ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಳ್ಳಿ : ಕವಿವಿ ಕುಲಪತಿ ಕೆ.ಬಿ.ಗುಡಸಿ | Karnataka University, Dharwad NSS Unit organized a Swachha Bharth Program in University


ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಳ್ಳಿ : ಕವಿವಿ ಕುಲಪತಿ ಕೆ.ಬಿ.ಗುಡಸಿ

ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್ ವಿದ್ಯಾರ್ಥಿಗಳು

ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಳ್ಳಿ ಎಂದು ರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೇಳಿದರು.

ಧಾರವಾಡ: ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಂಡು ನಿಮ್ಮ ವಿಭಾಗಗಳ ಸುತ್ತಮುತ್ತ ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್​ನ್ನು ಸ್ವಚ್ಛಗೊಳಿಸುವ ಮೂಲಕ ವಿಶ್ವವಿದ್ಯಾಲಯದ ಕ್ಯಾಂಪಸನಲ್ಲಿ ನಿರ್ಮಲ ವಾತಾವರಣವನ್ನು ನಿರ್ಮಿಸಲು ಮನಸ್ಸು ಮಾಡಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ (Karnatak University, Dharwad) ಕುಲಪತಿ ಪ್ರೊ.ಕೆ.ಬಿ.ಗುಡಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸೂಚನೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಕೋಶ (NSS) ಮತ್ತು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಆಯೋಜಿಸಿದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಕುಲಪತಿಗಳು ಸಸಿನೆಟ್ಟು ಮಾತನಾಡಿದ ಅವರು ಸ್ವಚ್ಚತಾ ಅಭಿಯಾನ ದಂತಹ ಸಮುದಾಯ ಆಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು.

ಇದನ್ನು ಓದಿ: ಇನ್​ಸ್ಟಾಗ್ರಾಂ ಲೈವ್​ ಬರಲು ಮುಂದಾದ ಮಡೋನ್ನಗೆ ಶಾಕ್; ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದ ಪಾಪ್ ತಾರೆಗೆ ನಿರ್ಬಂಧದ ಬರೆ

ಸಮುದಾಯ ಆಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು, ಕನಿಷ್ಠ ವಾರಕ್ಕೊಮ್ಮೆ ಇಂತಹ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಅನಾವಶ್ಯಕವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ವಿದ್ಯಾರ್ಥಿ ಶಿಕ್ಷಕರು ಮತ್ತು ಶಿಕ್ಷಕೇತರರ ಸಿಬ್ಬಂದಿ ನೋಡಿಕೊಳ್ಳಬೇಕು ಎಂದರು.

ಈ ಸ್ವಚ್ಚತಾ ಅಭಿಯಾನದ ಆಂದೋಲನದಲ್ಲಿ ಭೌತಶಾಸ್ತ್ರ, ಜೈವಿಕ ಅಧ್ಯಯನ ವಿಭಾಗ, ಪ್ರಾಣಿಶಾಸ್ತ್ರ, ಜೀವರಸಾಯನಶಾಸ್ತ್ರ, ವಾಣಿಜ್ಯ ವಿಭಾಗ, ಭೂ-ವಿಜ್ಞಾನ ವಿಭಾಗಗಳ‌ ಮುಂದೆ ಇರುವ ಹಸಿ ಕಸ‌, ಒಣ ಕಸ ಮತ್ತು ಕಳೆಯನ್ನು ಸ್ವಚ್ಚಗೋಳಿಸಲಾಯಿತು. ಈ ಸಂದರ್ಭದಲ್ಲಿ ಕವಿವಿಯ ಉದ್ಯಾನ ವಿಭಾಗದ ಟ್ರ್ಯಾಕ್ಟರ್ ಮುಖಾಂತರ ಕಸದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

ಇದನ್ನು ಓದಿ: ಕುಟುಂಬ ಸಮೇತ ರಕ್ತದಾನ ಮಾಡಿ ಮಾದರಿಯಾದ ದಂಪತಿ; ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಸಭಾಂಗಣ ನಿರ್ಮಾಣಕ್ಕೆ ರಕ್ತದಾನಿಗಳ ಮನವಿ

ಈ ಅಭಿಯಾನದಲ್ಲಿ ಕವಿವಿಯ 39 ಪ್ರಾಧ್ಯಾಪಕರು, 297 ವಿದ್ಯಾರ್ಥಿಗಳು, ಎನ್.ಎಸ್.ಎಸ್.ಸ್ವಯಂ ಸೇವಕರು ಮತ್ತು ಕವಿವಿಯ ಎನ್.ಎಸ್.ಎಸ್.ಕೋಶದ ಸಂಯೋಜಕ ಡಾ.ಎಂ.ಬಿ.ದಳಪತಿ, ಕವಿವಿ ಎನ್.ಎಸ್.ಎಸ್. ಸ್ನಾತಕೋತ್ತರ ಘಟಕದ ಅಧಿಕಾರಿ ಡಾ.ಎಸ್.ಜಿ.ಚಲುವಾದಿ, ವಿವಿಧ ವಿಭಾಗದ ಮುಖ್ಯಸ್ಥರಾದ ಪ್ರೊ.ವೇದಮೂರ್ತಿ, ಡಾ.ಎಲ್.ಆರ್ ನಾಯಕ, ಪ್ರೊ.ಎಸ್.ಆರ್ ಇನಾಮದಾರ,ಪ್ರೊ.ಎಮ್.ಕೆ.ರಬಿನಾಳ. ಪ್ರೊ.ಆರ್.ಎಫ್.‌ಭಜಂತ್ರಿ, ಡಾ.ಎ.ಎಸ್.ಬೇನಾಳ, ಪ್ರೊ.ಸಿ.ಎಮ್.ಕಮನವಳ್ಳಿ, ಶಿಲಾಧರ ಮುಗಳಿ, ಪ್ರೊ ಪುಲಕೇಶಿ ಬಿರಾದಾರ, ಪ್ರೊ.ಚಂದ್ರಮಾ , ಪ್ರೊ.ಕೆ.ಎಸ್ ದೇವರಾಜ್, ಡಾ.ವಿಶ್ವನಾಥ ಚಚಡಿ, ಸೇರಿದಂತೆ ಶಿಕ್ಷಕೇತರರ ಸಿಬ್ಬಂದಿ , ಕವಿವಿ ಉದ್ಯಾನ ಸಿಬ್ಬಂದಿ ಭಾಗವಹಿಸಿದ್ದರು.

TV9 Kannada


Leave a Reply

Your email address will not be published. Required fields are marked *