ಸೌತ್ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ನಲ್ಲಿ ಕೊನೆಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಬಾರಿಸಿದ್ರು. ಆರಂಭದಿಂದಲೇ ಸತತ ಒಂದರ ಮೇಲೊಂದು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಆಸರೆಯಾದ ಕೊಹ್ಲಿ ತಾಳ್ಮೆಯ ಆಟವಾಡಿದರು.
ಈ ಸಂಬಂಧ ಮಾತಾಡಿದ ಮಾಜಿ ಕ್ರಿಕೆಟರ್ ಸುನೀಲ್ ಗವಾಸ್ಕರ್, ಇದು ಕಳೆದ 5-6 ವರ್ಷಗಳಲ್ಲೇ ವಿರಾಟ್ ಕೊಹ್ಲಿ ಜೀವನದ ಅತ್ಯಂತ ಕಠಿಣ ಇನ್ನಿಂಗ್ಸ್. ವಿರಾಟ್ ಅರ್ಧಶತಕ ಗಳಿಸೋಕೆ ಬರೋಬ್ಬರಿ 158 ಎಸೆತಗಳು ಆಡಿದರು. ಈ ರೀತಿಯ ತಾಳ್ಮೆಯ ಆಟ ಟೀಂ ಇಂಡಿಯಾ ನಾಯಕರಲ್ಲಿ ಕಂಡು ಬಂದಿರುವುದು ಅಪರೂಪ ಎಂದರು.
ವಿರಾಟ್ ಸಾಮಾನ್ಯವಾಗಿ ಕ್ರೀಸ್ನಲ್ಲಿ ನಿಂತರೆ 50ರ ಸ್ಟ್ರೈಕ್ ರೇಟ್ನಲ್ಲಿ ಆಡುತ್ತಾರೆ. ಆದರೆ, ಈ ಬಾರಿ ಮಾತ್ರ ಪಿಚ್ ಪರಿಸ್ಥಿತಿ ಅವಲೋಕಿಸಿ ಬೌಲರ್ಸ್ ಉತ್ತಮ ಗೌರವಿಸಿ ಕೊನೆಗೂ ಅರ್ಧಶತಕ ಬಾರಿಸಿದರು ಎಂದು ಹೊಗಳಿದ್ರು ಗವಾಸ್ಕರ್.
The post ವಿರಾಟ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗವಾಸ್ಕರ್ ಏನಂದ್ರು…? appeared first on News First Kannada.