ವಿದ್ಯುತ್ ಕಂಬದ ಮೇಲಿಂದ ಆಯತಪ್ಪಿ ಬಿದ್ದು ಚೆಸ್ಕಾಂ ನೌಕರ ಸಾವು, ಲಾರಿ ಡಿಕ್ಕಿ-ಬೈಕ್​ ಸವಾರರಿಬ್ಬರು ದುರ್ಮರಣ, ಅಶ್ಲೀಲ ಪೋಟೊ ಕಳಿಸ್ತಿದ್ದ ಆರೋಪಿ ಬಂಧನ | Chescom lineman slips from pole died on the spot in hanur taluk chamrajnagar dist


ವಿದ್ಯುತ್ ಕಂಬದ ಮೇಲಿಂದ ಆಯತಪ್ಪಿ ಬಿದ್ದು ಚೆಸ್ಕಾಂ ನೌಕರ ಸಾವು, ಲಾರಿ ಡಿಕ್ಕಿ-ಬೈಕ್​ ಸವಾರರಿಬ್ಬರು ದುರ್ಮರಣ, ಅಶ್ಲೀಲ ಪೋಟೊ ಕಳಿಸ್ತಿದ್ದ ಆರೋಪಿ ಬಂಧನ

ಸಾಂಕೇತಿಕ ಚಿತ್ರ

ವಿದ್ಯುತ್ ಕಂಬದ ಮೇಲಿಂದ ಆಯತಪ್ಪಿ ಬಿದ್ದು ಚೆಸ್ಕಾಂ ನೌಕರ ಮೃತಪಟ್ಟಿದ್ದಾನೆ. ಚಾಮರಾಜನಗರ ‌ಜಿಲ್ಲೆ ಹನೂರು ತಾಲೂಕು ಸಂದನಪಾಳ್ಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಚಾಮರಾಜನಗರ/ ಕಾರವಾರ: ವಿದ್ಯುತ್ ಕಂಬದ ಮೇಲಿಂದ ಆಯತಪ್ಪಿ ಬಿದ್ದು ಚೆಸ್ಕಾಂ ನೌಕರ ಮೃತಪಟ್ಟಿದ್ದಾನೆ. ಚಾಮರಾಜನಗರ ‌ಜಿಲ್ಲೆ ಹನೂರು ತಾಲೂಕು ಸಂದನಪಾಳ್ಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ಪ್ರಶಾಂತ್ ಹಿರೇಮಠ ಚೆಸ್ಕಾಂ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಪ್ರಶಾಂತ್ ಹಿರೇಮಠ ದುರಸ್ತಿಗಾಗಿ ವಿದ್ಯುತ್ ಕಂಬವೇರಿದ್ದರು.

ಹಿಂಬದಿಯಿಂದ ಲಾರಿ ಡಿಕ್ಕಿ-ಬೈಕ್​ ಸವಾರರಿಬ್ಬರು ದುರ್ಮರಣ:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ಸಮೀಪ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಬೈಕ್​ ಸವಾರರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಬೊಮ್ಮಯ್ಯ ನಾಯಕ(70) ಮತ್ತು ನಾರಾಯಣ ನಾಯಕ(50) ಸಾವನ್ನಪ್ಪಿದವರು. ಬೈಕ್​ನಲ್ಲಿ ಅಂಕೋಲಾ ಕಡೆಗೆ ಬರುತ್ತಿದ್ದಾಗ ಅವಘಡ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಯುವತಿಯರ ಅಶ್ಲೀಲ ಪೋಟೊ, ವಿಡಿಯೋಗಳ ಕಳಿಸ್ತಿದ್ದ ಆರೋಪಿ ಬಂಧನ:

ಅಪ್ರಾಪ್ತ ವಯಸ್ಸಿನ ಯುವತಿಯರ ಅಶ್ಲೀಲ ಪೋಟೊ ಮತ್ತು ವಿಡಿಯೋಗಳನ್ನ ಕಳಿಸ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಮಡಿವಾಳ ನಿವಾಸಿಯಾಗಿರುವ ಪುರುಷೋತ್ತಮ (42) ಎಂಬುವವನನ್ನು ಬಂಧಿಸಿದ್ದಾರೆ. ಪುರುಷೋತ್ತಮ ಫೇಸ್ ಬುಕ್ ಮೂಲಕ ದೇಶ-ವಿದೇಶದ ಸುಂದರ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ.

ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ತಿದ್ದಂತೆ ಮೆಸೆಂಜರ್ ಮೂಲಕ ಕ್ವಾಟ್ಲೆ ಶುರುವಿಟ್ಟುಕೊಳ್ಳುತ್ತಿದ್ದ. ಲೈಂಗಿಕ ಉತ್ತೇಜನ ನೀಡುವ ಪೋಟೊ ಮತ್ತು ವಿಡಿಯೋಗಳನ್ನ ಕಳಿಸ್ತಿದ್ದ ಈ ಖತರ್ನಾಕ್ ಆಸಾಮಿ. ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಕೇಸ್ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *