ವಿಪಕ್ಷಗಳು ಟೀಕೆ ಮಾಡದೆ ರಚನಾತ್ಮಕ ಸಲಹೆ ನೀಡಲಿ; ಬೆಳಗಾವಿಯಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ | BS Yediyurappa said that opposition give constructive advice without criticism in belagavi


ವಿಪಕ್ಷಗಳು ಟೀಕೆ ಮಾಡದೆ ರಚನಾತ್ಮಕ ಸಲಹೆ ನೀಡಲಿ; ಬೆಳಗಾವಿಯಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ

ಬಿಎಸ್ ಯಡಿಯೂರಪ್ಪ

ಬೆಳಗಾವಿ: ಕೇಂದ್ರ, ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡಿವೆ. ಅಧಿಕಾರ ವಿಕೇಂದ್ರಿಕರಣದ ವ್ಯವಸ್ಥೆಗೆ ಪ್ರಧಾನಿಗಳು ವಿಶೇಷ ಒತ್ತು ನೀಡಿದ್ದಾರೆ ಅಂತ ಚಿಕ್ಕೋಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ವಿಪಕ್ಷಗಳು ಟೀಕೆ ಮಾಡದೆ ರಚನಾತ್ಮಕ ಸಲಹೆ ನೀಡಲಿ. ನೆರೆ ಬಂದಾಗ ಮನೆ ಕಳೆದುಕೊಂಡವರಿಗೆ 5 ಲಕ್ಷ, ಹಾನಿಯಾಗದವರಿಗೆ 50 ಸಾವಿರ ನೀಡಿದ್ದೇವು. ಈವರೆಗೂ ದೇಶದ ಯಾವುದೇ ಸರ್ಕಾರ ಇಂತಹ ಕೆಲಸ ಮಾಡಿಲ್ಲ ಅಂತ ತಿಳಿಸಿದರು.

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ನೀಡಿದ್ದ ಭರವಸೆ ಈಡೇರಿಸುವೆ. ಶೀಘ್ರವೇ ಸಿಎಂ ಬೊಮ್ಮಾಯಿ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೊದಲನೇ ಸುತ್ತಿನಲ್ಲೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ. ಜೆಡಿಎಸ್ ಅಭ್ಯರ್ಥಿಗಳು ಇಲ್ಲದ ಕಡೆ ಜೆಡಿಎಸ್ ನಾಯಕರು ನಮಗೆ ಬೆಂಬಲಿ ನೀಡಲಿ ಎಂದು ತಿಳಿಸಿದರು.

ಇಂದು ಚಿಕ್ಕೋಡಿಯಲ್ಲಿ ಜನಸ್ವರಾಜ್ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ನಿನ್ನೆ ರಾತ್ರಿಯೇ ಸಿಎಂ ಯಡಿಯೂರಪ್ಪ ಚಿಕ್ಕೋಡಿಗೆ ಆಗಮಿಸಿದ್ದರು. ಶಾಸಕರೊಂದಿಗೆ ಪರಿಷತ್ ಚುನಾವಣೆಯ ಬಗ್ಗೆ ಬಿಎಸ್ವೈ ಮಾತುಕತೆ ನಡೆಸಿದ್ದಾರೆ. ಮಹಾಂತೇಶ್ ಕವಟಗಿಮಠ ಫಾರ್ಮ್ ಹೌಸ್​ನಲ್ಲಿ ಬೆಳಗಿನ ತಿಂಡಿ ಮುಗಿಸಿದ ಯಡಿಯೂರಪ್ಪ ಚಿಕ್ಕೋಡಿ ಪಟ್ಟಣದ ಆರ್ಡಿ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಲಾಗಿರುವ ಜನಸ್ವರಾಜ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ

ಲವ್ ಜಿಹಾದ್ ಆರೋಪ; ಹಿಂದೂ ಸಂಘಟನೆಯಿಂದ ಯುವತಿ ಮನವೊಲಿಕೆಗೆ ಯತ್ನ, ಖಡಕ್ ನಿರ್ಧಾರ ತಿಳಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ ಯುವತಿ

ಸಿಧು ತಮ್ಮ ಮಕ್ಕಳನ್ನು ಗಡಿ ಕಾಯಲು ಕಳಿಸಿ, ಬಳಿಕ ಇಮ್ರಾನ್​​ರನ್ನು ಅಣ್ಣ ಎನ್ನಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್​

TV9 Kannada


Leave a Reply

Your email address will not be published. Required fields are marked *