ಬೆಂಗಳೂರು: ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪ್ರೇಮಿಗಳು ಒಂದೇ ದಿನ ನೇಣಿಗೆ ಶರಣಾದ ಘಟನೆ ಬ್ಯಾಡರಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಷಿತಾ(19), ಪುನೀತ್ (21), ಆತ್ಮಹತ್ಯೆಗೆ ಶರಣಾದ ದಂಪತಿ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಹರ್ಷಿತಾ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೇ ಹರ್ಷಿತಾ ಸಾವನ್ನಪ್ಪಿದ್ದಾರೆ.

ಪತ್ನಿ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆಯೇ ಪತಿಯೂ ಸಹ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪುನೀತ್ ಮತ್ತು ಹರ್ಷಿತಾ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದು ತಂದೆ ತಾಯಿಯ ವಿರೋಧದ ನಡುವೆಯೂ ಸಹ ಮದುವೆಯಾಗಿದ್ದರು ಎನ್ನಲಾಗಿದೆ. ಇನ್ನು ಹರ್ಷಿತಾ ಆತ್ಮಹತ್ಯೆಗೆ ಶರಣಾದಾಗ ಡೆತ್ ನೋಟ್ ಬರೆದಿಟ್ಟು ಪತ್ರದಲ್ಲಿ ತಮಗೆ ತಂದೆ ತಾಯಿಯಿಂದ ತೊಂದರೆ ಇದೆಯೆಂದು ಬರೆದಿದ್ದಾರೆ.

ಇವರು ಮೂಲತಃ ಮಾಗಡಿ, ಚೆನ್ನೇನಹಳ್ಳಿ ನಿವಾಸಿಗಳಾಗಿದ್ದು ಹೆರೋವಳ್ಳಿಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಪುನೀತ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

The post ವಿಧಿಯೆಷ್ಟು ಕ್ರೂರ: 4 ತಿಂಗಳ ಹಿಂದಷ್ಟೇ ಮದುವೆಯಾದ ಪ್ರೇಮಿಗಳು ನೇಣಿಗೆ ಶರಣು appeared first on News First Kannada.

Source: newsfirstlive.com

Source link