ವಿದ್ಯಾರ್ಥಿಗಳ 1 ವರ್ಷದ ಸ್ಕಾಲರ್​​ಶಿಪ್ ಬೇರೆ ಖಾತೆಗೆ ಜಮಾ.. ನಕಲಿ ಖಾತೆ ತೆರೆದು ವಂಚಿಸಿರುವ ಶಂಕೆ

ವಿದ್ಯಾರ್ಥಿಗಳ 1 ವರ್ಷದ ಸ್ಕಾಲರ್​​ಶಿಪ್ ಬೇರೆ ಖಾತೆಗೆ ಜಮಾ.. ನಕಲಿ ಖಾತೆ ತೆರೆದು ವಂಚಿಸಿರುವ ಶಂಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿಗಳ ಒಂದು ವರ್ಷದ ವಿದ್ಯಾರ್ಥಿ ವೇತನ ಬೇರೊಂದು ಖಾತೆಗೆ ಜಮಾ ಆಗಿದ್ದು, ಇದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ಹಣ ಬೇರೊಂದು ಖಾತೆಗೆ ವರ್ಗ ಆಗಿರೋದು ಆಡಿಟಿಂಗ್ ವೇಳೆ ಬೆಳಕಿಗೆ ಬಂದಿದೆ. 2017ರಿಂದ 18ರವರೆಗಿನ 24 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಮತ್ತೊಬ್ಬರ ಖಾತೆಗೆ ಜಮಾ ಆಗಿದೆ ಅಂತ ಹೇಳಲಾಗ್ತಿದೆ.

ನಿಯಮಗಳ ಪ್ರಕಾರ ಕಾಲೇಜಿನ ಪ್ರಿನ್ಸಿಪಾಲ್ ಡಾ.ಪ್ರಶಾಂತ್ ಅವರ ಖಾತೆಗೆ ಹಣ ಜಮಾ ಆಗಬೇಕಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕಾಲೇಜು ಮಂಡಳಿ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

The post ವಿದ್ಯಾರ್ಥಿಗಳ 1 ವರ್ಷದ ಸ್ಕಾಲರ್​​ಶಿಪ್ ಬೇರೆ ಖಾತೆಗೆ ಜಮಾ.. ನಕಲಿ ಖಾತೆ ತೆರೆದು ವಂಚಿಸಿರುವ ಶಂಕೆ appeared first on News First Kannada.

Source: newsfirstlive.com

Source link