ವಿನಯ್ ಗುರೂಜಿ ಸಹಕಾರದಲ್ಲಿ ಗ್ರಾಮಗಳಿಗೆ ಕೊರೊನಾ ಟೆಸ್ಟ್​, ಉಚಿತ ಆ್ಯಂಬುಲೆನ್ಸ್​ ಸೇವೆ

ವಿನಯ್ ಗುರೂಜಿ ಸಹಕಾರದಲ್ಲಿ ಗ್ರಾಮಗಳಿಗೆ ಕೊರೊನಾ ಟೆಸ್ಟ್​, ಉಚಿತ ಆ್ಯಂಬುಲೆನ್ಸ್​ ಸೇವೆ

ಚಿಕ್ಕಮಗಳೂರು: ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರ ಸೇವೆಗೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಮುಂದಾಗಿದ್ದಾರೆ.

ಆಶ್ರಮದ ವತಿಯಿಂದ ಗ್ರಾಮೀಣ ಭಾಗದಲ್ಲಿ ಕೊರೊನಾ ಟೆಸ್ಟ್ ಮಾಡಿಸುವುದರ ಜೊತೆಗೆ ಆ್ಯಂಬುಲೆನ್ಸ್​ ಸೇವೆಗೂ ಚಾಲನೆ ನೀಡಿದ್ದಾರೆ. ಇನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಕೊಡುಗೆಯನ್ನೂ ನೀಡಿದ್ದಾರೆ.

ಜೊತೆಗೆ ಜಯಪುರ ಠಾಣಾ ಸಿಬ್ಬಂದಿಗೆ ಮೆಡಿಕಲ್ ಕಿಟ್ ವಿತರಿಸಿದ್ದಾರೆ. ಅಲ್ಲದೇ ಕೂಲಿ ಕಾರ್ಮಿಕರ ಮನೆಗಳಿಗೆ ತೆರಳಿ ರೇಷನ್ ಕಿಟ್ ವಿತರಿಸಿ ಕೊರೊನಾದಿಂದ ದೂರ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

The post ವಿನಯ್ ಗುರೂಜಿ ಸಹಕಾರದಲ್ಲಿ ಗ್ರಾಮಗಳಿಗೆ ಕೊರೊನಾ ಟೆಸ್ಟ್​, ಉಚಿತ ಆ್ಯಂಬುಲೆನ್ಸ್​ ಸೇವೆ appeared first on News First Kannada.

Source: newsfirstlive.com

Source link