ಇಂಡೋ-ಆಫ್ರಿಕನ್ ಟೆಸ್ಟ್ ಸರಣಿ ಅಂತ್ಯ ಕಂಡಿದ್ರೂ, ಚರ್ಚೆಗಳು ನಿಂತಿಲ್ಲ. ಅದರಲ್ಲೂ 3ನೇ ದಿನದಾಟದಲ್ಲಾದ ಡಿಆರ್ಎಸ್ ಡ್ರಾಮಾ ತೀವ್ರ ಚರ್ಚೆ ಹುಟ್ಟು ಹಾಕಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡೆದು ಕೊಂಡ ನಡೆ ಸರೀನಾ? ತಪ್ಪಾ? ಅನ್ನೋ ಪ್ರಶ್ನೆ ಹುಟ್ಟಿದೆ.
3ನೇ ದಿನದಾಟದ ಸೌತ್ ಆಫ್ರಿಕಾ 2ನೇ ಇನ್ನಿಂಗ್ಸ್ನ 21ನೇ ಓವರ್ನಲ್ಲಿ ನಡೆದ ಘಟನೆಯಿದು. ಅಶ್ವಿನ್ ಎಸೆದ 21ನೇ ಓವರ್ನ 4 ಎಸೆತದಲ್ಲಿ ಆಫ್ರಿಕನ್ ನಾಯಕ ಡೀನ್ ಎಲ್ಗರ್ ಎಬಿ ಬಲೆಗೆ ಬೀಳ್ತಾರೆ. ಆನ್ ಫೀಲ್ಡ್ ಅಂಪೈಯರ್ ಮಾವ್ರೀಸ್ ಎರಾಸ್ಮಸ್ ಔಟ್ ಎಂದು ತೀರ್ಪು ಒಪ್ಪದ ಎಲ್ಗರ್ ಡಿಆರ್ಎಸ್ ತೆಗೆದುಕೊಳ್ತಾರೆ. ಲೈನ್ನಲ್ಲಿ ಬಿದ್ದ ಬಾಲ್ ಒವರ್ ದ ವಿಕೆಟ್ ಹಾದು ಹೋಗಿದ್ದು ಡಿಆರ್ಎಸ್ನಲ್ಲಿ ಕಂಡು ಬರುತ್ತೆ. ಹೀಗಾಗಿ 3ನೇ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡ್ತಾರೆ. ಇದು ಇಡೀ ಟೀಮ್ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗುತ್ತದೆ.
ಎಲ್ಗರ್ ಮಂಡಿಯ ಕೆಳಗೆ ತಾಗಿದ ಚೆಂಡು ಅಷ್ಟು ಎತ್ತರಕ್ಕೆ ಹೋಗೋದ್ದು ಸ್ವತಃ ಆನ್ಪೀಲ್ಡ್ ಅಂಪೈರ್ ಎರಾಸ್ಮಸ್ರಲ್ಲೂ ಆಶ್ಚರ್ಯ ಹುಟ್ಟು ಹಾಕುತ್ತೆ. ಇಷ್ಟೇ ಅಲ್ಲ.. ಈ ತೀರ್ಪು ಟೀಂ ಇಂಡಿಯಾ ಆಟಗಾರರ ಪಿತ್ತವನ್ನ ನೆತ್ತಿಗೇರಿಸುತ್ತೆ. ಅಶ್ವಿನ್, ರಾಹುಲ್ ತಮ್ಮದೇ ಶೈಲಿಯಲ್ಲಿ ಅಸಮಾಧಾನ ಹೊರ ಹಾಕಿದ್ರೆ, ನಾಯಕ ವಿರಾಟ್ ಕೊಹ್ಲಿ ತುಸು ಹೆಚ್ಚೇ ಆಕ್ರೋಶಗೊಳ್ತಾರೆ. ಇಷ್ಟೇ ಅಲ್ಲ. ಸ್ಟಂಪ್ ಮೈಕ್ ಬಳಿ ಬಂದು ಸೂಪರ್ ಸ್ಪೋರ್ಟ್ಸ್ ಪ್ರೊಡಕ್ಷನ್ ಟೀಮ್ ವಿರುದ್ಧ ಖಾರವಾದ ಮಾತುಗಳನ್ನಾಡ್ತಾರೆ.
ಇದೇ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
‘ರೋಲ್ ಮಾಡೆಲ್ ಆಗಲು ಸಾಧ್ಯವಿಲ್ಲ’
‘ಕೊಹ್ಲಿ ಒಬ್ಬ ಇಮ್ಯೆಚುರ್. ತಂಡದ ನಾಯಕನಾಗಿ ಸ್ಟಂಪ್ಮೈಕ್ನಲ್ಲಿ ಈ ರೀತಿ ಹೇಳಿದ್ದು ಸರಿಯಲ್ಲ. ಈ ರೀತಿ ಮಾಡುವುದರಿಂದ ಯುವ ಆಟಗಾರರಿಗೆ ರೋಲ್ ಮಾಡೆಲ್ ಆಗಲು ಸಾಧ್ಯವಿಲ್ಲ’
ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