ಬಹಳ ನಿರೀಕ್ಷೆಯನ್ನಿಟ್ಟುಕೊಂಡು ಅಭಿಮಾನಿಗಳು ಕಾದಿದ್ದ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನ, ನಿರಾಸೆ ಮೂಡಿಸಿದೆ. ಆದ್ರೆ ವಿರಾಟ್​​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಫ್ಯಾನ್ಸ್​​ ಮಾತ್ರ, ಸಖತ್​ ಖುಷ್​ ಮೂಡ್​ನಲ್ಲಿದ್ದಾರೆ. ಒಬ್ಬರಿಗಿಂತ ಒಬ್ಬರು ಬೆಸ್ಟ್​ ಎಂದು ಕಿತ್ತಾಡಿಕೊಳ್ತಿದ್ದ ಫ್ಯಾನ್ಸ್​​ ಸಂತೋಷಕ್ಕೆ, ಕಾರಣ ಏನು?

ಭಾರತ, ನ್ಯೂಜಿಲೆಂಡ್​ ಫ್ಯಾನ್ಸ್​​ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್​​ ಲೋಕವೇ ನಿನ್ನೆಯಿಂದ ಆರಂಭವಾಗಬೇಕಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್​ ಫೈನಲ್​ಗಾಗಿ, ತುದಿಗಾಲಲ್ಲಿ ನಿಂತು ಕಾಯ್ತಾ ಇತ್ತು. ಆದ್ರೆ ವರುಣನ ಅವಕೃಪೆ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಈ ನಡುವೆ ಒಬ್ಬರಿಗಿಂತ ಒಬ್ಬರು ಬೆಸ್ಟ್​ ಎಂದು ಕಿತ್ತಾಡಿಕೊಳ್ತಿದ್ದ ವಿರಾಟ್​​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಫ್ಯಾನ್ಸ್​ ಮಾತ್ರ ಸಖತ್​​ ಖುಷ್​​ ಮೂಡ್​​ನಲ್ಲಿದ್ದಾರೆ.

ಸಾಮರಸ್ಯದ ಸಂದೇಶ ಸಾರಿದ ರೋಹಿತ್​-ವಿರಾಟ್​
ತುಂಬಾ ದಿನಗಳಲ್ಲ.. ಕಳೆದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಘಟನೆಗಳು ನಿಮಗೂ ನೆನಪಿರಬಹುದು. ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್​ ಶರ್ಮಾರನ್ನ ಕೈ ಬಿಟ್ಟ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ರೋಹಿತ್​ ಶರ್ಮಾ, ಮುಂಬೈ ಇಂಡಿಯನ್ಸ್​ ಪರ ಬ್ಯಾಟ್​ ಬೀಸ್ತಾ ಇದ್ರೂ. ಇಂಜುರಿ ಕಾರಣ ನೀಡಿ ತಂಡದಿಂದ ಕೊಕ್​ ನೀಡಿದ್ದು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ನ ಈ ನಡೆಯನ್ನ, ತೀವ್ರವಾಗಿ ಖಂಡಿಸಿದ್ರು.
ಈ ವಿವಾದ ಅಷ್ಟಕ್ಕೇ ನಿಲ್ಲಲಿಲ್ಲ. ಇದು ಕೊಹ್ಲಿ ವರ್ಸಸ್ ರೋಹಿತ್​ ಎಂಬ ತಿರುವನ್ನೂ, ಪಡೆದುಕೊಳ್ತು. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ನೀಡಿದ ಹೇಳಿಕೆ, ಚರ್ಚೆಯ ಸ್ವರೂಪವನ್ನ ತೀವ್ರವಾಗಿಸಿತ್ತು.

