ವಿಭಿನ್ನ ಕಥಾಹಂದರ ಹೊಂದಿರೋ ‘ಸೋಲ್ಡ್’ ಚಿತ್ರದಲ್ಲಿ ಡ್ಯಾನಿಶ್ ಸೇಠ್..


ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಡ್ಯಾನಿಶ್ ಸೇಠ್ ಅಭಿನಯದ ಚಿತ್ರ “ಸೋಲ್ಡ್”. ಕಾಮಿಡಿ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುವ ಡ್ಯಾನಿಶ್ ಸೇಠ್, ಈ ಚಿತ್ರದಲ್ಲಿ ಕಾಮಿಡಿ ಹೊರತು ಪಡಿಸಿದ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಶಿವಾನಿ ಆರ್ ಬಲ್ಲುಕರಾಯ, ದೀಪಂ ಕೊಹ್ಲಿ, ಕಾವ್ಯ ಶೆಟ್ಟಿ, ಭರತ್ ಜೆ.ಬಿ, ಸಿದ್ಧಾರ್ಥ್ ಮಾಧ್ಯಮಿಕ, ಉಗ್ರಂ ಮಂಜು, ಭವಾನಿ ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣ ಅಗರವಾಲ್ ನಿರ್ದೇಶಿಸಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಪ್ರೇರಣ ಅವರಿಗೆ ಇದು ಚೊಚ್ಚಲ‌ ನಿರ್ದೇಶನದ ಚಿತ್ರ. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಪ್ರೇರಣ ಸೇರಿದ್ದಾರೆ.

ಚಿತ್ರದಲ್ಲಿ ನಟಿಸಿರುವ ದೀಪಂ ಕೊಹ್ಲಿ ಈ ಚಿತ್ರದ ನಿರ್ಮಾಪಕರು. ನಮ್ಮ ಚಿತ್ರತಂಡದ ಎಲ್ಲಾ ಸದಸ್ಯರು 28ರ ಆಸುಪಾಸಿನ‌ ವಯಸ್ಸಿನವರು. ಉತ್ಸಾಹಿ ಯುವ ತಂಡದಿಂದ ಉತ್ತಮ ಚಿತ್ರವೊಂದು ತಯಾರಾಗಿದೆ. ಮಾರ್ಚ್ 4 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ದೀಪಂ ಕೊಹ್ಲಿ ತಿಳಿಸಿದ್ದಾರೆ. ಒಂದು ಹಾಡಿರುವ ಈ‌ ಚಿತ್ರಕ್ಕೆ ಜೀತ್ ಸಿಂಗ್ ಸಂಗೀತ ನೀಡಿದ್ದಾರೆ. ಸಮೀರ್ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *