ವಿರಾಟ್​​ ಕೊಹ್ಲಿಯಲ್ಲ, ಈ ಆಟಗಾರನಿಗೆ ಬೌಲಿಂಗ್​​ ಮಾಡೋದು ಬಹಳ ಕಷ್ಟ; ಪಾಕ್​​ ಕ್ರಿಕೆಟರ್​​


ಟೀಂ ಇಂಡಿಯಾ ಕ್ಯಾಪ್ಟನ್​​ ವಿರಾಟ್ ಕೊಹ್ಲಿ ಈ ಕಾಲಘಟ್ಟದ ಶ್ರೇಷ್ಠ ಬ್ಯಾಟರ್ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮಿರ್ ಹೊಗಳಿದ್ದಾರೆ. ಈ ಬಗ್ಗೆ ಮಾತನಾಡಿದ ಅಮಿರ್, ನನ್ನ ಪ್ರಕಾರ ಈ ಕಾಲಘಟ್ಟದ ಅತ್ಯಂತ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಎಂದರು.

ಕೊಹ್ಲಿಗೆ ಬೌಲಿಂಗ್ ಮಾಡುವುದು ನನಗೇನೂ ಕಠಿಣವೆನಿಸಿಲ್ಲ. ಆದರೆ, ಬ್ಯಾಟರ್ ಸ್ಟೀವ್‌ ಸ್ಮಿತ್​​ಗೆ ಬೌಲಿಂಗ್ ಮಾಡೋದು ಬಹಳ ಕಠಿಣ ಎಂದರು.
ಅಂದು ಶೇನ್ ವಾಟ್ಸನ್‌ಗೆ ಬೌಲಿಂಗ್ ಮಾಡುವುದು ಕಠಿಣವಾಗಿತ್ತು. ಈಗ ಸ್ಟೀವ್ ಸ್ಮಿತ್​​ಗೆ ಬೌಲಿಂಗ್​​ ಮಾಡೋದು ಕಠಿಣ ಎನಿಸುತ್ತದೆ. ಏಕೆಂದರೆ, ಸ್ಮಿತ್ ಹೇಗೆ ಬ್ಯಾಟ್ ಬೀಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *