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಚೀನಾ 1949 ರಿಂದ ಕಮ್ಯುನಿಸ್ಟ್ ಆಡಳಿತವನ್ನ ಆಯ್ಕೆ ಮಾಡಿಕೊಂಡಿದೆ. 2013 ರಿಂದ ಚೀನಾದ ಆಡಳಿತವನ್ನು ವಹಿಸಿಕೊಂಡಿರುವ ಶೀ ಜಿನ್ಪಿಂಗ್ ಒಂದಾದ ಮೇಲೊಂದರಂತೆ ಹೊಸ ಬದಾಲವಣೆಗಳನ್ನು ತರ್ತಿರೋದು ಹಾಗೂ ದೇಶದಲ್ಲಿನ ದೌರ್ಜನ್ಯ, ಬಡತನ, ಸಾವು-ನೋವಿನ ಸುದ್ದಿಗಳು ಹೊರ ಬಾರದಂತೆ ಹತ್ತಿಕ್ಕುತ್ತಿರೋ ವಿಚಾರಗಳು ಚೀನಿಯರ ನಿದ್ದೆ ಗೆಡಿಸಿವೆ. ಇದಕ್ಕೆ ಸಾಕ್ಷಿಯಗಿ ಕೇವಲ ಎರಡು ಬಾರಿ ಅಧ್ಯಕ್ಷರಾಗ ಬೇಕು ಎನ್ನುವ ಸಿದ್ದಾಂತವನ್ನು ಬದಲಿಸಿರೋದು,  ದೇಶದ ಭದ್ರತೆ ಹೆಸರಿನಲ್ಲಿ ದೇಶದಲ್ಲಾಗುತ್ತಿರುವ ಬೆಳವಣೆಗಳನ್ನು ಮುಚ್ಚಿಡಲು ಯತ್ನಿಸುತ್ತಿರುವುದು ನೇರವಾಗಿ ಕಮ್ಯುನಿಸ್ಟ್ ಸಿದ್ದಾಂತದಿಂದ ಡಿಕ್ಟೇಟರ್ ಶಿಪ್ ಕಡೆಗೆ ಮುಖ ಮಾಡುತ್ತಿದ್ಯಾ? ಅನ್ನೊದು ಸಹಜ ಕುತೂಹಲವೂ ಆಗಿ ಹೋಗಿದೆ.

ಮುಂಚಿನಿಂದಲೂ ಹೀಗೆ ನಡೆದಿತ್ತಾ ಪವರ್ ದುರುಪಯೋಗ ?

ಕಾರ್ಲ್ ಮಾರ್ಕ್ ರೂಡಿಸಿಕೊಟ್ಟ ಸಿದ್ದಾಂತವನ್ನು ಕಮ್ಯುನಿಸ್ಟ್ ಸಿದ್ದಾಂತವೆಂದು ತಿಳಿಯಲಾಗಿದೆ. ಇದನ್ನೆ ಚೀನಿಯರು 1921ರಿಂದ ಪಾಲಿಸಿಕೊಂಡು ಬಂದಿರೋದು. ಆದರೆ ಇದಕ್ಕೆ ಹಲವು ಬದಲಾವಣೆಗಳನ್ನು ಸೇರಿಸಿ ಮುನ್ನುಗುತ್ತಾ ಇದೆ.  ಚೈನಾ ಕಮ್ಯುನಿಸ್ಟ್ ಪಾರ್ಟಿ ಸ್ಥಾಪಕ ಮಾವ್ ಜಿದೋಂಗ್ ತನ್ನ ಹೇಳಿಕೆಯಲ್ಲಿ ರಾಜಕಾರಣದ ಶಕ್ತಿ ಬಲಗೊಳ್ಳಬೇಕಾದರೆ ಅದು ಬಂದೂಕದಿಂದ ಮಾತ್ರ ಸಾಧ್ಯ ಎನ್ನುವ ಹೇಳಿಕೆ ಗಮನಿಸಿದರೆ, ಈ ಚೀನಾ ರಾಜಕಾರಣದಲ್ಲಿ ದಯೆ ಅನ್ನುವುದು ಇಲ್ಲವೇನೋ ಅನ್ನಿಸಿ ಬಿಡುತ್ತೆ. ಅದೆ ಮಾರ್ಗವಾಗಿ ಚಲಿಸುತ್ತಿರುವ ಶೀ. ಜಿನ್ಪಿಂಗ್ ತನಗೆ ಸಿಕ್ಕಿರುವ ಪವರ್ ಅನ್ನು, ತನಗೆ ಅನುಕೂಲವಾಗುವಂತೆ ಬದಲಿಸುತ್ತಾ ದುರುಪಯೋಗ ಮಾಡ್ತಾ ಇದ್ದಂತೆ ತೋರುತ್ತದೆ. 1983ರಿಂದ ಇತ್ತಿಚೆಗೆ ಚೈನಾದಲ್ಲಿ 4 ನೇ ಸಂವಿಧಾನ ಚಾಲ್ತಿಯಲ್ಲಿರೋದು. ಈ ಹಿಂದೆ 4 ನೇ ಸಂವಿಧಾನಕ್ಕೆ 4 ಅಧ್ಯಕ್ಷರು ಬಂದು ಹೋಗಿದ್ದಾಗಿದೆ. ಅವಱರು ಅಧ್ಯಕ್ಷ ಸ್ಥಾನಕ್ಕೆ ಇರುವ ನಿರ್ಭಂದಗಳಿಗೆ ಕೈ ಹಾಕಿರಲಿಲ್ಲ.. ಆದ್ರೆ ಜಿನ್ಪಿಂಗ್ ನಿಧಾನವಾಗಿ ಎಲ್ಲವನ್ನು ಬದಲಿಸುತ್ತಿರೊದು, ಸರ್ವಾಧೀಕಾರ ಪಡೆಯುವ ಹೆಬ್ಬಯಕೆ ಇರುವಂತಿದೆ.