ನನಗೆ ರೋಹಿತ್​ ಲಭ್ಯತೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂಬುದಷ್ಟೇ ಅಂದು ಕೊಹ್ಲಿ ಹೇಳಿದ ಮಾತಿನ ಸಾರಾಂಶವಾಗಿತ್ತು. ಆದ್ರೆ ಮಹತ್ವದ ಪ್ರವಾಸಕ್ಕೆ ತಂಡದ ಆಯ್ಕೆಗೂ ಮುನ್ನ, ಸಹ ಆಟಗಾರರನ ಬಗ್ಗೆ ನಾಯಕನಿಗೆ ಮಾಹಿತಿಯೇ ಇಲ್ಲಾ ಅಂದ್ರೆ, ಏನರ್ಥ ಎಂಬ ಪ್ರಶ್ನೆ ಎದುರಾಗಿತ್ತು. ಇದಲ್ಲದೇ ಚುಟುಕು ಮಾದರಿಯಲ್ಲಿ ನಾಯಕನಾಗಿ ಯಶಸ್ಸು ಸಾಧಿಸಿರುವ ರೋಹಿತ್​ ಶರ್ಮಾಗೆ, ವಿರಾಟ್​ ಕೊಹ್ಲಿಯನ್ನ ಓವರ್​​ ಟೇಕ್​ ಮಾಡುವ ಸಾಧ್ಯತೆಯಿದೆ. ಹೀಗಾಗಿ ನಾಯಕ ಕೊಹ್ಲಿಯೇ, ರೋಹಿತ್​ ಆಯ್ಕೆಗೆ ತಡೆಯಾಗಿದ್ದಾರೆ ಎಂಬ ವಾದಗಳೂ ಚರ್ಚೆಯಲ್ಲಿದ್ವು. ಹಿಟ್​ಮ್ಯಾನ್​ ಆಯ್ಕೆಯ ಪ್ರಹಸನ ರೋಹಿತ್​ ವರ್ಸಸ್ ವಿರಾಟ್​​ ಎಂದೇ ಬಿಂಬಿತವಾಗಿದ್ವು.

ಆಸ್ಟ್ರೇಲಿಯಾ ಸರಣಿ ಮಾತ್ರವಲ್ಲ. ಅದಕ್ಕೂ ಹಿಂದಿನಿಂದಲೂ ಟಿ20 ಮಾದರಿಯಲ್ಲಿ ರೋಹಿತ್​ಗೆ ನಾಯಕ ಪಟ್ಟಕಟ್ಟಬೇಕೆಂಬ ಕೇಳಿ ಬಂದಿದ್ದ ಕೂಗು ಕೂಡ, ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು. ಅಭಿಮಾನಿ ವಲಯದಲ್ಲಿದ್ದ ಈ ವಾದವನ್ನ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​,​​ ಅಲ್ಲಗಳೆಯುತ್ತಲೇ ಬಂದಿತ್ತು. ಆದ್ರೆ ಈ ವಿಚಾರವಾಗಿ ಅಷ್ಟೇನೂ ತಲೆಕೆಡಿಸಿಕೊಳ್ಳದ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ನಿಲುವುಗಳು ಇಬ್ಬರ ಅಭಿಮಾನಿಗಳು ನಡುವಿನ ತಿಕ್ಕಾಟವನ್ನ ಹೆಚ್ಚಿಸಿತ್ತು.

ಈ ಎಲ್ಲಾ ಘಟನೆಗಳು ಘಟಿಸಿ ತಿಂಗಳುಗಳೇ ಉರುಳಿವೆ. ಈಗ ಮತ್ತೆ ರೋಹಿತ್​- ವಿರಾಟ್​​​ ಎಂಬ ಹ್ಯಾಷ್​​ಟ್ಯಾಗ್​ಗಳು, ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿವೆ. ಈ ಬಾರಿ ತಿಕ್ಕಾಟದ ಕಾರಣದಿಂದಾಗಿಯಲ್ಲ..! ಬದಲಾಗಿ ವಿರಾಟ್​ – ರೋಹಿತ್​ ಸ್ನೇಹಿತರು ಎಂಬ ಕಾರಣಕ್ಕೆ.

