ಬಾಗಲಕೋಟೆ: ಕೊರೊನಾ ಸೋಂಕು ಹಾಗೂ ಕರಿ ಮಾರಿ ಬ್ಲಾಕ್​​ ಫಂಗಸ್​​ ವಿರುದ್ಧ ಹೋರಾಡಿ ಚೇತರಿಸಿಕೊಂಡು ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದಲ್ಲಿ ನಡೆದಿದೆ.

ಹಣಗಂಡಿ ಗ್ರಾಮದ ದೇಸಾಯಿ ಮನೆತನದ ಸಾಗರ ದಾದಾಸಾಹೇಬ ದೇಸಾಯಿ (45) ಎಂದು ಗುರುತಿಸಲಾಗಿದೆ. ಕೋವಿಡ್​​ನಿಂದ ಗುಣಮುಖರಾಗಿ ಚೇತರಿಕೆ ಹೊಂದುವಷ್ಟರಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿತ್ತು. ವಿಶೇಷವೆಂದರೆ ಮಹಾರಾಷ್ಟ್ರದ ಸಾಂಗಲಿಯ ಖಾಸಗಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ ವಿರುದ್ಧ ಹೋರಾಡಿ ಗೆದ್ದು ಬಂದಿದ್ದರು.

ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದ ಕಾರಣ ಕಳೆದ ಮೂರು-ನಾಲ್ಕು ದಿನಗಳಿಂದ ದೇಸಾಯಿ ಅವರು ಮನೆಯಲ್ಲಿದ್ದರು. ಮಂಗಳವಾರ ಬೆಳಗಿನ ಜಾವ ವಾಯು ವಿಹಾರ ಮುಗಿಸಿಕೊಂಡು ಮನೆಯಲ್ಲಿರುವಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬ್ಲ್ಯಾಕ್ ಫಂಗಸ್‌ನಿಂದ ಪಾರಾಗಿದ್ದರೂ ನಂತರದ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿರುವುದು ಕುಟುಂಸ್ಥರಿಗೆ ಆಘಾತ ನೀಡಿದ್ದು, ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

The post ವಿಧಿ ಎಷ್ಟು ಕ್ರೂರಿ; ಕೊರೊನಾ, ಬ್ಲಾಕ್​​ ಫಂಗಸ್​​ ಗೆದ್ದು ಬಂದವ ಹೃದಯಾಘಾತದಿಂದ ಸಾವು appeared first on News First Kannada.

Source: newsfirstlive.com

Source link