ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ | I Will contest assembly polls if BJP decides says CM Yogi Adityanath


ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​

ಯೋಗಿ ಆದಿತ್ಯನಾಥ

ದೆಹಲಿ: ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆ ಯೋಗಿ ಆದಿತ್ಯನಾಥ್​ (Yogi Adityanath) ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ಬಿಜೆಪಿ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ಕೂಡ ಅದನ್ನೇ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಯೋಗಿ ಆದಿತ್ಯನಾಥ್​ ಈಗ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿ ಪಕ್ಷ ನಿರ್ಧಾರ ಮಾಡಿದರೆ ಮಾತ್ರ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.  

ಬಿಜೆಪಿ ಪಕ್ಷ ಸಂಸದೀಯ ಮಂಡಳಿಯನ್ನು ಹೊಂದಿದೆ. ಯಾರು ಚುನಾವಣೆಯಲ್ಲಿ ಸ್ಪರ್ಧಿಸಬೇಕು..ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಆ ಮಂಡಳಿ ನಿರ್ಧಾರ ಮಾಡಲಿದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯೋಗಿ ಆದಿತ್ಯನಾಥ್​ ಉತ್ತರಿಸಿದ್ದಾರೆ.

2017ರ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನೆಲ್ಲ ಬಿಜೆಪಿ ಈಡೇರಿಸಿದೆ. ಕಾನೂನು-ಸುವ್ಯವಸ್ಥೆ ವಿಚಾರಕ್ಕೆ ಬಂದರೆ ನಮ್ಮ ರಾಜ್ಯ ದಾಖಲೆ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ದಂಗೆ ಆಗಿಲ್ಲ. ದೀಪಾವಳಿ ಸೇರಿ ಎಲ್ಲ ಹಬ್ಬಗಳೂ ಶಾಂತಿಯುತವಾಗಿ ನಡೆದಿವೆ.  ನಮ್ಮ ರಾಜ್ಯದಲ್ಲಿ ಅತ್ಯುತ್ತಮ ಭದ್ರತಾ ವ್ಯವಸ್ಥೆಯಿದೆ. ಇಲ್ಲಿ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಹೀಗಾಗಿ ವಿದೇಶಗಳ ಹೂಡಿಕೆಗೆ ಉತ್ತರಪ್ರದೇಶ ಅತ್ಯುತ್ತಮ ತಾಣವಾಗಿದೆ ಎಂದು ಹೇಳಿದರು.

ಸದ್ಯ ಉತ್ತರ ಪ್ರದೇಶ ಚುನಾವಣೆ ಮೇಲೆ ಎಲ್ಲರ ಕಣ್ಣು ನಿಂತಿದೆ. ಕಾಂಗ್ರೆಸ್​, ಬಿಎಸ್​ಪಿ, ಎಸ್​ಪಿ ಪಕ್ಷಗಳು ಗೆಲ್ಲಲೇ ಬೇಕು ಎಂಬ ಪಣತೊಟ್ಟು ನಿಂತಿದ್ದರೆ, ಬಿಜೆಪಿ ತನ್ನ ಆಡಳಿತ ಮುಂದುವರಿಸುವ ಉತ್ಸಾಹದಲ್ಲಿದೆ. ಅಲ್ಲಿನ ಶೇ.52ರಷ್ಟು ಜನರು ಮತ್ತೆ ಯೋಗಿ ನೇತೃತ್ವದ ಸರ್ಕಾರವೇ ಬರಲಿದೆ ಎನ್ನುತ್ತಿದ್ದರೆ, ಇನ್ನೂ ಶೇ.35 ಮಂದಿ ಬೇರೆಯವರಿಗೆ ಮಣೆ ಹಾಕುತ್ತಿದ್ದಾರೆ.

ಇದನ್ನೂ ಓದಿ: Petrol Price Today: ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ?; ಇಲ್ಲಿದೆ ಮಾಹಿತಿ

TV9 Kannada


Leave a Reply

Your email address will not be published. Required fields are marked *