ಕಿಚ್ಚ ಸುದೀಪ್ ನಿನ್ನೆ ನ್ಯೂಸ್​ಫಸ್ಟ್​ ಜೊತೆ ಮಾತನಾಡುತ್ತ ಕೊರೊನಾದ ಎರಡನೇ ಅಲೆ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡರು.

ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ
ಕೊರೊನಾ ವಿಚಾರದಲ್ಲಿ ಯಾರು ಎಡವಿದರು ಅನ್ನೋದು ಗೊತ್ತಿಲ್ಲ. ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಅನ್ನೋದು ಮಾತ್ರ ಗೊತ್ತಿದೆ. ಆದರೆ ಯಾರು ತಪ್ಪು ಮಾಡಿದ್ರು ಅನ್ನೋದ್ರ ವಿಶ್ಲೇಷಣೆ ಮಾಡುವ ಸಮಯ ಇದಲ್ಲ. ಎಲ್ಲರೂ ಒಗ್ಗಟ್ಟಿನಿಂದ ಎದುರಿಸುವ ಸಮಯ.

ನನ್ನ ಪ್ರಕಾರ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಜನ ಸಹಾಯ ಮಾಡ್ತಿದ್ದಾರೆ. ಹಾಗಂತ ಎಲ್ಲರೂ ಮಾಡಬೇಕು ಅಂತಲೂ ಇಲ್ಲ. ಮೊದಲು ನಮ್ಮ ಕೈಯಲ್ಲಿ ಆಗಿದ್ದನ್ನ ನಾವು ಮಾಡಬೇಕು. ಬೇರೆಯವರನ್ನ ಪ್ರಶ್ನೆ ಮಾಡುವ ಮುಂಚೆ ನಾವು ಎಷ್ಟು ಮಾಡಿದ್ದೇವೆ ಅನ್ನೋದನ್ನ ನೋಡಿಕೊಳ್ಳಬೇಕು. ಸಿನಿಮಾ ಇಂಡಸ್ಟ್ರಿಯಲ್ಲಿರೋರು ಕೆಲವರು ತಮ್ಮ ಕೈಯಲ್ಲಿ ಆಗುವ ಕೆಲಸವನ್ನ ಮಾಡುತ್ತಿದ್ದಾರೆ.

ನಾವು ಪ್ರತಿಯೊಂದು ವಿಚಾರವನ್ನೂ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ನಾನು ನಿತ್ಯ ತುಂಬಾ ವಿಚಾರಗಳನ್ನ ತಿಳಿದುಕೊಳ್ಳಲು ಬಯಸುತ್ತೇನೆ. ಅದನ್ನ ತಿಳುವಳಿಕೆ ಅನ್ನುತ್ತಾರೆ. ಎಲ್ಲದನ್ನೂ ಇನ್ನೊಬ್ಬರು ಹೇಳಿಕೊಡಬೇಕು ಅನ್ನೋದನ್ನ ಬಿಡೋಣ. ನಾವು ಬೇರೆಯವರಿಗೆ ಅಡ್ವೈಸ್ ಮಾಡೋದನ್ನ ಬಿಡಬೇಕು. ಇನ್​ಪ್ಯಾಕ್ಟ್ ವಿರಾಟ್ ಕೊಹ್ಲಿಗೂ ಅಡ್ವೈಸ್ ಮಾಡ್ತಾರೆ. ನಾವು ಫಸ್ಟ್ ಕರೆಕ್ಟ್ ಆಗೋಣ ಅಂತಾ ನಾನು ಹೇಳ್ತೀನಿ ಅಂದ್ರು ಸುದೀಪ್

The post ವಿರಾಟ್​ ಕೊಹ್ಲಿಗೂ ಅಡ್ವೈಸ್​ ಮಾಡ್ತೀರಾ.. ನಿಮ್ದು ನೋಡ್ಕೊಳಿ ಅಂದಿದ್ಯಾಕೆ ಕಿಚ್ಚ appeared first on News First Kannada.

Source: newsfirstlive.com

Source link