ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು? | Alia Bhatt video in Airport during Rocky Aur Rani Ki Prem Kahani shooting goes viral


ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ಆಲಿಯಾ ಭಟ್

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ.

ಇದು ಸೋಶಿಯಲ್​ ಮೀಡಿಯಾ ಜಗತ್ತು. ಕೆಲವು ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್​ ಆಗುತ್ತವೆ. ಅದರ ಸತ್ಯಾಸತ್ಯತೆ ಏನು ಎಂಬುದು ತಿಳಿಯುವುದಕ್ಕಿಂತ ಮುನ್ನವೇ ಜನರು ಅದನ್ನು ನಂಬಿಬಿಡುತ್ತಾರೆ. ಈಗ ನಟಿ ಆಲಿಯಾ ಭಟ್​ (Alia Bhatt) ಅವರು ವಿಮಾನ ನಿಲ್ದಾಣದಲ್ಲಿ ತುಂಬ ಗಾಬರಿಯಿಂದ ಓಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಅದನ್ನು ಕಂಡು ಕೆಲವರು ನಿಜ ಎಂದು ನಂಬಿದ್ದಾರೆ. ಆ ವಿಡಿಯೋದಲ್ಲಿ ಆಲಿಯಾ ಭಟ್​ ಅವರು ತುಂಬ ಆತಂಕಕ್ಕೆ ಒಳಗಾದಂತೆ ಕಾಣಿಸುತ್ತಾರೆ. ಟ್ರಾಲಿಯಲ್ಲಿ ತಮ್ಮ ಲಗೇಜ್​ಗಳನ್ನು ಹಾಕಿಕೊಂಡು ಅವರು ಓಡುತ್ತಿರುವ ದೃಶ್ಯ ಅದರಲ್ಲಿ ಇದೆ. ಆಲಿಯಾ ಭಟ್​ ಅವರಿಗೆ ಏನಾಯಿತು? ಅವರೇನಾದರೂ ಫ್ಲೈಟ್​ ಮಿಸ್​ ಮಾಡಿಕೊಂಡ್ರಾ? ಇತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಗಾಬರಿ ಆಗುವಂಥದ್ದು ಏನೂ ಆಗಿಲ್ಲ. ಇದು ಸಿನಿಮಾದ ಶೂಟಿಂಗ್​ ದೃಶ್ಯ! ಕರಣ್​ ಜೋಹರ್​ (Karan Johar) ನಿರ್ದೇಶನ ಮಾಡುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಆ ಸಂದರ್ಭದ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಲಾಗಿದೆ.

ನಟಿ ಆಲಿಯಾ ಭಟ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ಆರ್​ಆರ್​ಆರ್​’ ಸಿನಿಮಾ ಗೆದ್ದ ಬಳಿಕ ಅವರು ಪ್ಯಾನ್​ ಇಂಡಿಯಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ರಣಬೀರ್​ ಕಪೂರ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅವರು ಮದುವೆಗಾಗಿ ಹೆಚ್ಚು ದಿನಗಳ ಕಾಲ ಬ್ರೇಕ್​ ಪಡೆದುಕೊಳ್ಳಲಿಲ್ಲ. ಮದುವೆ ಮುಗಿದು ಕೆಲವೇ ದಿನ ಕಳೆದ ಬಳಿಕ ಚಿತ್ರೀಕರಣಕ್ಕೆ ಹಾಜರಾಗಿದ್ದರು. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಸೆರೆಯಾದ ವಿಡಿಯೋ ಇಲ್ಲಿದೆ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ. ಈ ಹಿಂದೆ ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿ ಮೋಡಿ ಮಾಡಿತ್ತು. ಈಗ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಅವರು ಯಾವ ಕಥೆ ಹೇಳಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿತು.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಗ್ಗೆ ಹಬ್ಬಿತ್ತು ವದಂತಿ:

ನಿರ್ದೇಶಕ ಕರಣ್​ ಜೋಹರ್​ ಅವರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು ಕೂಡ ಹೈಲೈಟ್​ ಆಗುತ್ತವೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲೂ ಅತಿಥಿ ಪಾತ್ರಗಳಿದ್ದು, ಅದರಲ್ಲಿ ಶಾರುಖ್​ ಖಾನ್​ ಮತ್ತು ಕಾಜೋಲ್​ ನಟಿಸಲಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿತ್ತು. ಎಸ್​ಆರ್​ಕೆ ಹಾಗೂ ಕಾಜೋಲ್ ಅವರದ್ದು ಬಾಲಿವುಡ್​ನಲ್ಲಿ ಹಿಟ್ ಜೋಡಿ. ಕಾಜೋಲ್​-ಶಾರುಖ್​ ಖಾನ್​ ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’, ‘ಮೈ ನೇಮ್ ಈಸ್ ಖಾನ್​’, ‘ಡಿಡಿಎಲ್​ಜೆ’ ಸೇರಿ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಇವರಿಬ್ಬರೂ ಕರಣ್ ಜೋಹರ್ ನಿರ್ದೇಶನ ಮಾಡುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಬಾಲಿವುಡ್ ಮಂದಿ ಈ ವದಂತಿ ಹಬ್ಬಿಸಿದ್ದಾರೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *