ವಿಧಾನಸಭಾ ಚುನಾವಣೆಗೆ ಈಗಲೇ ಶುರುವಾಗಿದೆ ಲಾಬಿ; ಮಾಜಿ ಸಂಸದ ಮುದ್ದಹನುಮೇಗೌಡರ ಒತ್ತಾಯವೇನು? | Former MP Muddahanumegowda has demanded that Congress be given the ticket to contest the assembly elections


ವಿಧಾನಸಭಾ ಚುನಾವಣೆಗೆ ಈಗಲೇ ಶುರುವಾಗಿದೆ ಲಾಬಿ; ಮಾಜಿ ಸಂಸದ ಮುದ್ದಹನುಮೇಗೌಡರ ಒತ್ತಾಯವೇನು?

ಮಾಜಿ ಸಂಸದ ಮುದ್ದಹನುಮೇಗೌಡ

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಲಾಬಿ ಶುರುವಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ಗೆ ಮುದ್ದಹನುಮೇಗೌಡರಿಂದ ಲಾಬಿ ನಡೆಯುತ್ತಿದೆ. ನಾನು ಲೋಕಸಭಾ ಕ್ಷೇತ್ರ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೆ. ಈಗ ಶಾಸಕ ಡಾ.ರಂಗನಾಥ್ ನನಗಾಗಿ ಕ್ಷೇತ್ರ ತ್ಯಾಗ ಮಾಡಲಿ. 2019ರ ಚುನಾವಣೆ ವೇಳೆ ನನಗೆ ಆಶ್ವಾಸನೆ ಕೊಟ್ಟು ಈಡೇರಿಸಿಲ್ಲ. ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ರಾಹುಲ್, ವೇಣುಗೋಪಾಲ್ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ನಾನು ರಾಜಕೀಯ ಸನ್ಯಾಸಿಯಲ್ಲ. ಸಮಯಕ್ಕಾಗಿ ಕಾಯುತ್ತಿರುವೆ ಅಂತ ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆ ನೀಡಿದ್ದಾರೆ.

ನಾನು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ. ಉಸ್ತುವಾರಿ ಸುರ್ಜೆವಾಲಾರಿಗೂ ಈ ಬಗ್ಗೆ ಬೇಡಿಕೆ ಇಟ್ಟಿದ್ದೇನೆ. ರಾಜ್ಯದ ಕಾಂಗ್ರೆಸ್ ಮುಖಂಡರಿಗೂ ಇದೇ ಮಾತು ಹೇಳಿದ್ದೇನೆ. ನಾನು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದೆ. ಅಲ್ಲಿ ಹಾಲಿ ಶಾಸಕರಿರುವುದರಿಂದ ಟಿಕೆಟ್ ಕೊಡಲ್ಲ ಅಂತಿದ್ದಾರೆ. ಆದರೆ ನನಗಾಗಿ ಕ್ಷೇತ್ರವನ್ನು ತ್ಯಾಗ ಮಾಡಬೇಕು ಅಂತ ಮುದ್ದಹನುಮೇಗೌಡ ಪಟ್ಟು ಬಿದ್ದಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದ ಪ್ರತಾಪ್​ಚಂದ್ರ ಶೆಟ್ಟಿ 
ಡಿಸೆಂಬರ್ 10ರಂದು ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಾಪ್​ಚಂದ್ರ ಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪ್ರತಾಪ್ಚಂದ್ರ ಚಿಂತಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಪ್ರತಾಪ್ಚಂದ್ರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಮಂಜುನಾಥ್ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಸಾಧ್ಯತೆಯಿದೆ.

ಇದನ್ನೂ ಓದಿ

MPLAD ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್

Shoaib Akhtar: ಸೇನೆ, ಸರ್ಕಾರ ಸೇರಿದಂತೆ ಇಡೀ ದೇಶವೇ ನನ್ನ ಜೊತೆಗಿದೆ! ನೋಟಿಸ್ ಕಳುಹಿಸಿದ ಚಾನೆಲ್​ಗೆ ಅಖ್ತರ್ ಪ್ರತಿಕ್ರಿಯೆ

TV9 Kannada


Leave a Reply

Your email address will not be published. Required fields are marked *