ನೆಟ್ಸ್​​ನಲ್ಲಿ ರೋಹಿತ್​ಗೆ, ವಿರಾಟ್​ ಬ್ಯಾಟಿಂಗ್​ ಟಿಪ್ಸ್​​..!
ಯೆಸ್​​..! ಆರಂಭದಲ್ಲಿ ಇಬ್ಬರೂ ಅಭ್ಯಾಸದ ವೇಳೆ ನಡೆಸಿದ ಮಾತುಕತೆ, ಹಾಗೂ ಬಳಿಕ ರೋಹಿತ್​ ಬ್ಯಾಟಿಂಗ್​ ವೇಳೆ ಕೊಹ್ಲಿ ಬೌಲಿಂಗ್​ ಮಾಡಿದ್ದು..! ಈ ಎರಡನ್ನ ಒಳಗೊಂಡ ಒಂದು ಚಿಕ್ಕ ವಿಡಿಯೋ, ಇಡೀ ಚಿತ್ರಣವನ್ನೇ ಬದಲಿಸಿದೆ. ಇಷ್ಟು ದಿನ ರೋಹಿತ್​ ವರ್ಸಸ್ ವಿರಾಟ್​ ಎಂದು ಕಚ್ಚಾಡಿಕೊಳ್ತಿದ್ದ ಫ್ಯಾನ್ಸ್​​, ರೋಹಿತ್​ – ಕೊಹ್ಲಿ ಭಾಯಿ ಭಾಯಿ ಎಂದು ಹೇಳ್ತಿದ್ದಾರೆ.

ಇಂಗ್ಲೆಂಡ್​ ಸರಣಿಯಲ್ಲಿ ವಿರಾಟ್​ಗೆ ಟಿಪ್ಸ್​​ ನೀಡಿದ್ರು ರೋಹಿತ್​!
ಟೆಸ್ಟ್​​ ಚಾಂಪಿಯನ್​ ಶಿಪ್​ ಫೈನಲ್​ಗೂ ಮುನ್ನ ನಡೆದ ಅಭ್ಯಾಸದಲ್ಲಿ, ರೋಹಿತ್​ಗೆ ಕೊಹ್ಲಿ ಟಿಪ್ಸ್​ ನೀಡಿದ್ರೆ, ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ರೋಹಿತ್​, ವಿರಾಟ್​ಗೆ ಟಿಪ್ಸ್​ ನೀಡಿದ್ರು. ಇಂಗ್ಲೆಂಡ್​ ವಿರುದ್ಧದ 4ನೇ ಏಕದಿನ ಪಂದ್ಯದ ವೇಳೆ ನಾಯಕ ವಿರಾಟ್​ ಕೊಹ್ಲಿ ಗೊಂದಲಕ್ಕೆ ಸಿಲುಕಿದ್ರು. ಆ ವೇಳೆ ನಾಯಕನ ನೆರವಿಗೆ ಬಂದ ಉಪನಾಯಕ ರೋಹಿತ್​ ಶರ್ಮಾ, ಅಗತ್ಯ ಸಲಹೆಗಳನ್ನ ನೀಡಿದ್ರು. ಈ ವಿಚಾರವೂ ಅಭಿಮಾನಿಗಳಲ್ಲಿದ್ದ ವಿರಾಟ್​ ವರ್ಸಸ್ ರೋಹಿತ್​ ತಿಕ್ಕಾಟವನ್ನ, ತಿಳಿಗೊಳಿಸಿತ್ತು.

ಅದೇನೆ ಇರಲಿ.. ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಕ್ರಿಕೆಟ್​​ನಲ್ಲಿ ನಮ್ಮ ದೇಶದ ಪ್ರತಿನಿಧಿಗಳು. ಪಂದ್ಯದಲ್ಲಿ ಈ ಇಬ್ಬರ ಪ್ರದರ್ಶನದ ಮೇಲೆ ಭಾರತದ ಗೆಲುವು-ಸೋಲು ನಿರ್ಧಾರವಾಗುತ್ತೆ ಅನ್ನೋದು, ಅಲ್ಟಿಮೇಟ್​​ ಟ್ರೂಥ್​​..! ಹೀಗಾಗಿ ಇಬ್ಬರ ನಡುವಿನ ಭಾಂದವ್ಯ ಗಟ್ಟಿಯಾಗಿರಲಿ ಅನ್ನೋದು ಎಲ್ಲರ ಆಶಯ.

The post ವಿರಾಟ್​ Vs ರೋಹಿತ್​ ಸಂಘರ್ಷಕ್ಕೆ ಬಿತ್ತು ಬ್ರೇಕ್​ -ಸದಾ ಕಚ್ಚಾಡಿಕೊಳ್ತಿದ್ದ ಫ್ಯಾನ್ಸ್ ಫುಲ್​ ಖುಷ್​​! appeared first on News First Kannada.

Source: newsfirstlive.com

Source link