ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶ : ಪ್ರಲ್ಹಾದ್ ಜೋಶಿ – Best opportunity to invest in coal sector at a time when power demand is doubling: Pralhad Joshi


2040ರ ವೇಳೆಗೆ ಭಾರತ ದೇಶದಲ್ಲಿ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳಲಿದ್ದು, ಹೆಚ್ಚಿನ ಕಲ್ಲಿದ್ದಲು ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶ : ಪ್ರಲ್ಹಾದ್ ಜೋಶಿ

ಕಲ್ಲಿದ್ದಲು ಗಣಿಗಾರಿಕೆ ಹೂಡಿಕೆದಾರರ ಸಮಾವೇಶ


ಇಂದೋರ್‌: 2040ರ ವೇಳೆಗೆ ಭಾರತ ದೇಶದಲ್ಲಿ ತಲಾ ವಿದ್ಯುತ್ (power) ಬಳಕೆ ದ್ವಿಗುಣಗೊಳ್ಳಲಿದ್ದು, ಹೆಚ್ಚಿನ ಕಲ್ಲಿದ್ದಲು ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕಲ್ಲಿದ್ದಲು ಸಚಿವಾಲಯ ಇಂದೋರ್‌ನಲ್ಲಿ ಇಂದು ಮೊಟ್ಟಮೊದಲ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿತ್ತು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸರಕಾರ ಕಲ್ಲಿದ್ದಲು ಕ್ಷೇತ್ರವನ್ನ ಖಾಸಗಿ ವಲಯಕ್ಕೂ ಅನ್ ಲಾಕ್ ಮಾಡುವ ಮೂಲಕ ಹೆಚ್ಚಿನ ಉತ್ಪಾದನೆಗೆ ಗಮನಹರಿಸಿದೆ ಎಂದರು. ಕಲ್ಲಿದ್ದಲು ಆಮದನ್ನ ಶೇ 2%ಗೆ ಇಳಿಸಲಾಗಿದೆ ಎಂದರು.

ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ್​ನತ್ತ ಸಾಗುತ್ತಿದೆ. ವಿದ್ಯುತ್ ಬಳಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ 6ನೇ ಹಂತದ 133 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ 5 ನೇ ಹಂತದ 64 ಕಲ್ಲಿದ್ದಲು ಗಣಿಗಳನ್ನ ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಅಲ್ಲದೇ 5 ನೇ ಹಂತದ ಸೆಕೆಂಡ್ ಅಟೆಮ್ಟ್​ನಲ್ಲಿ 8 ಗಣಿಗಳ ಹರಾಜು ಪ್ರಾರಂಭಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು. ಕಲ್ಲಿದ್ದಲು ಸಚಿವಾಲಯದಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗಿದ್ದು, ಉದ್ಯಮ ಸ್ನೇಹಿ ವಾತಾವರಣ ರೂಪಿಸಲಾಗಿದೆ. ಹೂಡಿಕೆದಾರರು ಹೂಡಿಕೆ ಮಾಡಲು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಮುಂದಿನ 25 – 30 ವರ್ಷಗಳ ವರೆಗೆ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚುತ್ತಲೇ ಹೋಗಲಿದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ಪಟ್ಟರು.

ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು ಪ್ರಸ್ತುತ ತಲಾ ವಿದ್ಯುತ್ ಬಳಕೆಯ ಹತ್ತನೇ ಒಂದು ಭಾಗವನ್ನು ಹೊಂದಿಲ್ಲ. 2040ರ ವೇಳೆಗೆ ತಲಾ ಬಳಕೆ ದ್ವಿಗುಣಗೊಳ್ಳಲಿದೆ. ಇದಕ್ಕಾಗಿ ಕಲ್ಲಿದ್ದಲು ಅಗತ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಜೋಶಿ ಹೂಡಿಕೆದಾರರಿಗೆ ಮಾಹಿತಿ ನೀಡಿದರು. ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಕೋಲ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರಾದ ಪ್ರಮೋದ್ ಅಗರವಾಲ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.