ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಕೇವಲ ತನ್ನ ಅಗ್ರೆಸ್ಸಿವ್​​ ಆಟದಿಂದ ಮಾತ್ರವಲ್ಲ, ವಿಭಿನ್ನ​ ಹೇರ್​ಸ್ಟೈಲ್​ನಿಂದಲೂ ಅಭಿಮಾನಿಗಳ ಮನಸು ಗೆಲ್ಲುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದರೆ, ಜಾಲತಾಣದಲ್ಲಿ ವೈರಲ್​​ ಆಗಿರುವ ಪೋಟೋ..!
ಯೆಸ್​​..! ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ಕೊಹ್ಲಿ, ತಮ್ಮ ಹೊಸ ಲುಕ್‌ನ ಫೋಟೋವೊಂದನ್ನ ಹರಿಬಿಟ್ಟಿದ್ದಾರೆ. ಈ ಮೊದಲೇ ಹೆಚ್ಚು ಗಡ್ಡ ಬಿಟ್ಟು ಆಕರ್ಷಿತರಾಗಿದ್ದ ಕಿಂಗ್​ ಕೊಹ್ಲಿ, ಮತ್ತಷ್ಟು ಗಡ್ಡ ಬೆಳೆಸಿ, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕನ್ನಡಕ ಹಾಕಿ ವಿಭಿನ್ನ ಗೆಟಪ್​​ನಲ್ಲಿರುವ ಕೊಹ್ಲಿ ಕಂಡು ಫ್ಯಾನ್ಸ್​ ವ್ಹಾವ್​ ಅಂತಿದ್ದಾರೆ.

ಟೀಮ್​ ಇಂಡಿಯಾ ನಾಯಕನ ಈ ಗೆಟಪ್​​ ಅನ್ನು ಹಲವು ಸಿನಿಮಾಗಳ ಪಾತ್ರದಾರಿಗಳಿಗೆ ಹೋಲಿಕೆ ಮಾಡ್ತಿದ್ದಾರೆ. ಜೊತೆಗೆ ವೈರಲ್​ ಕೂಡ ಮಾಡ್ತಿದ್ದಾರೆ. ಕೆಲವರು ಹಿಂದಿ ಸಿನಿಮಾದ ಕಬೀರ್​​ಸಿಂಗ್​ಗೆ ಹೋಲಿಸಿದರೆ, ಇನ್ನು ಕೆಲವರು ಇಂಗ್ಲೀಷ್​ ವೆಬ್​ ಸಿರೀಸ್​ ಮನಿ ಹೀಸ್ಟ್​ ಮುಖ್ಯಪಾತ್ರದಾರಿ ಫ್ರೋಫೆಸರ್​ಗೆ ಹೋಲಿಕೆ ಮಾಡಿದ್ದಾರೆ.

The post ವಿಭಿನ್ನ ಗೆಟಪ್​​ನಲ್ಲಿ ಕಿಂಗ್ ಕೊಹ್ಲಿ- ವಿರಾಟ್​​ ಹೊಸ ಲುಕ್​ಗೆ ಕ್ರಿಕೆಟ್ ಫ್ಯಾನ್ಸ್​ ಫಿದಾ…! appeared first on News First Kannada.

Source: newsfirstlive.com

Source link