ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಳೆದೆರಡು ವರ್ಷಗಳಿಂದ ಶತಕದಾಟಲು ವಿಫಲರಾಗುತ್ತಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲೂ ಕೊಹ್ಲಿ ಪ್ರದರ್ಶನ ಅಷ್ಟಕಷ್ಟೇ. ಈಗ ಭಾರತ-ವಿಂಡೀಸ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಕೊಹ್ಲಿ ಫಾರ್ಮ್ ಬಗ್ಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಮಾತನಾಡಿದ್ದಾರೆ.
ಕೊಹ್ಲಿ ಕಠಿಣ ಹಂತದಲ್ಲಿದ್ದಾರೆ ಎಂದು ನನಗೆ ಅನಿಸಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮಾತ್ರ ವಿರಾಟ್ ಪಾಲಿಗೆ ಕೆಟ್ಟದಾಗಿತ್ತು. ಆದರೆ, ಅದು ಎಲ್ಲಾ ಆಟಗಾರರಿಗೂ ಸಹಜ ಎಂದರು ವಿಕ್ರಂ ರಾಥೋರ್.