ನವದೆಹಲಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ್ದು ಸಾಕಷ್ಟು ಕೂತೂಹಲ ಮೂಡಿಸಿದೆ.
ಇನ್ನು ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಮುಂಬರುವ ಪರಿಷತ್ ಚುನಾವಣೆ ಬಗ್ಗೆ ಪ್ರಧಾನಿ ಜೊತೆ ಚರ್ಚೆ ನಡೆಸಲಾಗಿದೆ ಎಂದರು. ಈ ವೇಳೆ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲು ಮೋದಿ ಮನವಿ ಮಾಡಿದ್ದಾರೆ . ಜೊತೆಗೆ ಸಂಸತ್ ಅಧಿವೇಶನದಲ್ಲಿ ಕೂಡ ಸಾಥ್ ನೀಡಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಹಾಸನ ಜಿಲ್ಲೆಗೆ ಮಂಜೂರಾಗಿದ್ದ ಐಐಟಿಗೆ ಇದುವರೆಗೆ ಯಾವುದೇ ಕಾರ್ಯಗಳು ಆರಂಭವಾಗಿಲ್ಲ.ಈ ಕುರಿತು ಕೂಡ ಪ್ರಧಾನಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಇನ್ನು ರಾಜ್ಯದಲ್ಲಿ ಘೋಷಣೆಯಾಗಿರುವ ವಿಧಾನ ಪರಿಷತ್ ಎಲೆಕ್ಷನ್ ಮತ್ತು ಲೋಕಲ್ ಬಾಡಿ ಚುನಾವಣೆಯನ್ನು ಮಾಜಿ ಸಿಎಂ ಕುಮಾರಸ್ವಾಮಿಯವರೇ ನೋಡಿಕೊಳ್ಳುತ್ತಾರೆ ಅವರ ನೇತೃತ್ವದಲ್ಲಿಯೇ ಪಕ್ಷ ಮುಂದುವರೆಯುವುದು ಎಂದು ದೇವೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:‘ಬನ್ನಿ ಗೌಡ್ರೇ ಕುತ್ಕೋಳಿ’ಎಂದ ಮೋದಿ..ಬಾಯ್ತುಂಬ ನಕ್ಕ ದೇವೇಗೌಡ