ವಿರಾಟ್​ ತಮ್ಮ ರಾಜೀನಾಮೆಯ ನಿರ್ಧಾರವನ್ನ ಮೊದಲು ತಿಳಿಸಿದ್ದು ಯಾರಿಗೆ ಗೊತ್ತಾ..?


ಮೊನ್ನೆ ಅಂತ್ಯವಾಗಿದ್ದ ನ್ಯೂಜಿಲೆಂಡ್​ ವಿರುದ್ಧ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾ ತಂಡ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು. ಈ ನಡುವೆ ಮಹತ್ವದ ನಿರ್ಧಾರ ಪ್ರಕಟಿಸಿರೋ ವಿರಾಟ್​ ಕೊಹ್ಲಿ, ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ನಿನ್ನೆ ವಿರಾಟ್​ ತಮ್ಮ ಟೆಸ್ಟ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಮೊದಲು ರಾಹುಲ್​ ದ್ರಾವಿಡ್​ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಹೌದು ವಿರಾಟ್​ ಕೊಹ್ಲಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸೋ ಮುನ್ನ ಟೀಂ ಇಂಡಿಯಾದ ಹಾಲಿ ಕೋಚ್​ ದ್ರಾವಿಡ್​ ಅವರಿಗೆ ತಿಳಿಸಿದ್ದಾರೆ. ನಂತರ ಬಿಸಿಸಿಐ ನ ಕಾರ್ಯದರ್ಶಿ ಜಯ್​ ಶಾ ಅವರಿಗೆ ಕರೆ ಮಾಡಿ ತಮ್ಮ ನಿಧಾರ್ರವನ್ನು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ಪ್ರತಿಷ್ಠೆಯಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ನಂತರ ಉಳಿದ ಎರಡು ಟೆಸ್ಟ್​​ಗಳಲ್ಲೂ ಮುಗ್ಗರಿಸಿ ಸರಣಿಯಲ್ಲಿ ಸೋಲು ಕಂಡಿತ್ತು. ಹೀಗಾಗಿ ಹರಿಣಗಳ ನಾಡಲ್ಲಿ 30 ವರ್ಷಗಳಿಂದ ಟೆಸ್ಟ್​ ಸರಣಿ ಗೆಲ್ಲುವ ಭಾರತದ ಕನಸು ಕನಸಾಗಿಯೇ ಉಳಿದುಕೊಂಡಿತು. ಹೀಗಾಗಿ ಪ್ರತಿಷ್ಠೆಯ ಸರಣಿಯನ್ನ ಗೆಲ್ಲಲಿಲ್ಲವೆಂಬ ಕಾರಣಕ್ಕೂ ವಿರಾಟ್​ ನಾಯಕತ್ವ ತ್ಯಜಿಸಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

 

News First Live Kannada


Leave a Reply

Your email address will not be published. Required fields are marked *