ಬಿಗ್ ಬಾಸ್ ಕನ್ನಡ ಸೀಸನ್ 8 ಕೊರೊನಾ ಕಾರಣದಿಂದ ಕ್ಲೋಸ್ ಆಗುತ್ತಿದೆ. ಇದರ ಬೆನ್ನಲ್ಲೇ ಕೊನೇಯ ದಿನವಾದ ಇಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದಾರೆ. ಈ ಹೇಳಿಕೆಯಲ್ಲಿ ಬಿಗ್ ಪುನರಾರಂಭದ ಸುಳಿವು ನೀಡಿದ್ದಾರೆ.

ಬಿಗ್ ಕೊನೆಯ ಎಪಿಸೋಡ್‍ನಲ್ಲಿ ಬಟೆಗಳನ್ನು ಪ್ಯಾಕ್ ಮಾಡಿಕೊಂಡು ತಮ್ಮ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆಲ್ಲ ವೀಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ. ನಿಮಗಾಗಲೇ ವಿಷಯ ತಲುಪಿದೆ, ಸದ್ಯಕ್ಕೆ ಶೋ ಸ್ಟಾಪ್ ಆಗುತ್ತಿದೆ. ನೀವೆಲ್ಲರೂ ನಿಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದೀರಿ, ಇದು ತುಂಬಾ ಕಷ್ಟದ ವಿಚಾರ ಎಂಬುದು ತಿಳಿದಿದೆ. ಇಷ್ಟು ವಾರಗಳ ಬಳಿಕ, ಇಷ್ಟೊಂದು ಶ್ರಮ, ಭರವಸೆ, ನಂಬಿಕೆ ಇದೆಲ್ಲದ ಮಧ್ಯೆ ಈ ರೀತಿ ಒಂದು ವಿಚಾರ ನಿಮ್ಮ ಕಿವಿಗೆ ಬಿದ್ದಾಗ ಹೇಗೆ ಸ್ವೀಕರಿಸಿದ್ದೀರಿ ಎಂಬುದು ಗೊತ್ತಿಲ್ಲ. ಆದರೆ ಹೊರಗಡೆಯ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ತಂಡ ತೆಗೆದುಕೊಳ್ಳಬೇಕಿದೆ. ಆದರೆ ಇದೇ ಅಂತ್ಯ ಅಲ್ಲ ಎಂದು ಹೇಳಿದ್ದಾರೆ.

ನಿಮಗೆ ಸಿಕ್ಕಿರುವ ಜನಪ್ರಿಯತೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಹಾಗೂ ಎಲ್ಲ ಟೆಕ್ನಿಶಿಯನ್ಸ್ ಗಳ ಸುರಕ್ಷತೆ ದೃಷ್ಟಿಯಿಂದ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇಲ್ಲಿಂದ ನೀವು ಮನೆಗೆ ಹೊರಡಿ, ಇದರ ಭವಿಷ್ಯ ಏನು, ಬಿಗ್ ಬಾಸ್ ಮುಂದೆ ಏನು? ಗೊತ್ತಿಲ್ಲ. ಈ ಬಗ್ಗೆ ಮುಂದೆ ನಿರ್ಧಾರ ಆಗುತ್ತದೆ, ಬಳಿಕ ನಿಮಗೂ ಹಾಗೂ ವೀಕ್ಷಕರಿಗೆ ತಲುಪುತ್ತದೆ. ಇದು ಮುಗಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ವೀಕ್ಷಕರು ತುಂಬಾ ನೊಂದಿದ್ದಾರೆ. ಬಹಳಷ್ಟು ಮೇಲ್, ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಹ ಚರ್ಚೆ ನಡೆಯುತ್ತಿದೆ. ಹೀಗಾಗಿ ನೀವು ಆಗಲೇ ಜನರ ಮನಸ್ಸು ಗೆದ್ದಿದ್ದೀರಿ ಎಂದಿದ್ದಾರೆ.

ವಿನ್ನರ್ ಯಾರೆಂದು ತಿಳಿಯದೆ ಬಿಗ್ ಬಾಸ್‍ಗೆ ಅಂತ್ಯ ಎನ್ನುವುದು ಇರುವುದಿಲ್ಲ. ಹೀಗಾಗಿ ಮತ್ತೆ ಏನಾದರೂ ಬಂದೇ ಬರುತ್ತೆ ಎಂಬ ನಂಬಿಕೆ ಖಂಡಿತ ನನಗಿದೆ. ಆದರೆ ಇಂತಹ ಸಂದರ್ಭದಲ್ಲಿ ನನಗೂ ತುಂಬಾ ದುಃಖವಾಗುತ್ತಿದೆ. ಎರಡ್ಮೂರು ವಾರಗಳ ಕಾಲ ನಾನು ಬರಲು ಆಗಲಿಲ್ಲ, ಬಳಿಕ ಮಾರ್ಗಸೂಚಿಗಳ ಕಾರಣ ವೀಕೆಂಡ್ ಶೋ ನಡೆಸಲು ಆಗುತ್ತಿರಲಿಲ್ಲ. ಹೀಗಾಗಿ ಈಗ ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತಿದ್ದೇನೆ. ಇಷ್ಟು ದಿನ ನೀವು ಆಡಿದ್ದು, ಟಾಸ್ಕ್‍ಗಳಲ್ಲಿ ಪಾಲ್ಗೊಂಡಿದ್ದು, ಇದೆಲ್ಲದರ ಮಧ್ಯೆ ಮನುಷ್ಯ ಎಂದಮೇಲೆ ಗಲಾಟೆ, ಜಗಳಗಳು ಸಹಜ. ಇವನ್ನೆಲ್ಲ ಹೊರತುಪಡಿಸಿ ನೀವೆಲ್ಲ ತುಂಬಾ ಅದ್ಭುತವಾಗಿ ಮನೆಯಲ್ಲಿದ್ದಿರಿ. ನೀವೆಲ್ಲರೂ ವಿನ್ನರ್ಸ್ ಎಂದು ಸ್ಪರ್ಧಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಬಿಗ್ ಬಾಸ್ ಭವಿಷ್ಯ ಏನು ಎನ್ನುವುದನ್ನು ತಂಡ ತೀರ್ಮಾನ ಮಾಡುವ ವರೆಗೆ ಈ ನಿಮ್ಮ ಕಿಚ್ಚನಿಂದ ಧನ್ಯವಾದಗಳು. ವಿಶ್ ಯು ಆಲ್ ದಿ ಬೆಸ್ಟ್ ಆಲ್ವೇಸ್ ಲವ್ ಯು, ಹೋಪ್ ಫಾರ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಕಿಚ್ಚನ ಸಂದೇಶ ಕೇಳಿದ ಮನೆಯವರೆಲ್ಲರೂ ಭಾವುಕರಾಗಿದ್ದಾರೆ.

The post ವಿನ್ನರ್ ಯಾರೆಂದು ತಿಳಿಯದೇ ಬಿಗ್ ಬಾಸ್ ಕ್ಲೋಸ್ ಆಗಲ್ಲ- ಪುನರಾರಂಭದ ಸುಳಿವು ನೀಡಿದ ಕಿಚ್ಚ appeared first on Public TV.

Source: publictv.in

Source link