ವಿದ್ಯಾರ್ಥಿಗಳಿಗೆ ಸ್ವೇಟರ್​ ವಿತರಿಸಿರುವುದಾಗಿ ಹೇಳಿ 1.69 ಕೋಟಿ ಗುಳುಂ? BBMP ಮತ್ತೊಂದು ಅಕ್ರಮ?

ವಿದ್ಯಾರ್ಥಿಗಳಿಗೆ ಸ್ವೇಟರ್​ ವಿತರಿಸಿರುವುದಾಗಿ ಹೇಳಿ 1.69 ಕೋಟಿ ಗುಳುಂ? BBMP ಮತ್ತೊಂದು ಅಕ್ರಮ?

ಬೆಂಗಳೂರು:  ಪಾಲಿಕೆ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಗೆ  ಸ್ವೇಟರ್​, ಸಾಕ್ಸ್​ ನೀಡಿದ್ದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 1.69 ಕೋಟಿ ರೂ. ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಸೂಕ್ತ ತನಿಖೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಡಿಎಸ್​ಎಸ್​ ವತಿಯಿಂದ ಮನವಿ ಮಾಡಲಾಗಿದೆ.

2020-21 ನೇ ಸಾಲಿನ ಆಯವ್ಯಯದಲ್ಲಿ ಶಾಲಾ, ಕಾಲೇಜುಗಳಲ್ಲಿ ಅವಶ್ಯವಿರುವ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು ಕೆಹೆಚ್​ಡಿಸಿ ಮತ್ತ ಎಂಎಸ್​ಐಎಲ್​​ ವತಿಯಿಂದ ಅಗತ್ಯ ವಸ್ತುಗಳನ್ನ ಖರೀದಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪಾಲಿಕೆಯಿಂದ ಈಗಾಗಲೇ 1.69 ಕೋಟಿ ರೂ. ಪಾವತಿ ಕೂಡ ಆಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವದರಿಂದ ವಿದ್ಯಾರ್ಥಿಗಳಿಗೆ ಇವುಗಳನ್ನು ವಿತರಿಸುವ ಪ್ರಮೇಯವೇ ಬರುವದಿಲ್ಲ ಇದರಿಂದ ವ್ಯಾಪಕ ಭ್ರಷ್ಟಾಚಾರ ನಡೆದಿರುವದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಸಿ. ರಘು ಆರೋಪಿಸಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಕಲಾಸಿಪಾಳ್ಯ, ಕೆ.ಆರ್‌. ಮಾರ್ಕೆಟ್ ಓಪನ್; ವ್ಯಾಪಾರಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಿಬಿಎಂಪಿ

ಬಿಬಿಎಂಪಿ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು ಲಾಕ್​ಡೌನ್​ ಸಮಯದಲ್ಲಿ ವಿದ್ಯಾಗಮ, ಮತ್ತು ಆನ್​ಲೈನ್​ ಕ್ಲಾಸ್​ಗಳು ಚಾಲ್ತಿಯಲ್ಲಿದ್ದು ಮಕ್ಕಳು ಕೂಡ ಮನೆಯಲ್ಲಿಯೇ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಪಾಲಿಕೆ ಯಾವಾಗ ಸ್ವೇಟರ್​ ವಿತರಿಸಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

14ಸಾವಿರ ಮಕ್ಕಳಿಗೆ ವಿತರಿಸಿರುವದಾಗಿ ಹೇಳಿಕೊಂಡಿರುವ ಬಿಬಿಎಂಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಯಲು ಮಾಡಿದ್ದು ತುರ್ತಾಗಿ ತನಿಖೆಗೆ ಆದೇಶಿಸುವಂತೆ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದು, ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ ಎಂದು ಸಿ. ರಘು ತಿಳಿಸಿದ್ದಾರೆ

The post ವಿದ್ಯಾರ್ಥಿಗಳಿಗೆ ಸ್ವೇಟರ್​ ವಿತರಿಸಿರುವುದಾಗಿ ಹೇಳಿ 1.69 ಕೋಟಿ ಗುಳುಂ? BBMP ಮತ್ತೊಂದು ಅಕ್ರಮ? appeared first on News First Kannada.

Source: newsfirstlive.com

Source link