ಟೀಮ್ ಇಂಡಿಯಾ ಹಾಗೂ ವಿದೇಶಿ ಆಟಗಾರರ ಪೈಕಿ ಅತಿಹೆಚ್ಚು ಆದಾಯಗಳಿಸುವ ಆಟಗಾರ ವಿರಾಟ್ ಕೊಹ್ಲಿ. ವಾರ್ಷಿಕವಾಗಿ ಇತರೆ ಮೂಲಗಳಿಂದ ಸುಮಾರು 60 ಕೋಟಿಗೂ ಅಧಿಕ ಹಣ ಗಳಿಸುವ ಕೊಹ್ಲಿ, ವಿಶ್ವ ಕ್ರಿಕೆಟ್​ನಲ್ಲಿ ವಾರ್ಷಿಕವಾಗಿ ಅತಿ ಹೆಚ್ಚು ಹಣವನ್ನ ಸಂಪಾದಿಸುವವರಲ್ಲಿ ಮೊದಲಿಗರಾಗಿದ್ದಾರೆ.

ಆದ್ರೆ, ಭಾರತೀಯ ಕ್ರಿಕೆಟಿಗರಲ್ಲಿ ರಿಚೆಸ್ಟ್​ ಕ್ರಿಕೆಟಿಗರ ಪಟ್ಟಿಯಲ್ಲಿ ಮಾತ್ರ ವಿರಾಟ್​ ನಂ1 ಹಾಗೂ ನಂ.2 ಸ್ಥಾನದಲ್ಲೂ ಕಾಣಿಸಿಕೊಂಡಿಲ್ಲ.. ವಿಶ್ವ ಕ್ರಿಕೆಟಿಗರಲ್ಲಿ ಶ್ರೀಮಂತ ಕ್ರಿಕೆಟರ್​​ ಪಟ್ಟಿಯಲ್ಲಿ ಗಾಡ್​ ಆಫ್​ ಕ್ರಿಕೆಟ್ ಸಚಿನ್ ತೆಂಡುಲ್ಕರ್ ನಂ.1 ಸ್ಥಾನದಲ್ಲಿದ್ದಾರೆ. ಸುಮಾರು 1090 ಕೋಟಿ ಮೌಲ್ಯದಷ್ಟು ಆಸ್ತಿ ಹೊಂದಿದ್ದಾರೆ. ಕ್ರಿಕೆಟ್​ನಿಂದ ನಿವೃತ್ತಿಯಾಗಿ ಹಲವು ವರ್ಷಗಳೇ ಕಳೆದರೂ ವಾರ್ಷಿಕ ಸುಮಾರು 60 ಕೋಟಿ ಹಣ ಜಾಹೀರಾತು ಹಾಗೂ ಇತರೆ ಮೂಲಗಳಿಂದ ಸಂಪಾದಿಸುತ್ತಾರೆ. ನಂತರದ ಸ್ಥಾನದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿ ಕಾಣಿಸಿಕೊಂಡಿದ್ದು ಒಟ್ಟು 767 ಕೋಟಿ ಆಸ್ತಿ ಮೌಲ್ಯವನ್ನ ಹೊಂದಿದ್ದಾರೆ.

ಇನ್ನೂ 3ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದು, ಅಂದಾಜು 638 ಕೋಟಿ ಮೌಲ್ಯ ಆಸ್ತಿ ಹೊಂದಿದ್ದಾರೆ. ವಿಶ್ವ ಕ್ರಿಕೆಟ್​​ನ ಸಕ್ಸಸ್​ಫುಲ್ ಕ್ಯಾಪ್ಟನ್ ಎನಿಸಿಕೊಂಡಿರುವ ರಿಕಿ ಪಾಂಟಿಂಗ್ 492 ಕೋಟಿ, ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ 454 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ವಿಶ್ವ ಕ್ರಿಕೆಟ್​​ನ ರಿಚೆಸ್ಟ್​ ಕ್ರಿಕೆಟರ್​ಗಳು ಎನಿಸಿಕೊಂಡಿದ್ದಾರೆ.

ಇನ್ನೂ ಭಾರತೀಯ ಕ್ರಿಕೆಟಿಗರ ಪೈಕಿ ಸಚಿನ್, ಧೋನಿ, ಕೊಹ್ಲಿ ಕ್ರಮವಾಗಿ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡರೆ, ನಂತರದ 4 ಹಾಗೂ 5ನೇ ಸ್ಥಾನದಲ್ಲಿ ಸುಮಾರು 277 ಕೋಟಿ ಆಸ್ತಿ ಮೌಲ್ಯ ಹೊಂದಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ನಂತರದ ಸ್ಥಾನದಲ್ಲಿ 245 ಕೋಟಿ ಮೌಲ್ಯದ ಆಸ್ತಿಯ ಒಡೆಯ ಯುವರಾಜ್ ಸಿಂಗ್ ಕಾಣಿಸಿಕೊಳ್ಳುತ್ತಾರೆ.

The post ವಿರಾಟ್, ಧೋನಿ ಅಲ್ಲ..! ವಿಶ್ವ ಕ್ರಿಕೆಟ್​​ನ ಸಾಹುಕಾರ ಯಾರು ಗೊತ್ತಾ..? appeared first on News First Kannada.

Source: newsfirstlive.com

Source link