100 ವರ್ಷವಾದರೂ ಏನು ಬದಲಾವಣೆ ಕಂಡಿಲ್ಲ !
ತನ್ನ ಮಾತುಗಳಿಂದ ಹಳೆ ನಾಯಕರನ್ನು ಮರೆಸುವ ಪ್ರಯತ್ನ 

ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದು ನೂರು ವರ್ಷ ಯಶಸ್ವಿಯಾಗಿದೆ ಎಂದು, ದೊಡ್ಡ ಸಂಭ್ರಮಾಚರಣೆಯನ್ನೆ ಕೈಗೊಂಡರು ಜಿನ್ಪಿಂಗ್.  ಇದು ನಿಜಕ್ಕೂ ದೊಡ್ಡ ಮಟ್ಟಗಿನ ಯಶಸ್ಸು ಎಂದು ಹಲವರು ಇದರಲ್ಲಿ ಭಾಗಿಯಾದರು. ಆದರೆ ಇದರ ಹಿಂದಿರುವ ಅಸಲಿ ಅಂಶಗಳೆ ಬೇರೆ.. ಚೀನಾ ಅಧ್ಯಕ್ಷ ನಿಜಕ್ಕೂ ಬಹಳ ಬುದ್ಧಿವಂತ.. ಈತ ನಿಂತು ಭಾಷಣ ಮಾಡ್ತಾ ಇದ್ರೆ ಚೀನಿಯರ ಮೈ ನವಿರೇಳುತ್ತೆ. ಆದ್ರೆ ಭಾಷಣ, ಇಮೇಜ್​ ಮೇಕ್​ ಓವರ್ ವಾಸ್ತವವನ್ನ ಕಟ್ಟಿ ಹಾಕಲಾಗವು.. ತಾನೇ ಸರ್ವಾಧಿಕಾರಿ ಆಗಬೇಕು ಅನ್ನೋ ಹುಮ್ಮಸ್ಸಿನಲ್ಲಿರೋ ಶಿ.. ಆಡಳಿತದಲ್ಲಿ ಚೀನಾ ಹಿಂದೆಂದೂ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ..

ಕರುಗುತ್ತಿದೆ ಚೀನಾದ ಶ್ರೀಮಂತಿಕೆ
ಕಳೆದ 9 ವರ್ಷಗಳಿಂದ ಜಿಡಿಪಿಯೂ ಕುಸಿತ

ಜಿನ್ಪಿಂಗ್ ಆಡಳಿತಕ್ಕೆ ಬಂದಾಗ ಚೀನಾದ ಜಿಡಿಪಿ ಶೇಕಡ 7.7 ರಷ್ಟಿತ್ತು. ಅದೀಗ ನಿರಂತರವಾಗಿ ಕುಸಿಯುತ್ತಾ 2020ರಲ್ಲಿ ಶೇಕಡ 2.27 ಕ್ಕೆ ಬಂದು ನಿಂತಿದೆ. ಇದನ್ನು ಗಮನಿಸಿದರೆ ನೀವೆ ಹೇಳ್ಬೋದು., ಚೀನಾದಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೊದು.

