ವಿದ್ಯಾಕಾಶಿಯಲ್ಲಿ ಗಾಂಜಾ ಘಾಟು..ವಿದ್ಯಾರ್ಥಿಗಳಿಗೆ ಡ್ರಗ್​ ಸಪ್ಲೈ ಮಾಡ್ತಿದ್ದ ಇಬ್ಬರು ಅಂದರ್​


ಧಾರವಾಡ: ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ನಗರದ ಸಪ್ತಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರು ಯುವಕರನ್ನು ಬಂಧಿಸಿ 400 ಗ್ರಾಂ‌ ಗಾಂಜಾ‌ ವಪಡಿಸಿಕೊಂಡಿದ್ದಾರೆ. ಜೊತೆಗೆ ದೃವ ಅನಿಲ್ ಮದಾನ, ಉಮೇಶ ಶಿವಕುಮಾರ ಮಡಿವಾಳ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದೆ.

ಆರೋಪಿಗಳಿಬ್ಬರು ನಗರದ ಶಿವಗಿರಿ, ಸಾಯಿ‌ ಹಾಸ್ಟೇಲ್, ಜಯನಗರಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ವಿದ್ಯಾರ್ಥಿಗಳನ್ನೆ ಟಾರ್ಗೆಟ್‌ ಮಾಡಿಕೊಂಡು ಗಾಂಜಾ ಮಾರಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಇಂಡಿಯನ್​ ರೂಪಿಯನ್ನ ಡಾಲರ್​ಗೆ ಕನ್ವರ್ಟ್​ ಮಾಡಿ ಲಾಭ ಕೊಡ್ತಿವಿ ಎಂದು ₹8.13 ಲಕ್ಷ ವಂಚನೆ

The post ವಿದ್ಯಾಕಾಶಿಯಲ್ಲಿ ಗಾಂಜಾ ಘಾಟು..ವಿದ್ಯಾರ್ಥಿಗಳಿಗೆ ಡ್ರಗ್​ ಸಪ್ಲೈ ಮಾಡ್ತಿದ್ದ ಇಬ್ಬರು ಅಂದರ್​ appeared first on News First Kannada.

News First Live Kannada


Leave a Reply

Your email address will not be published. Required fields are marked *