ವಿಧಾನಸೌಧ, ವಿಕಾಸಸೌಧದಲ್ಲಿ ಇಫ್ತಾರ್ ಕೂಟ ನಡೆಸದಂತೆ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ | National Security Force members protest against Iftar gathering in vidhanasoudha


ವಿಧಾನಸೌಧ, ವಿಕಾಸಸೌಧದಲ್ಲಿ ಇಫ್ತಾರ್ ಕೂಟ ನಡೆಸದಂತೆ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ

ವಿಧಾನಸೌಧ

ಬೆಂಗಳೂರು: ವಿಧಾನಸೌಧ, ವಿಕಾಸಸೌಧದಲ್ಲಿ ಇಫ್ತಾರ್ ಕೂಟ (Iftar Gathering) ನಡೆಸದಂತೆ ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರಗಿ ನೇತೃತ್ವದಲ್ಲಿ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಫ್ರೀಡಂಪಾರ್ಕ್‌ನಿಂದ ಪ್ರತಿಭಟನಾ ರ್ಯಾಲಿ ಆರಂಭವಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಫ್ತಿಯಾರ್ ಕೂಟವನ್ನ ವಿಧಾನಸೌಧದಲ್ಲಿ ಮಾಡಬಾರದು. ಕಾಂಗ್ರೆಸ್​ನವರು ಹುಟ್ಟು ಹಾಕಿರುವ ಈ ಕೆಟ್ಟ ಸಂಸ್ಕೃತಿಯನ್ನು ಕಿತ್ತು ಹಾಕಬೇಕು. ವಿಧಾನಸೌಧದಲ್ಲಿ ಹಾಲಾಲ್ ಆಹಾರ ಸೇವನೆ ಮಾಡಲು ಅವಕಾಶ ನೀಡಬಾರದು ಎಂದು ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದಾರೆ. ಒಂದು ಧರ್ಮದ ಜಾತಿ ಹಬ್ಬಕ್ಕೆ ವಿಧಾನ ಸೌಧದಲ್ಲಿ ಅವಕಾಶ ನೀಡಬಾರದು. ಮೊದಲನೇ ಹಂತದಲ್ಲಿ ಇವತ್ತು ಎಚ್ಚರಿಕೆಯ ಹೋರಾಟ ಮಾಡುತ್ತಿದ್ದೆವೆ. ಒಂದು ಧರ್ಮದ ಹಬ್ಬಕ್ಕೆ ಊಟ ಹಾಕೋದಾದ್ರೆ ಎಲ್ಲರಿಗೂ ಎಲ್ಲಾ ಹಬ್ಬಕ್ಕೆ ಊಟ ಹಾಕಲಿ. ವಿಧಾನಸೌಧದಲ್ಲಿ ತಿಂಗಳುಗಟ್ಟಲೆ ಹಬ್ಬ ಮಾಡಲಿ. ಬೇರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಫ್ತಿಯಾರ್ ಕೂಟ ನಿಲ್ಲಿಸಿದೆ. ಕಾಂಗ್ರೆಸ್​ನವರು ಕರೆದು ತೊಡೆಮೇಲೆ ಕೂರಿಸಿಕೊಂಡು ಇಫ್ತಿಯಾರ್ ಕೂಟ ಮಾಡಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೆಲ ಸಂಘಟನೆಗಳು ಸ್ನೇಹ ಸಮ್ಮಿಲನ ಮಾಡಿಕೊಂಡಿದ್ದಾರೆ. ಭರತ್ ಶೆಟ್ಟಿ, ಸಂತೋಷ್ ಶೆಟ್ಟಿ ಎಂಬುವವರು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ಇತ್ತು. ನಾವು ಎಂಟು ಶರತ್ತುಗಳನ್ನ ಹಾಕಿದ್ವು , ಆ ಶರತ್ತುಗಳಿಗೆ ಅವರು ಒಪ್ಪದ ಕಾರಣ ನಾವು ಹಾಜರಿರಲಿಲ್ಲ. ಸ್ನೇಹಕೂಟ ಅನ್ನೋದು ಕೇವಲ ನಾಟಕ. ಅನೇಕ ವರ್ಷಗಳ ಹಿಂದೂ ಮುಸ್ಲಿಂ ಭಾಂಧವರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ 3 ಗಂಟೆಯವರೆಗೂ ಗಡುವು ನೀಡುತ್ತೆವೆ. ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಇಫ್ತಿಯಾರ್ ಮಾಡಲ್ಲ ಎಂದು ಸರ್ಕಾರ ಕೂಡಲೇ ಆದೇಶ ಮಾಡಬೇಕು ಎಂದು ಪುನೀತ್ ಕೆರೆಹಳ್ಳಿ ಹೇಳಿಕೆ ನೀಡಿದ್ದಾರೆ. ಇಲ್ಲವಾದಲ್ಲಿ ಮಧ್ಯಾಹ್ನ ಮೂರು ಗಂಟೆಯ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published.