ಚೀನಾ ಸೋಲ್ತಿರೋದಕ್ಕೆ ಕಾರಣಗಳೇನು?

ಕಾರಣ 1: ಚೀನಾ ಅಂದ್ರೆ ಕಾಪಿ.. ಸ್ವಂತದ್ದೇನು ಇಲ್ಲ..!

ಮೇಡ್ ಇನ್ ಚೈನಾ ವಸ್ತುಗಳ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಅದು ಇತ್ತ ಬ್ರಾಂಡೆಡ್ ಆಗದೆ, ಅತ್ತ ತೀರ ಕಳಪೆನೂ ಆಗದೆ ನಮ್ಮಲ್ಲೆ ಓಡಾಡ್ತಾ ಇರುತ್ತೆ. ನೀವು ಗಮನಿಸಿದರೆ ಈ ಚೀನಾ ಪ್ರಾಡೆಕ್ಟ್ ಗಳಿಗೆ ಹೇಳಿಕೊಳ್ಳುವ ಬ್ರಾಂಡ್ಸ್ ಇಲ್ಲ. ಚೈನಾ ಮಾಡಲ್ ಅಂತ ನಾವೇ ಹೆಸರಿಸ್ಕೊಂಡ್ ಇರ್ತಿವಿ. ಇನ್ನು ಚೈನಾ ತನ್ನ ಹೊಸ ಬ್ರಾಂಡ್ ಸೃಷ್ಟಿಸೊ ಗೋಜಿಗೆ ಹೋಗಿಲ್ಲ. ಯಾವುದಾದರು ಹೆಸರಾಂತ ಕಂಪನಿಗಳ ವಸ್ತುಗಳನ್ನ ಕಾಪಿ ಮಾಡೋದು.. ಅಗ್ಗದ ದರಕ್ಕೆ ಮಾರೋದು.. ಚೀನಾದ ಅಸಲಿ ಮುಖ.. ಆದ್ರೆ ಚೀನಾದ ಈ ಆಟ ಈಗ ನಡೆಯುತ್ತಿಲ್ಲ.. ಚೀನಾ ವಸ್ತುಗಳ ಬೇಡಿಗೆ ಗಣನೀಯವಾಗಿ ವಿಶ್ವಾದ್ಯಂತ ಕುಸಿಯುತ್ತಿದೆ.. ಅದ್ರಲ್ಲೂ ಕೊರೊನಾ ಬಂದ ನಂತರವಂತೂ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ.. ಅಷ್ಟೇ ಅಲ್ಲ ಚೀನಾದಲ್ಲಿ ವಿದೇಶಿ ಕಂಪನಿಗಳು ಭಾರತ ಸೇರಿದಂತೆ ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶಿಫ್ಟ್ ಆಗ್ತಿವೆ.. ವಿದೇಶಿ ಹೂಡಿಕೆ ಸಹ ಗಣನೀಯವಾಗಿ ಕುಸಿದಿದೆ..

ಕಾರಣ 2: ಸಾಲಕ್ಕೆ ಸಾಲ ಪಡೆಯುವ ಪರಿಸ್ಥಿತಿ

ಚೀನಾ ತನ್ನ ಜಿಡಿಪಿ ಮೇಲೆ ಶೇಕಡ 270 ರಷ್ಟು ಸಾಲ ಮಾಡಿ ಬಿಟ್ಟಿದೆ. ಚೀನಾ ಫೈನಾನ್ಷಿಯಲ್ ಸಂಸ್ಥೆಗಳಿಂದ ಸಾಲ ತೀರಿಸೀಕೋ ಹೊಸ ಸಾಲವನ್ನು ಪಡೆದು.. ಸಾಲದ ಹೊರೆಯನ್ನೆ ಹೊತ್ತಿ ನಿಂತಿದೆ. ಇದರಿಂದ ಜನರ ಕೈಯಲ್ಲಿ ದುಡ್ಡೆ ಓಡಾಡದಂತಾಗಿ ಹೋಗಿದೆ.

ಕಾರಣ 3: ವಿದೇಶಿ ಹೂಡಿಕೆ ಸಂಪೂರ್ಣ ಕುಸಿತ

ಕೊರೊನಾ ವೈರಸ್ ಬಂದಾಗಿನಿಂದ ಚೀನಾ ವಿಶ್ವದ ಹಲವು ದೇಶಗಳಿಗೆ ಬೇಡವಾಗಿದೆ. ಜೊತೆಗೆ ಪವರ್​​ ಹಂಗ್ರಿ ಅಂದ್ರೆ ಅಧಿಕಾರದ ಅತಿ ಹಸಿವು ಹೊಂದಿರೋ ಶಿ ಜಿನ್​ಪಿಂಗ್​ ಭಾರತದಂಥ ನ್ಯೂಟ್ರಲ್​ ದೇಶಗಳೂ ಸೇರಿದಂತೆ ಹಲವಾರು ದೇಶಗಳನ್ನು ವೈರಿಗಳನ್ನಾಗಿ ಮಾಡಿಕೊಂಡಿದ್ದಾರೆ.. ಸ್ನೇಹಿತರನ್ನೂ ದೂರ ಮಾಡಿಕೊಂಡು ಬಿಟ್ಟಿದ್ದಾರೆ.. ಇವೆಲ್ಲ ಚೀನಾದ ಬಗೆಗಿನ ಆಕರ್ಷಣೆ ಕಡಿಮೆ ಮಡಿದ್ದು ವಿದೇಶಿ ಹೂಡಿಕ ಬಹುತೇಕ ಕುಸಿತ ಕಂಡಿದೆ..

ಇನ್ನು ಜಿನ್ಪಿಂಗ್ ಆಡಳಿತದಿಂದ ಚೀನಿಯರ ಪರಿಸ್ಥಿತಿ ಹೇಗಿದೆ ಅಂತ ಅವಲೋಕಿಸಿದರೆ., ಮನಸ್ಸಿಗೆ ತೀರ ಬೇಸರವಾಗುತ್ತೆ.. ಮನುಷ್ಯರನ್ನ ಹೀಗೆ ಕಾಣ್ತಾರಾ? ಅಂತ ಪ್ರಶ್ನೆ ಮೂಡುತ್ತೆ..

ಜೇಬಿನಲ್ಲಿ ಹಣವಿಲ್ಲ, ತಿನ್ನಲು ಆಹಾರವಿಲ್ಲ
ಹೌದು! ಇದು ನಿಜಕ್ಕೂ ಚೀನದಲ್ಲಿ ಇರುವ ಈಗಿನ ಪರಿಸ್ಥಿತಿ.. ಅಲ್ಲಿ ಹಲವು ಯುವಕರಿಗೆ ಕೆಲಸವೇ ಇಲ್ಲದ ಹಾಗಾಗಿದೆ. ಜೇಬಿನಲ್ಲಿ ಹಣವಿಲ್ಲದೆ ಎಲ್ಲರು ಪರಿತಪಿಸುವಂತಾಗಿದೆ. ತಿನ್ನಲು ಆಹಾವಿಲ್ಲದೆ ಆಹಾರ ಭದ್ರತೆಗೆ ಧಕ್ಕೆ ಬಂದಿದೆ. ಬಡತನ ಚೀನಾದವರನ್ನು ಕಿತ್ತು ತಿನ್ನುತ್ತಿದೆ. ಇದೀಗ ಶ್ರೀಮಂತರೂ ಈಗ ಮಧ್ಯಮವರ್ಗಿಗಳಾಗ್ತಿದ್ದಾರೆ.. ಸದ್ಯ ಅಲ್ಲಿ 40 ಕೋಟಿಗೂ ಅಧಿಕ ಜನರು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಪರಿಸ್ಥಿತಿ ಇದೆ ರೀತಿ ಮುಂದುವರೆದರೆ 2030ರ ವೇಳೆಗೆ 90 ಕೋಟಿ ಜನರು ಮಧ್ಯಮ ವರ್ಗಕ್ಕೆ ಬಂದು ಸೇರಿಬಿಡುತ್ತಾರೆ ಅನ್ನುತ್ತಾರೆ ತಜ್ಞರು.

