ವಿದ್ಯಾರ್ಥಿನಿಯೊಬ್ಬಳ ಸಾವಿನಿಂದ ರೊಚ್ಚಿಗೆದ್ದ ಗೀತಂ ವಿವಿ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಮೇಲೆ ಕಲ್ಲು ತೂರಾಟ | Gitam University students go berserk following death of Ugandan student, pelt stones on hostel ARB


ವಿದ್ಯಾರ್ಥಿನಿಯೊಬ್ಬಳ ಸಾವಿನಿಂದ ರೊಚ್ಚಿಗೆದ್ದ ಗೀತಂ ವಿವಿ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಮೇಲೆ ಕಲ್ಲು ತೂರಾಟ

ವಿದ್ಯಾರ್ಥಿಗಳಿಂದ ಕಲ್ಲು ತೂರಾಟ

ಬೆಂಗಳೂರು: ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಾಗದೇವನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ (Gitam University) ಹಾಸ್ಟಲ್ ಕ್ಯಾಂಪಸ್ ನಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದ ಉಗಾಂಡ ಮೂಲದ (Uganda origin) 24-ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು 6ನೇ ಮಹಡಿಯಿಂದ ಜಾರಿ ಬಿದ್ದು ಸಾವನನ್ನಪ್ಪಿದ ಬಳಿಕ ಅಲ್ಲಿರುವ ಇತರ ವಿದ್ಯಾರ್ಥಿಗಳು ಹಿಂಸಾಚಾರಕ್ಕಿಳಿದು ಹಾಸ್ಟೆಲ್ ಮೇಲೆ ಕಲ್ಲು ತೂರಾಟ ನಡೆಸಿದರು. ದಾಂಧಲೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸ್ ಲಾಠಿ ಚಾರ್ಜ್ ನಡೆಸಬೇಕಾಯಿತು. ನತದೃಷ್ಟ ವಿದ್ಯಾರ್ಥಿನಿಯನ್ನು ಹಸೀನಾ (Haseena) ಎಂದು ಗುರುತಿಸಲಾಗಿದೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬುಧವಾರ ರಾತ್ರಿ ಛಾವಣಿ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದ ಹಸೀನಾ ಒಂದು ಬಟ್ಟೆ ಪಕ್ಕದ ಕಟ್ಟಡದ ಅಸ್ಬೆಸ್ಟಸ್ ಶೀಟಿನ ಮೇಲೆ ಬಿದ್ದಿರುವುದನ್ನು ಕಂಡು ಅದನ್ನು ಎತ್ತಿಕೊಳ್ಳುವ ಪ್ರಯತ್ನದಲ್ಲಿ ಜಾರಿ ಬಿದ್ದುಬಿಟ್ಟಿದ್ದಾಳೆ. 6 ನೇ ಮಹಡಿಯಿಂದ ಆಕೆ 1 ನೇ ಮಹಡಿ ಮೇಲೆ ಬಿದ್ದಿದ್ದಾಳೆಂದು ವರದಿಯಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಅಲ್ಲಿನ ವೈದ್ಯರು ಅದಾಗಲೇ ಸತ್ತಿರುವಳೆಂದು ಘೋಷಿಸಿದರು.

ಹಸೀನಾ ಅಕಸ್ಮಿಕವಾಗಿ ಬಿದ್ದು ಸತ್ತಿಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಾದಿಸುತ್ತಿರುವ ವಿದ್ಯಾರ್ಥಿಗಳ ಗುಂಪೊಂದು ಹಾಸ್ಟೆಲ್ ನಲ್ಲಿ ದಾಂಧಲೆ ನಡೆಸಿ ಕಿಟಿಕಿ ಗಾಜುಗಳನ್ನು ಒಡೆದುಹಾಕಿದ್ದಾರೆ ಅಲ್ಲಿದ್ದ ಬೇರೆ ವಸ್ತುಗಳನ್ನು ಕೂಡ ನಾಶಮಾಡಿದ್ದಾರೆ. ಪೊಲೀಸರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರಾದರೂ ಅವರು ಕೇಳದೆ ದಾಂಧಲೆ ಮುಂದುವರಿಸಿದಾಗ ಲಾಠಿ ಪ್ರಹಾರ ಮಾಡಿದ್ದಾರೆ. ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತಿದೆ.

TV9 Kannada


Leave a Reply

Your email address will not be published. Required fields are marked *