ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಕಂಬ ಹೊತ್ತು ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದ್ದು, ಕೂಲಿ ಕೆಲಸಗಾರರ ಮೈ ಮೇಲೆ ಕಂಬಗಳು ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೈಮಲ್ಕಾಪುರ ಗ್ರಾಮದ ಪ್ರಾಣೇಶ್ (30) ಮೃತಪಟ್ಟ ಕೂಲಿ ಕಾರ್ಮಿಕ. ರಾಯಚೂರಿನಿಂದ ಬಿಜನಗೇರಾ ಗ್ರಾಮಕ್ಕೆ ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳು ಇದ್ದರಿಂದ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

ಟ್ರ್ಯಾಕ್ಟರ್ ನಲ್ಲಿ ಒಟ್ಟು ಎಂಟು ಜನ ಹೊರಟಿದ್ದರು. ಆದರೆ ಘಟನೆ ವೇಳೆ ವಿದ್ಯುತ್ ಕಂಬಗಳು ಕೂಲಿಕಾರರ ಮೈ ಮೇಲೆ ಬಿದ್ದಿದ್ದು, ಇನ್ನೂ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

The post ವಿದ್ಯುತ್ ಕಂಬ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಓರ್ವ ಸಾವು, ಮೂವರು ಗಂಭೀರ appeared first on Public TV.

Source: publictv.in

Source link