ಚೀನಾ ಮಿಲಿಟರಿ ಅಂದ್ರೆ ಎಲ್ಲರಿಗೂ ಗೊತ್ತು,  ಹೊಸ ಹೊಸ ಆಧುನಿಕ ಶಸ್ತ್ರಾಸ್ತ್ರಗಳನ್ನು ಈಗಾಗಲೇ ತನ್ನ ಬತ್ತಳಿಕೆಯಲ್ಲಿ ತುಂಬಿಸಿಕೊಂಡಿದೆ. ಚೀನಾ ಗಡಿಯನ್ನು ದಾಟಿ ಯಾರೊಬ್ಬರು ಬರಲು ಸಾಧ್ಯವೆ ಇಲ್ಲ ಅನ್ನುವಷ್ಟರ ಮಟ್ಟಿಗೆ ಬಲೀಷ್ಟವಾಗಿದೆ. ವಿಶ್ವದ ದೊಡ್ಡಣ್ಣನಿಂದ ಹಿಡಿದು ಹಲವು ರಾಷ್ಟಗಳು ಚೀನಾ ವಿರುದ್ಧ ಹೋರಾಡಲು ಸಿದ್ದವಾಗಿ ನಿಂತಿದೆ. ಈ ಹಿನ್ನಲೆ ಸೈನ್ಯವನ್ನು ಶಕ್ತಿಶಾಲಿಯನ್ನಾಗಿಸೋದು ಜಿನ್ಪಿಂಗ್ ನ ಜವಾಬ್ದಾರಿ ಬಿಡಿ. ಆದರೆ ಇದಕ್ಕಿಂತ ಹೆಚ್ಚಾಗಿ ಜಿನ್ಪಿಂಗ್  ಗೆ ಕಾಡ್ತಾ ಇರೋದು ಆಂತರಿಕ ಭದ್ರತೆಯ ತೊಂದರೆ. ಹೌದು! ಜಿನ್ಪಿಂಗ್ ವಿರುದ್ಧವಾಗಿ ಅದೆಷ್ಟೋ ಚೀನಿಯರು ನಿಂತಿದ್ದಾರೆ. ದಿನ ಬೆಳಗಾದರೆ  ಹೋರಾಟಗಳು ಗುಂಪು ಗುಂಪಾಗಿ ನಡಿತಾನೇ ಇದೆ. ಇದನ್ನು ನಿಯಂತ್ರಿಸಲು ಜಿನ್ಪಿಂಗ್ ಆಂತರಿಕ ಭದ್ರತೆ ಬಳಗವನ್ನು ಸಿದ್ದ ಪಡೆಸಿದ್ದಾರೆ. ಅಚ್ಚರಿಯ ವಿಷಯವೇನೆಂದರೆ ದೇಶದ ಭದ್ರೆತೆಗೆ ಮೀಸಲಿಡುವ ಹಣಕ್ಕಿಂತ ಹೆಚ್ಚು ಹಣವನ್ನು ಆಂತರಿಕ ಭದ್ರತೆಗೆ ಮೀಸಲಿಟ್ಟಿದ್ದಾರೆ.

ಸಂಪೂರ್ಣ ಸ್ವತಂತ್ರವನ್ನೆ ಕಳೆದುಕೊಂಡಿರುವ ಚೀನಿಯರು
ಪ್ರತಿಯೊಬ್ಬರ ಹೆಜ್ಜೆಯನ್ನು ಗಮನಿಸುತ್ತಿರುವ ಸರ್ಕಾರ

ಜಿನ್ಪಿಂಗ್ ಆಜ್ಞೆಗಳನ್ನು ಪಾಲಿಸುತ್ತಿರುವ ಚೀನಿಯರು ಅಕ್ಷರಸಃ ಸ್ವಾತಂತ್ರವನ್ನು ಕಳೆದುಕೊಂಡಿದ್ದಾರೆ. ಅವರ ಪ್ರತಿಯೊಂದು ಹೆಜ್ಜೆಯನ್ನು ಸಂಪೂರ್ಣವಾಗಿ ಗಮನಿಸಲಾಗುತ್ತಿದೆ. ನಗರಗಳಲ್ಲಂತೂ ಎಲ್ಲೆಡೆಯೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​​ನ ಫೇಸ್​ ರಿಕಗ್ನೈಜಿಂಗ್ ಮತ್ತು ಸರ್ವವೈಲೈನ್ಸ್ ಕ್ಯಾಮರಾ ಅಳವಡಿಸಲಾಗಿದೆ.. ಎಲ್ಲ ಸೈಬರ್ ಸೈಟ್ ಗಳು ಸರ್ಕಾರದ ಅಧೀನದಲ್ಲಿದೆ. ಹೋರಾಟಗಳನ್ನು ಕ್ಷಣದಲ್ಲೆ ನಿಲ್ಲಿಸಲು ಲಕ್ಷ ಲಕ್ಷ ಪೊಲೀಸರನ್ನು ನೇಮಕ ಮಾಡಿಕೊಂಡಿದ್ದಾನೆ.  ಸೋಷಿಯಲ್ ಮೀಡಿಯಾ ಸೇರಿ ಎಲ್ಲ ಮಾಧ್ಯಮಗಳು ಸಂಪೂರ್ಣ ಕಂಟ್ರೋಲ್ ನಲ್ಲಿ ಇಟ್ಟಿಕೊಂಡಿದ್ದಾನೆ. ಇದರಿಂದ ಸ್ವಾತಂತ್ರ ಎನ್ನುವ ಹಕ್ಕನ್ನೆ ಕತ್ತುಕೊಂಡಂತಾಗಿದೆ.

ಟಾಲ್ಸ್ ಟಾಯ್ ಶಾಂತಿ ಮಂತ್ರವನ್ನು ಸದಾ ಜಪಿಸುವ ಜಿನ್ಪಿಂಗ್, ಎಲ್ಲವೂ ಕೇವಲ ಮಾತಿಗೆ ಅನ್ನೊ ಹಾಗೆ ಆಗಿದೆ. ಕಮ್ಯುನಿಸ್ಟ್ ಪಾರ್ಟಿ ಯಿಂದ, ಸರ್ವಾಧಿಕಾರದ ಪಥವನ್ನು ಹಿಡಿಯುತ್ತಿದ್ದಾರೆ. ಪೀಪಲ್ ಲಿಬರೇಷನ್ ಆರ್ಮಿ ಜಿನ್ಪಿಂಗ್ ಹಾಕಿದ ತಾಳಕ್ಕೆ ಕುಣಿಯುತ್ತಿದ್ದಾರೆ. ಈಗಲೂ ಇವನನ್ನು ಪ್ರಶ್ನೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಮುಂದೆ ಬಂದರೆ ಅಂತವರನ್ನು ಈತ ಬಿಡುವುದಿಲ್ಲ. ಈಗಾಗಲೇ ಯುವಕರಿಲ್ಲದೆ ಚೀನಾ ಕಂಗಾಲಾಗಿದೆ 2050ರ ಹೊತ್ತಿಗೆ ಶೇಕಡ 33 ರಷ್ಟು ಜನ 60 ವಯಸ್ಸು ದಾಟುತ್ತಿದ್ದಾರೆ. ಈಗಲೇ ಎಚ್ಚೆದ್ದು ಆತನ ದಾರಿಗೆ ಅಡ್ಡ ನಿಲ್ಲದಿದ್ದರೆ ಮುಂದೆ ಇನ್ನೇನು ಪರಿಣಾಮ ಬೀರುವುದು ಗೊತ್ತಿಲ್ಲ.

ಇಷ್ಟೆಲ್ಲ ಕಷ್ಟಗಳ ನಡುವೆ ಜಿನ್ಪಿಂಗ್ ನಡೆಸಿದ 100 ವರ್ಷದ ಆಚರಣೆ ಚೀನಾ ಬಡತನವನ್ನು ಮುಚ್ಚಿ ಹಾಕುವ ಪ್ರಯತ್ನನಾ ? ಅಥವಾ ತನ್ನ ಪ್ರತಿಷ್ಟೆ ಹೆಚ್ಚಿಸಿಕೊಳ್ಳಲು ಇದೊಂದು ಹೊಸ ಸೂತ್ರನಾ ? ಜಿನ್ಪಿಂಗ್ ನ ಈ ನಿರ್ಧಾರಗಳು ಯಾರಿಗೂ ಅರ್ಥವಾಗಲ್ಲ ನಿಜ ಆದ್ರೆ ಇದರ ಹಿಂದೆ ಅವನ ಕುತಂತ್ರ ಬುದ್ದಿ ಇರೋದಂತು ಊಹಿಸಲಾರದ ಸತ್ಯ.

The post ವಿದೇಶಿ ಹೂಡಿಕೆ ವರ್ಷದಿಂದ ವರ್ಷಕ್ಕೆ ಕುಸಿತ.. ಚೀನಾ ಸಂಪತ್ತು ಕರಗುತ್ತಿರುವುದು ಯಾಕೆ? appeared first on News First Kannada.

Source: newsfirstlive.com

Source link